ವಾಸ್ತು ಶಾಸ್ತ್ರದಲ್ಲಿ, ಸಂಪತ್ತನ್ನು ಹೆಚ್ಚಿಸಲು ಅನೇಕ ವಾಸ್ತು ಪರಿಹಾರಗಳಿವೆ. ಅಂತೆಯೇ, ವಾಸ್ತು ಶಾಸ್ತ್ರವು ವ್ಯಕ್ತಿಯ ಅಭ್ಯಾಸಗಳ ಬಗ್ಗೆ ಕೆಲವು ನಿಯಮಗಳನ್ನು ಸಹ ನೀಡಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ, ಹಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ, ಪ್ರಗತಿಯು (Progress) ತಪ್ಪಿಹೋಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತುವು ವ್ಯಕ್ತಿಯ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅದರ ನಿಯಮಗಳನ್ನು ಪಾಲಿಸದಿದ್ದರೆ, ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆ (Financial Problem) ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ತಪ್ಪು ಅಭ್ಯಾಸಗಳಿಂದ ಅನೇಕ ಬಾರಿ, ಕೆಲವು ವಸ್ತುಗಳನ್ನು ನಾವು ತಪ್ಪಿ, ಮರೆತು ತೆರೆದಿಡುತ್ತೇವೆ. ಹಾಗೆ ಮಾಡುವುದರಿಂದ ಪ್ರಗತಿ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಯಾವಾಗಲೂ ಮುಚ್ಚಬೇಕು ಎಂದು ತಿಳಿಯಿರಿ.
ಈ ವಸ್ತುಗಳನ್ನು ಎಂದಿಗೂ ತೆರೆದಿಡಬೇಡಿ.
ಪುಸ್ತಕ ತೆರೆದಿಡಬೇಡಿ
ಅನೇಕರು ಪುಸ್ತಕಗಳನ್ನು ಓದಲು ತುಂಬಾ ಇಷ್ಟಪಡುತ್ತಾರೆ. ಆದರೆ ಅನೇಕ ಬಾರಿ ಅವರು ಓದಿದ ಬಳಿಕ, ಪುಸ್ತಕವನ್ನು ಸಾಮಾನ್ಯವಾಗಿ ತೆರೆದಿಟ್ಟು ಬರುತ್ತಾರೆ. ಆದರೆ ವಾಸ್ತು ಪ್ರಕಾರ, ಇದನ್ನು ಮಾಡಬಾರದು. ಏಕೆಂದರೆ ಪುಸ್ತಕಗಳು ಬುದ್ಧಿವಂತಿಕೆಯ (Intelligent) ಗ್ರಹವಾದ ಬುಧ ಗ್ರಹಕ್ಕೆ ಸಂಬಂಧಿಸಿವೆ. ಆದ್ದರಿಂದ, ಪುಸ್ತಕಗಳನ್ನು ತೆರೆದಿಡುವುದರಿಂದ ಬುಧ ಗ್ರಹ ದುರ್ಬಲವಾಗುತ್ತಾನೆ. ಇದರಿಂದ ವ್ಯಕ್ತಿಯ ಮನಸ್ಸು ದುರ್ಬಲಗೊಳ್ಳುತ್ತದೆ. ಇದರೊಂದಿಗೆ, ಏಕಾಗ್ರತೆಯ (Concentration) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅಲ್ಮೆರಾ
ಅನೇಕರು ಬಟ್ಟೆಗಳು ಅಥವಾ ಹಣವನ್ನು ಬೀರುವಿನಲ್ಲಿ ಇರಿಸಿದ ನಂತರ ಅದನ್ನು ತೆರೆದಿಡುತ್ತಾರೆ. ಆದರೆ ಅದನ್ನು ಮಾಡಲೇಬಾರದು. ಕಪಾಟನ್ನು ಅಥವಾ ಅಲ್ಮೆರಾವನ್ನು ತೆರೆದಿಡುವುದರಿಂದ ತಾಯಿ ಲಕ್ಷ್ಮಿಗೆ (Goddess Lakshmi) ಕೋಪ ತರಿಸುತ್ತದೆ. ಇದರಿಂದ ನಿಮಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ.
ಆಹಾರ
ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವಂತೆ, ಆಹಾರವನ್ನು ಎಂದಿಗೂ ತೆರೆದಿಡಬಾರದು. ಏಕೆಂದರೆ ಹಾಗೆ ಮಾಡುವುದರಿಂದ ತಾಯಿ ಅನ್ನಪೂರ್ಣೆಗೆ ಅವಮಾನವಾಗುತ್ತದೆ. ಇದರೊಂದಿಗೆ, ತೆರೆದ ಆಹಾರದಲ್ಲಿ (Food) ಕೀಟಗಳು ಬೀಳುವ ಅಪಾಯವೂ ಇದೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ಹಾಲು
ವಾಸ್ತು ಶಾಸ್ತ್ರದ ಪ್ರಕಾರ, ಹಾಲು ಅಥವಾ ಮೊಸರನ್ನು ಎಂದಿಗೂ ತೆರೆದಿಡಬಾರದು. ಯಾಕಂದ್ರೆ ಇದು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ಹಾಗಾಗಿ, ಹಾಲು, ಮೊಸರು, ಶುಕ್ರ ಮತ್ತು ಚಂದ್ರನ ದೋಷಗಳನ್ನು ಎದುರಿಸಬೇಕಾಗುತ್ತದೆ, ಇದರಿಂದಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (health problem) ಬೀರುತ್ತದೆ.
ಉಪ್ಪು
ಉಪ್ಪು ಚಂದ್ರನಿಗೆ (Moon) ಸಂಬಂಧಿಸಿದೆ ಎಂದು ನಂಬಲಾಗಿದೆ. ಆದ್ದರಿಂದ ಅದನ್ನು ಎಂದಿಗೂ ಉಪ್ಪನ್ನು ತೆರೆದಿಡಬೇಡಿ. ಯಾವಾಗಲೂ ಅದನ್ನು ಮುಚ್ಚಿಡಿ. ಇಲ್ಲದಿದ್ದರೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತೆ. ಆದುದರಿಂದ ಉಪ್ಪನ್ನು ಬಳಕೆ ಮಾಡಿದ ಮೇಲೆ ಯಾವಾಗಲೂ ಅದನ್ನು ಮುಚ್ಚಿಡಿ.