ಮದುವೆಯಾಗದ ಯುವಕ, ಯುವತಿ ರೂಮ್ ಹೀಗಿದ್ದರೆ ಕಂಕಣ ಶೀಘ್ರವೇ ಪ್ರಾಪ್ತಿ!

First Published | Jul 16, 2022, 4:41 PM IST

ವಾಸ್ತು ಶಾಸ್ತ್ರದಲ್ಲಿ, ಅವಿವಾಹಿತ ಹುಡುಗ-ಹುಡುಗಿ ಕೆಲವು ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡುವುದನ್ನು ನಿಷೇಧಿಸಲಾಗಿದೆ. ಕೆಲವು ವಸ್ತುಗಳನ್ನು ಇಡೋದ್ರಿಂದ ಅವರ ವಿವಾಹಕ್ಕೆ ತೊಂದರೆಯಾಗುತ್ತದೆ ಎಂದು ಇದನ್ನು ಹೇಳಲಾಗುತ್ತೆ. ಹಾಗಾದ್ರೆ ಯಾವ ವಸ್ತುಗಳನ್ನು ಬೆಡ್ ರೂಮ್ ನಲ್ಲಿ ಇಡಬಾರದು ತಿಳಿಯೋಣ.

ವಾಸ್ತು ಶಾಸ್ತ್ರವು ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳ ಮಂಗಳಕರ ಮತ್ತು ಅಶುಭ ಫಲಗಳ ಬಗ್ಗೆ ಹೇಳುತ್ತದೆ. ಮನೆಯನ್ನು ನಿರ್ಮಿಸುವುದರಿಂದ ಹಿಡಿದು ಅದನ್ನು ಅಲಂಕರಿಸುವವರೆಗೆ, ಎಲ್ಲವೂ ವಾಸ್ತುವಿಗೆ ಸಂಬಂಧಿಸಿದೆ. ವಾಸ್ತು ದೋಷ ಮತ್ತು ಗ್ರಹಗಳ ಅಶುಭ ಪ್ರಭಾವದಿಂದಾಗಿ, ಮಾನವನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಮನೆಯಲ್ಲಿನ ವಿವಾದ, ಮದುವೆಗೆ (Wedding) ಅಡ್ಡಿ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಗಂಡ ಮತ್ತು ಹೆಂಡತಿ ನಡುವಿನ ಜಗಳಗಳು, ಇತ್ಯಾದಿ. ವಾಸ್ತು ಶಾಸ್ತ್ರವು ಒಬ್ಬರ ಮದುವೆ ಏಕೆ ವಿಳಂಬವಾಗುತ್ತಿದೆ ಎಂಬ ಬಗ್ಗೆಯೂ ಹೇಳುತ್ತೆ. ಬ್ಯಾಚುಲರ್ ಹುಡುಗರು ಮತ್ತು ಹುಡುಗಿಯರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ನಿಷೇಧಿಸಲಾಗಿದೆ. ಯಾಕೆಂದರೆ ಕೆಲವು ವಸ್ತುಗಳಿಂದ ಮದುವೆಗೆ ಅಡ್ಡಿಯಾಗುತ್ತದೆ. ಅವಿವಾಹಿತರಾಗಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ವಿವಾಹದಲ್ಲಿ ತೊಂದರೆಯನ್ನುಂಟುಮಾಡುವ ಆ ವಸ್ತುಗಳನ್ನು ನಿಮ್ಮ ಕೋಣೆಯಿಂದ ತೆಗೆದುಹಾಕಿ. ಆ ವಸ್ತುಗಳು ಯಾವುವು ಎಂದು ತಿಳಿಯೋಣ.

ವಾಸ್ತು ಪ್ರಕಾರ ಫೋಟೋ ಆಯ್ಕೆ ಮಾಡಿ

ವಿವಾಹಿತ ಹುಡುಗರು ಅಥವಾ ಹುಡುಗಿಯರು ತಮ್ಮ ಕೋಣೆಗಳನ್ನು ಅಲಂಕರಿಸಲು ಮನಸ್ಸನ್ನು ಪ್ರಚೋದಿಸುವ ವರ್ಣಚಿತ್ರಗಳನ್ನು ಹಾಕುತ್ತಾರೆ. ಆದರೆ ಎಲ್ಲಾ ರೀತಿಯ ಫೋಟೋಗಳು ಬೆಡ್ ರೂಮ್ ನಲ್ಲಿ(Bed room) ಇಡೋದು ಉತ್ತಮವಲ್ಲ ಅನ್ನೋದು ನಿಮಗೆ ಗೊತ್ತಾ? 

