Vastu tips for kitchen dough: ರೊಟ್ಟಿ ಅಥವಾ ಚಪಾತಿ ಮಾಡುವಾಗ ಹಿಟ್ಟಿನ ಉಂಡೆ ಪದೇ ಪದೇ ಬಿರುಕು ಬಿಡುತ್ತಿದೆಯೇ ಅಥವಾ ಅಂಕು-ಡೊಂಕಾಗಿ ಬರುತ್ತಿದೆಯೇ? ಇದು ಕೇವಲ ಅಡುಗೆ ಮಾಡುವ ವಿಧಾನದ ತಪ್ಪಲ್ಲ, ಬದಲಿಗೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಶಕ್ತಿ ಮತ್ತು ಮಾನಸಿಕ ಸ್ಥಿತಿಯ ಸಂಕೇತವಾಗಿದೆ!
ಸರಿಯಾದ ಆಕಾರದಲ್ಲಿ ಇಲ್ಲದಿದ್ದರೆ ಏನರ್ಥ? ಅಡುಗೆಮನೆಯನ್ನು ಮನೆಯ 'ಭಾಗ್ಯದ ಕೇಂದ್ರ' ಎಂದು ಕರೆಯಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಅಡುಗೆ ಮಾಡುವ ಪ್ರತಿಯೊಂದು ಹಂತವೂ ಮನೆಯ ಸಕಾರಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ರೊಟ್ಟಿ ಅಥವಾ ಚಪಾತಿ ಮಾಡಲು ಮಾಡುವ ಹಿಟ್ಟಿನ ಉಂಡೆಯ ಆಕಾರವು ಕೇವಲ ಅಡುಗೆಯನ್ನು ಮಾತ್ರವಲ್ಲ, ಅಡುಗೆ ಮಾಡುವವರ ಮಾನಸಿಕ ಸ್ಥಿತಿ ಮತ್ತು ಮನೆಯ ಸುಖ-ಸಮೃದ್ಧಿಯನ್ನು ಬಿಂಬಿಸುತ್ತದೆ. ಹಿಟ್ಟಿನ ಉಂಡೆ ಸರಿಯಾದ ಆಕಾರದಲ್ಲಿ ಇಲ್ಲದಿದ್ದರೆ ಅದು ಏನನ್ನು ಸೂಚಿಸುತ್ತದೆ? ಇಲ್ಲಿದೆ ಸವಿವರವಾದ ಮಾಹಿತಿ.
26
1. ಹಿಟ್ಟಿನ ಉಂಡೆ ನಯವಾಗಿ ಮತ್ತು ದುಂಡಗಾಗಿರುವುದು (ಶುಭ ಸಂಕೇತ)
1. ಹಿಟ್ಟಿನ ಉಂಡೆ ನಯವಾಗಿ ಮತ್ತು ದುಂಡಗಾಗಿರುವುದು (ಶುಭ ಸಂಕೇತ) ವಾಸ್ತು ಶಾಸ್ತ್ರದ ಪ್ರಕಾರ, ನೀವು ಹಿಟ್ಟಿನ ಉಂಡೆ ಮಾಡುವಾಗ ಅದು ಯಾವುದೇ ಬಿರುಕಿಲ್ಲದೆ ಸಂಪೂರ್ಣ ದುಂಡಗೆ ಬಂದರೆ ಅದು ಅತ್ಯಂತ ಶುಭದಾಯಕ.
ಸುಂದರವಾದ ದುಂಡಗಿನ ಆಕೃತಿಯು ಜ್ಯೋತಿಷ್ಯದಲ್ಲಿ ಚಂದ್ರ ಮತ್ತು ಬುಧ ಗ್ರಹಗಳ ಶುಭತೆಗೆ ಸಂಬಂಧಿಸಿದೆ. ಇದು ಮನೆಯಲ್ಲಿ ಶಾಂತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.
ಉಂಡೆ ನಯವಾಗಿದ್ದರೆ ಅಡುಗೆ ಮಾಡುವವರ ಮನಸ್ಸು ಶಾಂತವಾಗಿದೆ ಮತ್ತು ಏಕಾಗ್ರತೆಯಿಂದ ಕೂಡಿದೆ ಎಂದರ್ಥ. ಶಾಂತ ಮನಸ್ಸಿನಿಂದ ಮಾಡಿದ ಅಡುಗೆಯು 'ಅಮೃತ'ಕ್ಕೆ ಸಮಾನವಾಗಿದ್ದು, ಇದು ಕುಟುಂಬದ ಆರೋಗ್ಯವನ್ನು ಸುಧಾರಿಸುತ್ತದೆ.
ಸುಂದರವಾದ ರೊಟ್ಟಿಗಳು ಅನ್ನಪೂರ್ಣೇಶ್ವರಿ ದೇವಿಯನ್ನು ಪ್ರಸನ್ನಗೊಳಿಸುತ್ತವೆ. ಇದರಿಂದ ಮನೆಯಲ್ಲಿ ಧನ-ಧಾನ್ಯಗಳ ಕೊರತೆಯಾಗುವುದಿಲ್ಲ.
