Vastu Tips: ಬಣ್ಣ ಬದಲಾಯಿಸಿ ವ್ಯವಹಾರದಲ್ಲಿ ಯಶಸ್ಸು ಪಡೆಯಿರಿ !

First Published Oct 16, 2021, 5:04 PM IST

ವ್ಯವಹಾರದಲ್ಲಿ (business) ಹೆಚ್ಚಿನ ಲಾಭವನ್ನು ಪಡೆಯದಿದ್ದರೆ ನಿರಾಶೆಗೊಳ್ಳಬೇಡಿ. ಕೆಲವೊಮ್ಮೆ ಹಣಕಾಸಿನ ತೊಂದರೆ (money problem )ಮಾತ್ರವಲ್ಲ, ವ್ಯವಹಾರ ಜ್ಞಾನದ ಕೊರತೆಯಿಂದ ಮಾನಸಿಕ ಸಮಸ್ಯೆಗಳೂ ಎದುರಾಗವಬಹುದು. ಅವುಗಳನ್ನು ಪರಿಹರಿಸಲು ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸಬೇಕು. 

ವ್ಯವಹಾರದಲ್ಲಿ (business) ಪ್ರಗತಿ ಸಾಧಿಸಲು ಬಯಸಿದರೆ,  ಕೆಲಸದ ಸ್ಥಳ (Place), ಕಚೇರಿ (office) ಅಥವಾ ಅಂಗಡಿಯಲ್ಲಿ (Shops) ಕೆಲವು ಬದಲಾವಣೆಗಳನ್ನು ಮಾಡಬಹುದು ಮತ್ತು ವ್ಯವಹಾರದಲ್ಲಿ (Business) ಕೆಲವು ಬದಲಾವಣೆಗಳನ್ನು ಮಾಡಬಹುದು. ಅದಕ್ಕಾಗಿ ಈ ವಾಸ್ತು ಟಿಪ್ಸ್ ಬಗ್ಗೆ ತಿಳಿಯೋಣ...

ವಾಸ್ತು ಶಾಸ್ತ್ರದಲ್ಲಿ (vastu shastra) ಬಣ್ಣಗಳಿಗೆ ವಿಶೇಷ ಮಹತ್ವವಿದೆ
ವಾಸ್ತು ಶಾಸ್ತ್ರದ ಪ್ರಕಾರ (ವಾಸ್ತು ಶಾಸ್ತ್ರ) ಕೆಲವು ಬಣ್ಣಗಳ (Colors) ಆರೈಕೆಯಿಂದ ಮತ್ತೆ  ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಬಹುದು. ಕಚೇರಿ ಅಥವಾ ಅಂಗಡಿಯ ಗೋಡೆಗಳಿಗೆ ಬಣ್ಣ ಹಚ್ಚುವ ಮೂಲಕ ವ್ಯವಹಾರದಲ್ಲಿ ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಇಲ್ಲಿದೆ.

ವಾಸ್ತು ಪ್ರಕಾರ ಕಪ್ಪು ಬಣ್ಣದ ತತ್ವ ನೀರು. ಆಗ್ನೇಯ ದಿಕ್ಕಿನಲ್ಲಿ ಸ್ವಲ್ಪ ಪ್ರಮಾಣದ ಕಪ್ಪು (Black) ಬಣ್ಣವನ್ನು ಚಿತ್ರಿಸಿದರೆ, ಇದರಿಂದ ವ್ಯವಹಾರದಲ್ಲಿನ ತೊಂದರೆಗಳು (problems in business) ನಿವಾರಣೆಯಾಗುತ್ತದೆ. ವ್ಯಾಪಾರವು ಬೆಳೆಯದಿದ್ದರೆ, ಆಗ್ನೇಯ ದಿಕ್ಕಿನಲ್ಲಿ ಸ್ವಲ್ಪ ಕಪ್ಪು ಬಣ್ಣವನ್ನು ಹೊಂದಿರುವುದು ಪ್ರಯೋಜನಕಾರಿ.

ಅದೇ ಸಮಯದಲ್ಲಿ, ಸ್ಟೇಷನರಿ (stationary ) ಮಾರಾಟಗಾರನಿಗೆ ವ್ಯವಹಾರದಲ್ಲಿ ಉತ್ತಮ ಲಾಭ ಸಿಗುತ್ತಿಲ್ಲ ಎಂದಾದರೆ ಆ ಸಂದರ್ಭದಲ್ಲಿ  ಕಚೇರಿಯ ಬಣ್ಣ ಬದಲಾಯಿಸಬೇಕು. ಹಳದಿ (Yellow), ಆಕಾಶ ನೀಲಿ (Sky Blue) ಮತ್ತು ಗುಲಾಬಿ (Pink) ಬಣ್ಣವನ್ನು ಬಳಿಯುವುದು ಉತ್ತಮ ಎಂದು ಹೇಳಲಾಗುತ್ತದೆ. ಇದರಿಂದ ಲಾಭ (Profit) ಹೆಚ್ಚುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ  ಆಭರಣದ (gold business) ವ್ಯವಹಾರ ಮಾಡುತ್ತಿದ್ದರೆ ಅಂಗಡಿಗೆ ಗುಲಾಬಿ, ಬಿಳಿ (White) ಮತ್ತು ಆಕಾಶದ ನೀಲಿ ಬಣ್ಣ ಹಚ್ಚಬೇಕು. ಅದೇ ಸಮಯದಲ್ಲಿ, ಕಿರಾಣಿ ಅಂಗಡಿಗಳು ತಿಳಿ ಗುಲಾಬಿ, ಆಕಾಶ ನೀಲಿ ಮತ್ತು ಬಿಳಿಯಿಂದ ಯಾವುದೇ ಬಣ್ಣವನ್ನು ಆಯ್ಕೆ ಮಾಡಬಹುದು. ಈ ಬಣ್ಣಗಳು ವ್ಯವಹಾರಕ್ಕೆ ಪ್ರಗತಿ ಮತ್ತು ಸಮೃದ್ಧಿಯನ್ನು (Prosperity) ತರುತ್ತವೆ ಎಂದು ನಂಬಲಾಗಿದೆ. 

ಮತ್ತೊಂದೆಡೆ,  ಬಟ್ಟೆ ವ್ಯವಹಾರ (Textile Business) ಮಾಡಿದರೆ ಅಥವಾ ಬೊಟಿಕ್ ಹೊಂದಿದ್ದರೆ, ತಿಳಿ ಹಳದಿ (Light Yellow), ಹಸಿರು ಮತ್ತು ಆಕಾಶ ನೀಲಿ (Blue) ಬಣ್ಣವನ್ನು ಆಯ್ಕೆ ಮಾಡುವುದು ಉತ್ತಮ.  ಇದರಿಂದ ಉತ್ತಮ ರೀತಿಯಲ್ಲಿ ವ್ಯವಹಾರ ಕುದುರುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ವಾಸ್ತು ಸಲಹೆ ಅನುಸರಿಸಿ. 

click me!