ಪ್ರತಿಯೊಬ್ಬರೂ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಜನರು ಇದಕ್ಕಾಗಿ ಹಗಲಿರುಳೂ ಶ್ರಮಿಸುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಕಷ್ಟ ಪಟ್ಟರೂ, ಪರಿಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಹಣ ಕೈಲಿ ನಿಲ್ಲುವುದಿಲ್ಲ. ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಬರಬೇಕಾದ ಹಣ ಬಾಕಿ ಉಳಿಯುತ್ತದೆ. ಆದರೆ ನಿಮ್ಮ ಈ ಸಮಸ್ಯೆಗಳಿಗೆ ವಾಸ್ತು ದೋಷಗಳೂ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
vastu tips
ಹೌದು, ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಪ್ರತಿದಿನ ಮಾಡುವ ಕೆಲ ಕೆಲಸಗಳು ಅಥವಾ ಮನೆಯಲ್ಲಿ ಇಟ್ಟಿರುವ ಕೆಲವು ವಸ್ತುಗಳನ್ನು ವಾಸ್ತು ಪ್ರಕಾರ ಸರಿ ಇರುವುದಿಲ್ಲ. ಅವುಗಳನ್ನು ಸರಿಪಡಿಸಿಕೊಂಡರೆ ವಾಸ್ತು ದೋಷಗಳನ್ನು ತಪ್ಪಿಸಬಹುದು. ಇಂತಹ ಅನೇಕ ಕ್ರಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ವಾಸ್ತು ದೋಷದಿಂದ ತಪ್ಪಿಸಿಕೊಂಡರೆ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಈ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುವ ಮೂಲಕ ಹೆಚ್ಚು ಧನಾತ್ಮಕ ಶಕ್ತಿಯನ್ನು ರಚಿಸಲು ವಾಸ್ತು ಸಲಹೆಗಳು ಪ್ರೇರೇಪಿಸುತ್ತವೆ. ಹಾಗಾದರೆ ಹಣದ ಸಮಸ್ಯೆ ನೀಗುವ ನಿಟ್ಟಿನಲ್ಲಿ ವಾಸ್ತುವಿನ ಕೆಲವು ಅದ್ಭುತ ಪರಿಹಾರಗಳ(Vastu remedies) ಬಗ್ಗೆ ತಿಳಿಯೋಣ..
ತಾಯಿ ಲಕ್ಷ್ಮಿ(Goddess Lakshmi)ಯ ಆಶೀರ್ವಾದ ಸದಾ ಇರಬೇಕೆಂದರೆ ರಾತ್ರಿ ಮಲಗುವ ಮುನ್ನ ಈ ವಾಸ್ತು ಕ್ರಮಗಳನ್ನು ಮಾಡಿ..
ವಾಸ್ತು ಶಾಸ್ತ್ರ, ಮನೆಯ ಪ್ರತಿಯೊಂದು ಮೂಲೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ಮುನ್ನ ಅಡುಗೆ ಮನೆ, ಬಾತ್ ರೂಂ ಹಾಗೂ ಮನೆಯ ಇತರ ಭಾಗಗಳಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ತೊಲಗಿಸಬಹುದು.
ತುಪ್ಪದ ದೀಪ
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಸಂಜೆ ಮುಖ್ಯ ಬಾಗಿಲಿನಲ್ಲಿ ಹಸುವಿನ ತುಪ್ಪ(Ghee) ಬಳಸಿ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸುತ್ತಾಳೆ.
ಅಡುಗೆಮನೆ
ರಾತ್ರಿ ಮಲಗುವ ಮೊದಲು, ಅಡುಗೆಮನೆಯಲ್ಲಿ ಎಲ್ಲ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಿ. ಇದರಿಂದ ಲಕ್ಷ್ಮೀ ಸಂತುಷ್ಟಳಾಗುತ್ತಾಳೆ. ಪಾತ್ರೆಗಳನ್ನು ತೊಳೆಯದೇ ಬಿಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ನಕಾರಾತ್ಮಕ ಶಕ್ತಿಯು ಮನೆಯಲ್ಲಿ ತುಂಬುತ್ತದೆ. ಕೊಳಕು ಪಾತ್ರೆಗಳು ಆರ್ಥಿಕ ಸಮಸ್ಯೆಗಳನ್ನು ತರುತ್ತವೆ. ಅದಕ್ಕಾಗಿಯೇ ರಾತ್ರಿಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರವೇ ಮಲಗಬೇಕು.
