ಹೊಸ ವಾಹನ ಖರೀದಿಸುವ ಮುನ್ನ ಈ ವಾಸ್ತು ನಿಯಮ ನೆನಪಿಡಿ

First Published | Aug 10, 2023, 6:09 PM IST

ನೀವು ಹೊಸ ವಾಹನ ಖರೀದಿಸುತ್ತಿದ್ದರೆ, ವಿಶೇಷ ಕಾಳಜಿ ವಹಿಸಬೇಕಾದ ಕೆಲವು ವಿಷಯಗಳಿವೆ. ಹೊಸ ವಾಹನ ಖರೀದಿಸುವಾಗ ನೀವು ಯಾವ ವಿಶೇಷ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ.
 

ಹೊಸ ವಾಹನ (new vehicle)ಖರೀದಿಸುವುದು ಪ್ರತಿಯೊಬ್ಬರಿಗೂ ದೊಡ್ಡ ಕನಸಾಗಿರಬಹುದು. ಹೊಸ ವಾಹನವನ್ನು ಖರೀದಿಸುವ ಮೊದಲು ನೀವು ಕೆಲವು ವಿಶೇಷ ವಾಸ್ತು ನಿಯಮಗಳನ್ನು ಅನುಸರಿಸಿದರೆ, ನಿಮ್ಮ ಜೀವನದಲ್ಲಿ ಸಂತೋಷ (Happiness) ಉಳಿಯುತ್ತದೆ ಮತ್ತು ನೀವು ಅದನ್ನು ಅನುಸರಿಸದಿದ್ದರೆ ಮುಂದೆ ಅನೇಕ ಸಮಸ್ಯೆಗಳು ಉಂಟಾಗಬಹುದು.
 

ಹೊಸ ವಾಹನ ಖರೀದಿಸುವಾಗ ವಾಸ್ತು ನಿಯಮಗಳನ್ನು ಅನುಸರಿಸಿದ್ರೆ ಯಾವಾಗಲೂ ಹೊಸ ವಾಹನಕ್ಕೆ ಉತ್ತಮ ಫಲಿತಾಂಶ ಸಿಗುತ್ತಂತೆ. ನಿಮಗಾಗಿ ಹೊಸ ವಾಹನ ಖರೀದಿಸುವ ಮೊದಲು, ನಿಮ್ಮ ವಾಹನಕ್ಕೆ ಸಂಬಂಧಿಸಿದ ಸಕಾರಾತ್ಮಕ ಮತ್ತು ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವ ಕೆಲವು ವಾಸ್ತು ಪರಿಹಾರಗಳಿವೆ. ಹೊಸ ವಾಹನವನ್ನು ಖರೀದಿಸುವ ಮೊದಲು ನೀವು ಏನನ್ನು (vastu tips) ನೆನಪಿನಲ್ಲಿಟ್ಟುಕೊಳ್ಳಬೇಕು.

Tap to resize

ಮುಹೂರ್ತ ನೋಡಿ ಕಾರು ಕೊಳ್ಳಿ
ನೀವು ಹೊಸ ವಾಹನವನ್ನು ಖರೀದಿಸುತ್ತಿದ್ದರೆ, ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶುಭ ದಿನದಂದು ಮಾತ್ರ ಹೊಸ ವಾಹನ ಖರೀದಿಸಬೇಕು. ನೀವು ಯಾವುದೇ ತಿಂಗಳ ಹುಣ್ಣಿಮೆಯಂದು ಹೊಸ ವಾಹನ ಖರೀದಿಸಬೇಕು ಅಥವಾ ಹುಣ್ಣಿಮೆಯ 10 ದಿನದ ಮೊದಲು ಅಥವಾ 10 ದಿನಗಳ ನಂತರ ಯಾವುದೇ ಶುಭ ದಿನದಂದು ವಾಹನ ಖರೀದಿಸಬಹುದು.

ಹುಣ್ಣಿಮೆಯ ನಂತರ 11 ನೇ ದಿನದಿಂದ 15 ನೇ ದಿನದವರೆಗೆ ವಾಹನ ಖರೀದಿಸುವುದನ್ನು ತಪ್ಪಿಸಬೇಕು. ಯಾವುದೇ ತಿಂಗಳ ಶನಿವಾರ ಹೊಸ ವಾಹನ ಖರೀದಿಸುವುದನ್ನು ತಪ್ಪಿಸಿ. ಇದಲ್ಲದೆ, ಅಮಾವಾಸ್ಯೆಯ ದಿನ ಅಥವಾ ಚಂದ್ರನು ಆರು, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಇರುವ ದಿನದಂದು ವಾಹನ ಖರೀದಿಸಬೇಡಿ.
 

