ಈ ವಾಸ್ತು ತಪ್ಪಿಂದ ಜನರು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ!

First Published | Feb 18, 2024, 7:11 PM IST

ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಜೀವನದಲ್ಲಿ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳಿವೆ, ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ಈ ನಕಾರಾತ್ಮಕ ಶಕ್ತಿಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನೀವು ಈ ವಾಸ್ತು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು.
 

ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತೀರಾ ಅಥವಾ ಯಾವಾಗಲೂ ದಣಿವಿನಿಂದ ಕೂಡಿರುತ್ತೀರಾ? ನಿಮ್ಮ ಉತ್ತರ ಹೌದು ಎಂದಾದರೆ, ವಾಸ್ತುವಿಗೆ ಸಂಬಂಧಿಸಿದಂತೆ ನೀವು ಮಾಡುವ ತಪ್ಪುಗಳು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ, ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳಿಂದಾಗಿ (vastu mistakes), ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಮನೆಯಲ್ಲಿರುವ ಕೆಲವು ವಸ್ತುಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು (negative energy)ತರುತ್ತದೆ. ಉದಾಹರಣೆಗೆ, ನಿಮ್ಮ ಕೋಣೆಯಲ್ಲಿರುವ ವಸ್ತುಗಳು ಸುತ್ತಲೂ ಬಿದ್ದಿದ್ದರೆ ಅಥವಾ ನಿಮ್ಮ ಹಾಸಿಗೆ ಸ್ವಚ್ಛವಾಗಿಲ್ಲದಿದ್ದರೆ, ನೀವು ಸೋಮಾರಿತನವನ್ನು ಅನುಭವಿಸುತ್ತೀರಿ ಮತ್ತು ಏನನ್ನೂ ಮಾಡಲು ಬಯಸದಂತಹ ಸ್ಥಿತಿ ಉಂಟಾಗುತ್ತದೆ. 
 

Latest Videos


ಅಂತೆಯೇ, ವಾಸ್ತು ಶಾಸ್ತ್ರದ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ (Negative Energy) ಹೆಚ್ಚಾಗಬಹುದು, ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ (Mental Health) ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕಾಗಿ ನೀವು ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂದು ತಿಳಿಯೋಣ.
 

ಹಾಸಿಗೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ.
ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ದಕ್ಷಿಣ ದಿಕ್ಕಿನ (South Direction) ಕಡೆಗೆ ಪಾದಗಳನ್ನಿಟ್ಟು ಮಲಗುವುದನ್ನು ತಪ್ಪಿಸಬೇಕು. ವಾಸ್ತು ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಪಾದಗಳನ್ನು ಇರಿಸಿ ಮಲಗುವುದರಿಂದ ತಲೆ ಮತ್ತು ಪಾದಗಳಲ್ಲಿ ನೋವು ಉಂಟಾಗುತ್ತದೆ. ಇದಲ್ಲದೆ, ನೀವು ಯಾವಾಗಲೂ ದೇಹದ ಉಳಿದ ಭಾಗಗಳಲ್ಲಿ ನೋವಿನ ಸಮಸ್ಯೆ ಅನುಭವಿಸುವಿರಿ.

ಕಿಟಕಿಗಳು ಮತ್ತು ಬಾಗಿಲ ಮುಚ್ಚಿಡಬೇಡಿ
ತೆರೆದ ಮತ್ತು ತಾಜಾ ಗಾಳಿಯನ್ನು (fresh air) ಎಲ್ಲರೂ ಇಷ್ಟಪಡುತ್ತಾರೆ, ಆದರೆ ನೀವು ಹೊರಗೆ ಮಾತ್ರ ತೆರೆದ ಗಾಳಿಯನ್ನು ಪಡೆಯುವ ಅಗತ್ಯವಿಲ್ಲ ನೀವು ಮನೆಯ ಗಾಳಿಯ ಬಗ್ಗೆಯೂ ಕಾಳಜಿ ವಹಿಸಬೇಕು. ವಾತಾಯನಕ್ಕಾಗಿ ನೀವು ಯಾವಾಗಲೂ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಬಾರದು. ಇಡೀ ದಿನ ಮನೆಯ ಬಾಗಿಲು, ಕಿಟಕಿ ಮುಚ್ಚಿದ್ದರೆ, ಈ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ. ನೀವು ಬೆಳಿಗ್ಗೆಯಿಂದ ಸಂಜೆ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿದರೆ, ಅದು ನಿಮ್ಮ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ.

ನೈಸರ್ಗಿಕ ಬೆಳಕು ಬಾರದಿರುವುದು
ಇತ್ತೀಚಿನ ದಿನಗಳಲ್ಲಿ, ಮನೆಗಳಲ್ಲಿ ಎಲ್ಇಡಿ ದೀಪಗಳನ್ನು ಸ್ಥಾಪಿಸುವ ಟ್ರೆಂಡ್ ಗಮನಾರ್ಹವಾಗಿ ಹೆಚ್ಚಾಗಿದೆ, ಇದರಿಂದಾಗಿ ಜನರು ಈ ದೀಪಗಳನ್ನು ಹಗಲಿನಲ್ಲಿಯೂ ಆನ್ ಮಾಡಲು ಇಷ್ಟಪಡುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ ನೈಸರ್ಗಿಕ ಬೆಳಕು (natural light) ಮನೆಗಳಿಗೆ ಹೋಗಲು ಸ್ಥಳವಿರೋದಿಲ್ಲ, ಈ ಕಾರಣದಿಂದಾಗಿ ದೀಪಗಳನ್ನು ಯಾವಾಗಲೂ ಆನ್ ಮಾಡಬೇಕಾಗುತ್ತದೆ, ಆದರೆ ಈ ದೀಪಗಳು ಎಷ್ಟೇ ಸುಂದರವಾಗಿ ಕಾಣುತ್ತಿದ್ದರೂ ಅದು ನಿಮ್ಮ ಆರೋಗ್ಯಕ್ಕೆ ಸೂಕ್ತವಲ್ಲ. ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಮನೆಯಲ್ಲಿ ನೈಸರ್ಗಿಕ ಬೆಳಕು ಬಹಳ ಮುಖ್ಯ.

ಮನೆಯಲ್ಲಿ ಮರಗಿಡಗಳು ಇಲ್ಲದಿರುವುದು
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಬಹಳ ಸ್ಥಳಾವಕಾಶವೇ ಇರೋದಿಲ್ಲ ಆದ್ದರಿಂದ ಮನೆಗಳಲ್ಲಿ ಮರಗಳನ್ನು ನೆಡುವುದು ತುಂಬಾ ಕಷ್ಟ, ಆದರೆ ಉತ್ತಮ ಆರೋಗ್ಯಕ್ಕಾಗಿ, ನೀವು ನಿಮ್ಮ ಮನೆಯಲ್ಲಿ ಒಳಾಂಗಣದಲ್ಲಿ ಗಿಡಗಳನ್ನು ಇಡಬಹುದು. ಮನೆಯಲ್ಲಿ ಹಸಿರು ಇರುವುದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ನೀವು ಮನೆಗಳಲ್ಲಿ ಸುಲಭವಾಗಿ ಇಡಬಹುದಾದ ಕೆಲವು ಸಸ್ಯಗಳಿವೆ. ಅವುಗಳಲ್ಲಿ ಏರ್ ಪ್ಯೂರಿಫೈಯರ್ (Air purifier) ಸಸ್ಯಗಳನ್ನು ಇರಿಸಿ.

click me!