ಪ್ರತಿಯೊಬ್ಬರ ಜೀವನದಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತೆ. ಕೆಲವರು ಅದನ್ನ ನಂಬಿದ್ರೆ, ಮತ್ತೆ ಕೆಲವರು ಅದನ್ನ ನಂಬಲ್ಲ ಅಷ್ಟೇ. ಮನೆ, ಕಚೇರಿ ಹೀಗೆ ಎಲ್ಲಾ ಕಡೆ ವಾಸ್ತು ಮುಖ್ಯವಾಗಿದೆ. ಅದೇ ರೀತಿ ನಮ್ಮ ಜೀವನದಲ್ಲೂ ವಾಸ್ತು ಮುಖ್ಯವಾಗಿದೆ. ಜೀವನ ಚೆನ್ನಾಗಿರಬೇಕು ಅಂದ್ರೆ, ಈ ವಾಸ್ತು ಟಿಪ್ಸ್ (vastu tips) ಫಾಲೋ ಮಾಡಿ.
ಗೋಧೂಳಿ ಮುಹೂರ್ತ: ಯಾವತ್ತೂ ಗೋಧೂಳಿ ಮುಹೂರ್ತದಲ್ಲಿ ಅಥವಾ ಸೂರ್ಯ ಅಸ್ತಮಾನದ (sun setting time) ಸಮಯದಲ್ಲಿ ಬಟ್ಟೆ ವಾಶ್ ಮಾಡೋದು, ಉಗುರು ಕಟ್ ಮಾಡೋದು ಅಥವಾ ಹೇರ್ ಕಟ್ ಮಾಡೋದನ್ನು ಮಾಡಬೇಡಿ.
ಹೇರ್ ಕಟ್: ನಿಮ್ಮ ಬಳಿ ತುಂಡಾದ ಬಾಚಣಿಕೆ ಇದ್ರೆ ಅದನ್ನು ಕೂಡಲೇ ಬಿಸಾಕಿ. ಯಾವತ್ತೂ ಸಹ ತುಂಡಾದ ಬಾಚಣಿಕೆ ಬಳಸಿ ತಲೆ ಬಾಚೋದು, ಹೇರ್ ಗ್ರೂಮ್ ಮಾಡೋದು, ಕತ್ತರಿಸೋದನ್ನು ಮಾಡಬೇಡಿ.
ರಾತ್ರಿ ಬಟ್ಟೆ ಒಣಗಲು ಬಿಡಬೇಡಿ: ಕೆಲವರು ಬಟ್ಟೆಗಳನ್ನು ರಾತ್ರಿಯಾದರೂ ಒಣಗಲು ಹಾಕಿರುತ್ತಾರೆ. ಆದರೆ ಸಂಜೆಯೊಳಗೆ ಬಟ್ಟೆಗಳನ್ನು ಮಡಚಿ ಇಡೋದು ಉತ್ತಮ. ಯಾಕಂದ್ರೆ ಬಟ್ಟೆಗಳು ಬೇಗನೆ ನೆಗೆಟಿವ್ ಎನರ್ಜಿಗಳನ್ನು ಹೀರಿಕೊಳ್ಳುತ್ತದೆ.
ಅತಿಥಿಗಳ ಸ್ವಾಗತ: ಅತಿಥಿಗಳು ಮನೆಗೆ ಬಂದಾಗ ಅವರನ್ನು ಬಾಗಿಲ ಬಳಿ ನಿಂತುಕೊಂಡು (inside the door) ಸ್ವಾಗತಿಸಬೇಕು. ಅದೆ ರೀತಿ ಅತಿಥಿಗಳು ಮನೆಯಿಂದ ಹೊರಡುವಾಗ ಬಾಗಿಲಿನ ಹೊರಗೆ ನಿಂತು ಅವರನ್ನು ಬಿಳ್ಕೊಡೋದು ಸರಿಯಾದ ವಿಧಾನ.
ತುಂಡಾದ ಕನ್ನಡಿ: ಯಾವತ್ತೂ ಮನೆಯೊಳಗೆ ಅದರಲ್ಲೂ ಬಾತ್ ರೂಮ್ ನಲ್ಲಿ ತುಂಡಾದ ಕನ್ನಡಿಯನ್ನು ಇಡಬೇಡಿ. ಇದು ನೆಗೆಟಿವಿಟಿಯನ್ನು ಆಹ್ವಾನಿಸುತ್ತದೆ. ಅಲ್ಲದೇ ಹಣದ ಸಮಸ್ಯೆ (financial problem) ಕೂಡ ಎದುರಿಸಬೇಕಾಗಿ ಬರಬಹುದು. ಆದುದರಿಂದ ತುಂಡಾದ ಕನ್ನಡಿಯನ್ನು ಕೂಡಲೇ ಬದಲಾಯಿಸಿ.
ಬೆಡ್ ರೂಮ್: ಯಾವತ್ತೂ ಬೆಡ್ ರೂಮ್ ನಲ್ಲಿ ದೇವರಕೋಣೆ ಅಥವಾ ಪೂಜೆ, ಧ್ಯಾನ ಮಾಡುವ ಮಂದಿರ ನಿರ್ಮಿಸಬೇಡಿ. ಅದು ಒಳ್ಳೆಯದಲ್ಲ. ಇದರಿಂದ ಜೋಡಿಗಳಿಗೆ ಒಳ್ಳೆಯದಾಗೋದಿಲ್ಲ. ಈ ಬಗ್ಗೆ ಗಮನ ಹರಿಸೋದು ಮುಖ್ಯ.
ಮಲಗುವ ಪೊಸಿಶನ್: ನಿಮ್ಮ ಜೀವನ ಚೆನ್ನಾಗಿರಬೇಕು ಅಂದ್ರೆ, ಮಲಗುವ ಪೊಜಿಶನ್ (sleeping position) ಸಹ ಸರಿಯಾಗಿರಬೇಕು. ನೀವು ಯಾವಾಗಲೂ ಮಲಗುವಾಗ ನಿಮ್ಮ ತಲೆ ಪೂರ್ವ ಮತ್ತು ದಕ್ಷಿಣ ದಿಕ್ಕಿನ ಕಡೆಗೆ ಇರಬೇಕು.