ಸಾಲದ(debt) ಹೊರೆಯಿಂದ ನೀವು ತೊಂದರೆಗೀಡಾಗಿದ್ದರೆ, ರಾತ್ರಿ ಮಲಗುವ ಮೊದಲು ಅಡುಗೆಮನೆಯಲ್ಲಿ ನೀರು ತುಂಬಿದ ಬಕೆಟ್ ಇರಿಸಿ. ವಾಸ್ತು ಪ್ರಕಾರ ಹೀಗೆ ಮಾಡಿದರೆ ಸಾಲದಿಂದ ಮುಕ್ತಿ ಸಿಗುತ್ತದೆ.
ರಾತ್ರಿ ಮಲಗುವ ಮುನ್ನ ಮನೆಯ ಬಾಗಿಲಿನಿಂದ ಚಪ್ಪಲಿ ತೆಗೆಯಿರಿ. ಅಲ್ಲದೆ, ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಮನೆ ಪ್ರಗತಿಯಾಗುತ್ತದೆ.
ದಾನ ಮಾಡುವುದು ಒಳ್ಳೆಯಗೇ. ಆದರೆ, ಸಾಯಂಕಾಲದಲ್ಲಿ ಎಂದಿಗೂ ದಾನ ಮಾಡಬೇಡಿ, ಅದು ಬಡತನವನ್ನು ತರುತ್ತದೆ. ಇದಲ್ಲದೇ ಹಾಲು, ಮೊಸರು ಮತ್ತು ಉಪ್ಪನ್ನು ಬೇಡಿಕೆಯ ಮೇಲೂ ನೀಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಹದಗೆಡಬಹುದು.
ಮಲಗುವ ಕೋಣೆಯಲ್ಲಿ
ರಾತ್ರಿ ಮಲಗುವ ಮುನ್ನ ನಿಮ್ಮ ಮಲಗುವ ಕೋಣೆಯಲ್ಲಿ ಕರ್ಪೂರ(Camphor)ವನ್ನು ಉರಿಸಿ. ಹೀಗೆ ಮಾಡುವುದರಿಂದ ಮಲಗುವ ಕೋಣೆಯ ವಾತಾವರಣವು ಪರಿಶುದ್ಧವಾಗಿರುತ್ತದೆ ಮತ್ತು ಮಾನಸಿಕ ಶಾಂತಿಯು ಪ್ರಾಪ್ತವಾಗುತ್ತದೆ. ಇದರೊಂದಿಗೆ ಮಾ ಲಕ್ಷ್ಮಿಯ ವಿಶೇಷ ಆಶೀರ್ವಾದ ಸಿಗುತ್ತದೆ.
ಬಾತ್ರೂಮ್ ಪರಿಹಾರ
ವಾಸ್ತು ಶಾಸ್ತ್ರ, ಬಕೆಟ್ ಅನ್ನು ಬಾತ್ ರೂಂನಲ್ಲಿ ಖಾಲಿ ಇಡಬಾರದು. ರಾತ್ರಿ ಮಲಗುವ ಮುನ್ನ ಬಾತ್ ರೂಂನಲ್ಲಿ ಬಕೆಟ್ ತುಂಬಿ ಇಟ್ಟರೆ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಸ್ನಾನದ ಬಕೆಟ್ ಅನ್ನು ಎಂದಿಗೂ ಖಾಲಿ ಇಡಬೇಡಿ.
ರಾತ್ರಿ ಮಲಗುವ ಮುನ್ನ ಕೈಕಾಲುಗಳನ್ನು ತೊಳೆದು, ಮನೆದೇವರನ್ನು ಹಾಗೂ ನಿಮ್ಮ ಇಷ್ಟದೇವರನ್ನು ಸ್ಮರಿಸಿ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯು ರವಾನೆಯಾಗುತ್ತದೆ ಮತ್ತು ನಮಗೆ ಒಳ್ಳೆಯ ನಿದ್ದೆ ಬರುತ್ತದೆ.