ನಿರ್ಗತಿಕರಿಗೆ ಮಂಗಳವಾರ ದಿನ ನೀವು ಸಹಾಯ ಮಾಡಿದ್ರಿ ಅಂದ್ರೆ, ಅಂದ್ರೆ ಅವರಿಗೆ ಆಹಾರ ಕೋಡೋದು, ನೀರು ಅಥವಾ ಅವರಿಗೆ ಅಗತ್ಯ ಇರುವಂತಹ ವಸ್ತುಗಳನ್ನ ನೀಡೋದ್ರಿಂದ ಮಂಗಳನೂ ಖುಷಿಪಡ್ತಾನೆ, ಆಂಜನೇಯನಿಗೂ ಖುಷಿಯಾಗುತ್ತೆ ಎಲ್ಲಾ ದೇವತೆಗಳು ಖುಷಿಯಾಗಿದ್ರೆ, ನಿಮ್ಮ ಮನೆ ಮೇಲೆಯೂ ಈ ದೇವರ ಆಶೀರ್ವಾದ ಇದ್ದೆ ಇರುತ್ತೆ, ಹಾಗಾಗಿ ಮನೆಯಲ್ಲಿ ಎಲ್ಲರೂ ಸಂತೋಷವಾಗಿ, ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯವಾಗುತ್ತೆ. ಎಲ್ಲಾ ರೀತಿಯ ನಕಾರಾತ್ಮಕತೆ ಮನೆಯಿಂದ ದೂರಾಗುತ್ತೆ. ಜೊತೆಗೆ ಎಲ್ಲಾ ರೀತಿಯ ಧನ, ಸಂಪತ್ತಿನಿಂದ ನಿಮ್ಮ ಮನೆ ತುಂಬುತ್ತೆ. ಆದ್ರೆ ಈ ಎಲ್ಲಾ ಉಪಾಯವನ್ನು ಯಾರಿಗೂ ಹೇಳದೇ ಸೀಕ್ರೆಟ್ ಆಗಿ ಮಾಡೋದನ್ನ ಮರೀಬೇಡಿ.