36
2. ಹಿಟ್ಟಿನ ಉಂಡೆ ಡೊಂಕು-ಡೊಂಕಾಗಿ ಅಥವಾ ಬಿರುಕು ಬಿಟ್ಟಿದ್ದರೆ ಎಚ್ಚರಿಕೆ
2. ಹಿಟ್ಟಿನ ಉಂಡೆ ಡೊಂಕು-ಡೊಂಕಾಗಿ ಅಥವಾ ಬಿರುಕು ಬಿಟ್ಟಿದ್ದರೆ ಎಚ್ಚರಿಕೆ ಎಷ್ಟೇ ಪ್ರಯತ್ನಿಸಿದರೂ ಉಂಡೆಗಳು ಒಡೆಯುತ್ತಿದ್ದರೆ ಅಥವಾ ಅಸ್ತವ್ಯಸ್ತವಾಗಿದ್ದರೆ ವಾಸ್ತು ಪ್ರಕಾರ ಅದನ್ನು ನಿರ್ಲಕ್ಷಿಸಬೇಡಿ.
ಅಡುಗೆ ಮಾಡುವವರ ಮನಸ್ಸಿನಲ್ಲಿ ಕೋಪ, ಚಿಂತೆ ಅಥವಾ ನಕಾರಾತ್ಮಕ ಆಲೋಚನೆಗಳು ಇದ್ದಾಗ ಮಾತ್ರ ಉಂಡೆಗಳು ಸರಿಯಾದ ಆಕಾರಕ್ಕೆ ಬರುವುದಿಲ್ಲ. ಇದು ಅಡುಗೆಯ ರುಚಿಯ ಮೇಲೆಯೂ ಪರಿಣಾಮ ಬೀರುತ್ತದೆ.
ಹಿಟ್ಟು ಪದೇ ಪದೇ ಬಿರುಕು ಬಿಡುತ್ತಿದ್ದರೆ ಅದು ಜ್ಯೋತಿಷ್ಯದ ಪ್ರಕಾರ ರಾಹು ಅಥವಾ ಶನಿ ಗ್ರಹದ ದೋಷ ಸೂಚಿಸುತ್ತದೆ. ಇದು ಮನೆಯಲ್ಲಿ ಸೋಮಾರಿತನ ಮತ್ತು ಕಿರಿಕಿರಿಯನ್ನು ಹೆಚ್ಚಿಸಬಹುದು.
ಒತ್ತಡದಲ್ಲಿ ಮಾಡಿದ ಇಂತಹ ಆಹಾರವನ್ನು ಸೇವಿಸುವುದರಿಂದ ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ವಿಷಯಕ್ಕೂ ಜಗಳ ಅಥವಾ ವೈಚಾರಿಕ ಭಿನ್ನಾಭಿಪ್ರಾಯಗಳು ಮೂಡಬಹುದು.
ಮರೆಯಬಾರದ 3 ಮುಖ್ಯ ವಾಸ್ತು ನಿಯಮಗಳು 1. ಬೆರಳುಗಳ ಗುರುತು ಹಾಕಿ ಹಿಟ್ಟು ನಾದಿದ ನಂತರ ಆ ದೊಡ್ಡ ಮುದ್ದೆಯ ಮೇಲೆ ನಿಮ್ಮ ಬೆರಳುಗಳಿಂದ ಒಂದು ಗುರುತು ಅಥವಾ ಒತ್ತು ನೀಡಿ. ವಾಸ್ತು ಪ್ರಕಾರ, ಸಂಪೂರ್ಣ ಸಪಾಟಾದ (Plain) ಹಿಟ್ಟಿನ ಮುದ್ದೆಯು ಮರಣ ಹೊಂದಿದವರಿಗೆ ಇಡುವ 'ಪಿಂಡ'ಕ್ಕೆ ಸಮಾನವೆಂದು ಭಾವಿಸಲಾಗುತ್ತದೆ.
56
2. ಹಾಲು ಅಥವಾ ತುಪ್ಪದ ಬಳಕೆ
2. ಹಾಲು ಅಥವಾ ತುಪ್ಪದ ಬಳಕೆ ಹಿಟ್ಟು ಒಡೆಯುತ್ತಿದ್ದರೆ ಅದಕ್ಕೆ ಸ್ವಲ್ಪ ಹಾಲು ಅಥವಾ ಶುದ್ಧವಾದ ತುಪ್ಪ ಸೇರಿಸಿ ನಾದಿ. ಇದು ಉಂಡೆಯನ್ನು ನಯವಾಗಿಸುವುದು ಮಾತ್ರವಲ್ಲದೆ, ಮನೆಯಲ್ಲಿ 'ಶುಕ್ರ ಗ್ರಹ'ನನ್ನು ಬಲಪಡಿಸಿ ವೈಭವ ಮತ್ತು ಐಶ್ವರ್ಯವನ್ನು ತರುತ್ತದೆ.
66
3. ಮಂತ್ರ ಅಥವಾ ಸಕಾರಾತ್ಮಕ ಆಲೋಚನೆ
3. ಮಂತ್ರ ಅಥವಾ ಸಕಾರಾತ್ಮಕ ಆಲೋಚನೆ ಅಡುಗೆ ಮಾಡುವಾಗ ಯಾವಾಗಲೂ ಅನ್ನಪೂರ್ಣೇಶ್ವರಿಯನ್ನು ಸ್ಮರಿಸುತ್ತಾ ಅಥವಾ ಸಕಾರಾತ್ಮಕ ಮಂತ್ರಗಳನ್ನು ಜಪಿಸುತ್ತಾ ಅಡುಗೆ ಮಾಡಿ. ಇದು ಆಹಾರದ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.