ಸರಿಯಾದ ಬಣ್ಣ ಆರಿಸಿ 
ಬಣ್ಣವು ನಿಮ್ಮ ವೈಯಕ್ತಿಕ ಆಯ್ಕೆಯಾಗಿದ್ದರೂ, ವಾಸ್ತು ಪ್ರಕಾರ, ಕೆಲವು ಬಣ್ಣಗಳನ್ನು (colors)  ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ, ಬೆಳ್ಳಿ ಮತ್ತು ಇತರ ತಿಳಿ ಬಣ್ಣಗಳನ್ನು ಸಾಮಾನ್ಯವಾಗಿ ವಾಹನಗಳಿಗೆ ಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವು ಸಕಾರಾತ್ಮಕತೆ ಮತ್ತು ಶುದ್ಧತೆಗೆ ಸಂಬಂಧಿಸಿವೆ. 

ಇದಲ್ಲದೆ, ನಿಮ್ಮ ಅದೃಷ್ಟ ಸಂಖ್ಯೆ (Lucky Number) ಮತ್ತು ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಶುಭಕರವಾದ ಪ್ರತಿಯೊಂದು ಬಣ್ಣದ ವಾಹನವನ್ನು ನೀವು ಖರೀದಿಸಬಹುದು. ಉದಾಹರಣೆಗೆ, ನಿಮ್ಮ ರಾಶಿಚಕ್ರ ಚಿಹ್ನೆಯು ಮೇಷ ಆಗಿದ್ದರೆ, ನೀವು ಕೆಂಪು ಅಥವಾ ಮರೂನ್ ಬಣ್ಣದ ವಾಹನವನ್ನು ಆಯ್ಕೆ ಮಾಡಬೇಕು.
 

ಪಾರ್ಕಿಂಗ್ ಸ್ಥಳ ಆರಿಸಿ
ಸಾಧ್ಯವಾದರೆ, ನಿಮ್ಮ ವಾಹನಕ್ಕಾಗಿ ಉತ್ತಮ ಪಾರ್ಕಿಂಗ್ ಸ್ಥಳವನ್ನು ಆರಿಸಿ. ಈ ಸ್ಥಳವು ಚೆನ್ನಾಗಿ ಬೆಳಕು ಮತ್ತು ಗೊಂದಲ ಮುಕ್ತವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಸ್ವಚ್ಛ ಮತ್ತು ಕ್ರಮಬದ್ಧ ಪಾರ್ಕಿಂಗ್ ಪ್ರದೇಶವು (parking place) ಪಾಸಿಟಿವಿಟಿಯನ್ನು ನೀಡುತ್ತದೆ. ನೀವು ಹೊಸ ವಾಹನವನ್ನು ನಕಾರಾತ್ಮಕ ಸ್ಥಳದಲ್ಲಿ ಇಟ್ಟರೆ, ನಕಾರಾತ್ಮಕ ಶಕ್ತಿಯೂ ಅದರಲ್ಲಿ ಬರಬಹುದು ಮತ್ತು ಅದು ನಿಮಗೆ ಶುಭವಲ್ಲ. 

ಸೂಕ್ತ ದಿಕ್ಕನ್ನು ಇರಿಸಿಕೊಳ್ಳಿ
ನಿಮಗೆ ಆಯ್ಕೆ ಇದ್ದರೆ, ನಿಮ್ಮ ವಾಹನವನ್ನು ವಾಯುವ್ಯ ದಿಕ್ಕಿನಲ್ಲಿ ನಿಲ್ಲಿಸಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. ಈ ದಿಕ್ಕು ವಾಯು ಅಂಶಕ್ಕೆ ಸೇರಿದೆ ಮತ್ತು ಎಲ್ಲಾ ವಾಹನಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ನಿಮ್ಮ ವಾಹನವನ್ನು ಹೆಚ್ಚಾಗಿ ನೆರಳಿನಲ್ಲಿ ಅಥವಾ ಮರದ ಕೆಳಗೆ ಇರುವ ಪ್ರದೇಶಗಳಲ್ಲಿ ನಿಲ್ಲಿಸುವುದನ್ನು ತಪ್ಪಿಸಿ. ಉತ್ತಮ ಬೆಳಕಿನ ಮತ್ತು ತೆರೆದ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ನಿಯಮಿತ ನಿರ್ವಹಣೆ ಅಗತ್ಯ 
ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸಂಘಟಿತವಾಗಿಡುವುದು ಎಷ್ಟು ಮುಖ್ಯವೋ, ನಿಮ್ಮ ವಾಹನದ ವಿಷಯಕ್ಕೆ ಬಂದಾಗ ಅದೇ ವಿಷಯ ಬರುತ್ತದೆ. ವಾಹನವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮತ್ತು ನಿರ್ವಹಿಸುವುದು ಅದರ ಜೀವಿತಾವಧಿಯನ್ನು ಹೆಚ್ಚಿಸುವುದಲ್ಲದೆ ಅದರ ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

Latest Videos

click me!