Vastu Shastra Negative Energy :ರಾತ್ರಿ ಮಲಗುವ ಮುನ್ನ ಕೆಲವರು ಮೊಬೈಲ್ ನೋಡಿದ್ರೆ ಮತ್ತೊಂದಿಷ್ಟು ಮಂದಿ ಟಿವಿ ನೋಡ್ತಾರೆ. ಆದ್ರೆ ಬೆಡ್ ಗೆ ಹೋಗಿ ನಿದ್ರೆ ಮಾಡುವ ಮೊದಲು ಕೆಲ ವಸ್ತುಗಳನ್ನು ಅಪ್ಪಿತಪ್ಪಿಯೂ ನೋಡ್ಬಾರದು. ಅದು ನಮ್ಮ ಜೀವನದ ಮೇಲೆ ನಕಾರಾತ್ಮ ಪ್ರಭಾವ ಬೀರುತ್ತೆ.
ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ಮಲಗುವ ಮೊದಲು ಕನ್ನಡಿ ನೋಡೋದು ಶುಭವಲ್ಲ. ಬೆಡ್ ಗೆ ಹೋಗೋ ಮುನ್ನ ತಲೆ ಬಾಚಿಕೊಂಡು, ಕನ್ನಡಿಯಲ್ಲಿ ಮುಖ ನೋಡ್ಕೊಳ್ಳೋರ ಸಂಖ್ಯೆ ಸಾಕಷ್ಟಿದೆ. ಆದ್ರೆ ಮಲಗುವ ಮೊದಲು ಕನ್ನಡಿ ನೋಡ್ಬಾರದು ಎನ್ನುತ್ತೆ ವಾಸ್ತುಶಾಸ್ತ್ರ. ಕನ್ನಡಿಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತವೆ. ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚು ಸಕ್ರಿಯವಾಗಿರುತ್ತೆ ಅಂತ ನಂಬಲಾಗಿದೆ. ಆದ್ದರಿಂದ ಮಲಗುವ ಮೊದಲು ಕನ್ನಡಿಯಲ್ಲಿ ಮುಖ ನೋಡುವುದು ಮಾನಸಿಕ ಒತ್ತಡ, ಚಡಪಡಿಕೆ ಅಥವಾ ನಿದ್ರೆಯ ತೊಂದರೆಗೆ ಕಾರಣ ಆಗ್ಬಹುದು. ಹಾಸಿಗೆ ಮುಂದೆ ಕನ್ನಡಿ ಇಡ್ಬಾರದು ಎಂಬುದಕ್ಕೂ ಇದೇ ಕಾರಣ.
24
ನೀರು
ನೀರಿನ ಅಂಶವನ್ನು ಚಂಚಲತೆಯ ಸಂಕೇತ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಮಲಗುವ ಮುನ್ನ ಪದೇ ಪದೇ ನೀರನ್ನು ನೋಡುವುದು ಅಥವಾ ನಿಮ್ಮ ತಲೆಯ ಬಳಿ ನೀರನ್ನು ಇಟ್ಟುಕೊಳ್ಳುವುದು ಮಾನಸಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ. ರೂಮಿನಲ್ಲಿ ನೀರು ಇಡೋದಾದ್ರೆ ನಿಮ್ಮ ತಲೆಯ ಮಟ್ಟಕ್ಕಿಂತ ಕೆಳಗೆ ಇಡಿ. ಇದು ಶಕ್ತಿಯ ಸಮತೋಲನವನ್ನು ಸುಧಾರಿಸುತ್ತದೆ.
34
ಕೊಳಕು ಪಾತ್ರೆ
ರಾತ್ರಿ ಮಲಗುವ ಮುನ್ನ ಕೊಳಕಾದ ಪಾತ್ರೆಗಳನ್ನು ನೋಡಿ ಮಲಗಬೇಡಿ. ಆದಷ್ಟು ಆ ಪಾತ್ರೆಗಳನ್ನು ಸ್ವಚ್ಛಗೊಳಿಸಿ ಮಲಗುವ ಪ್ರಯತ್ನ ಮಾಡಿ. ಈ ಕೊಳಕು ಪಾತ್ರೆ ನಿಮ್ಮ ಹಾಗೂ ಮನೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಆರ್ಥಿಕ ಸಮಸ್ಯೆಗಳು ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಉತ್ತಮ ನಿದ್ರೆಗೆ ಶಾಂತ ಮತ್ತು ಸಕಾರಾತ್ಮಕ ವಾತಾವರಣ ಮುಖ್ಯ. ಮಲಗುವ ಮುನ್ನ ಕನ್ನಡಿಯಲ್ಲಿ ಮುಖ ನೋಡುವುದು, ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ನೋಡುವುದು ಮಾಡಬೇಡಿ. ಹಾಗೆಯೇ ನೀರನ್ನು ನೋಡಿ ಮಲಗಬೇಡಿ. ನಿಮ್ಮ ತಲೆಯ ಬಳಿ ನೀರನ್ನು ಇಡುವಂತಹ ಅಭ್ಯಾಸಗಳನ್ನು ತಪ್ಪಿಸಿ.