ಬ್ಲ್ಯಾಕ್ ಮ್ಯಾಜಿಕ್ ನಿಂದ ಬಳಲುತ್ತಿರುವ ವ್ಯಕ್ತಿಯ ಲಕ್ಷಣಗಳು
ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ (black magic) ಆಗಿದ್ರೆ, ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗಲು ಪ್ರಾರಂಭಿಸುತ್ತಾನೆ. ಅವನು ಯಾವಾಗಲೂ ಭಯಭೀತನಾಗಿರುತ್ತಾನೆ. ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯುವುದಿಲ್ಲ. ಇದು ಮಾತ್ರವಲ್ಲ, ಅಂತಹ ವ್ಯಕ್ತಿಯು ಮಾನಸಿಕ ಸಮಸ್ಯೆ (Mental Issues) ಅನುಭವಿಸುತ್ತಾನೆ. ಅಷ್ಟೇ ಅಲ್ಲ ಉಸಿರಾಟದ ತೊಂದರೆ, ಗಂಟಲು ನೋವು, ಯಾವುದೇ ಗಾಯವಿಲ್ಲದೆ ತೊಡೆಯ ಮೇಲೆ ನೀಲಿ ಗುರುತುಗಳು, ಹೃದಯದಲ್ಲಿ ಭಾರದ ಅನುಭವ, ನಿದ್ರೆ ಬಾರದಿರುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.