Tap to resize

ಹರಿಯುವ ನೀರು, ಜಲಪಾತ(Water Falls), ನದಿಯಂತಹ ಫೋಟೋಗಳನ್ನು ಸಾಮಾನ್ಯವಾಗಿ ಹಾಕಲಾಗುತ್ತೆ. ಆದರೆ ವಾಸ್ತು ಪ್ರಕಾರ, ಅಂತಹ ಫೋಟೋಗಳು ಮದುವೆಗೆ ಅಡ್ಡಿಯಾಗುತ್ತವೆ. ಅದನ್ನು ಕೋಣೆಯಿಂದ ತೆಗೆದುಹಾಕುವ ಮೂಲಕ, ನೀವು ಪ್ರಣಯ ಪಕ್ಷಿಗಳು ಅಥವಾ ಸುಂದರವಾದ ಹೂವುಗಳ ಚಿತ್ರಗಳನ್ನು ಹಾಕಬಹುದು.

ಹಾಸಿಗೆ ಕೆಳಗೆ ಈ ವಸ್ತು ಬೇಡ!

ಕಬ್ಬಿಣದ ಮಡಕೆ(Iron vessels) ಹಾಸಿಗೆಯ ಕೆಳಗೆ ಇಡಬೇಡಿ
ಮದುವೆಯ ಕಡೆಗೆ ಹೆಜ್ಜೆ ಇಡುತ್ತಿರುವವರು ಯಾವಾಗಲೂ ಬೆಡ್ ಇರುವ ಹಾಸಿಗೆಯ ಮೇಲೆ ಮಲಗಬೇಕು. ಆದರೆ ಬೆಡ್ ಕೆಳಗೆ ಕಬ್ಬಿಣದ ಪಾತ್ರೆಗಳನ್ನು ಇಡಬೇಡಿ. ಇನ್ನು ಬೆಡ್ ರೂಮ್ ಎದುರು ಬಾತ್ ರೂಮ್ ಬಾಗಿಲು ತೆರೆದುಕೊಂಡಿದ್ದರೆ, ಅದನ್ನು ಯಾವಾಗಲೂ ಮುಚ್ಚಿಡಿ. ಇದು ನಕಾರಾತ್ಮಕತೆಯನ್ನು ತರುತ್ತದೆ. ಇದು ಮದುವೆಗೆ ಅಡ್ಡಿಯಾಗಬಹುದು.

ನಿದ್ರಿಸುವ ದಿಕ್ಕು

ನಿದ್ರೆ(Sleep) ಮಾಡುವ ದಿಕ್ಕಿನ ಬಗ್ಗೆ ಜಾಗರೂಕರಾಗಿರಿ
ನೀವು ಜೀವನ ಸಂಗಾತಿಯನ್ನು ಹುಡುಕುತ್ತಿದ್ದರೆ, ನೀವು ದಕ್ಷಿಣ ದಿಕ್ಕಿನತ್ತ ತಲೆಯಿಟ್ಟು ಮಲಗಬಾರದು. ಅವಿವಾಹಿತರು ವಾಯವ್ಯ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು. ದಿಕ್ಕು ತಪ್ಪಾದಾಗ ಮದುವೆಗೆ ಅಡ್ಡಿಯಾಗುತ್ತದೆ. ಅಷ್ಟೇ ಅಲ್ಲ, ಹಾಸಿಗೆಯ ತುದಿಯು ಗೋಡೆ ಅಥವಾ ಕಿಟಕಿಯ ಪಕ್ಕದಲ್ಲಿರಬಾರದು.
 

ಛಾವಣಿ ಮೇಲೆ ಭೀಮ್(Beam) ಇರುವ ಕೋಣೆಯಲ್ಲಿ ಮಲಗಬೇಡಿ

ವಾಸ್ತು ಪ್ರಕಾರ, ಅವಿವಾಹಿತ ಹುಡುಗ ಅಥವಾ ಹುಡುಗಿ ತನ್ನ ಛಾವಣಿ ಮೇಲೆ ಕಂಬ ಅಥವಾ ಭೀಮ್ ಹೊಂದಿರುವ ಕೋಣೆಯಲ್ಲಿ ಮಲಗಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತುವಿನ ಪ್ರಕಾರ, ವಿವಾಹಿತ ಜನರ ಮಲಗುವ ಕೋಣೆಯ ಛಾವಣಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಾರದು. ಇದು ಅವರ ಮದುವೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ನೀವು ಈ ರೀತಿಯ ಕೋಣೆಯಲ್ಲಿ ಮಲಗಿದರೆ, ತಕ್ಷಣ ಅದನ್ನು ಬದಲಾಯಿಸಿ. 
 

Latest Videos

click me!