ಸಿಂಧೂರದ ಈ ಪರಿಹಾರವು ಆರ್ಥಿಕ ಸಮಸ್ಯೆ (financial problem) ನಿವಾರಿಸುತ್ತೆ, ಸಿಂಧೂರದಿಂದ ತಾಯಿ ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ ಮತ್ತು ನಿಮ್ಮ ವ್ಯವಹಾರದಲ್ಲಿ (business) ನಡೆಯುತ್ತಿರುವ ಆರ್ಥಿಕ ಹೊಡೆತವನ್ನು ಸಹ ನಿವಾರಿಸುತ್ತೆ.
ಏಕಾಕ್ಷಿ ತೆಂಗಿನಕಾಯಿಗೆ ಸಿಂಧೂರ ಹಚ್ಚಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಿ ಮತ್ತು ಲಕ್ಷ್ಮಿ ಮಾತೆಯನ್ನು ಧ್ಯಾನಿಸುವಾಗ ನಿಮ್ಮ ವ್ಯವಹಾರದ ಸ್ಥಳದಲ್ಲಿ ಇದನ್ನು ಸುರಕ್ಷಿತವಾಗಿರಿಸಿ. ಇದನ್ನು ಮಾಡುವುದರಿಂದ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತೆ.
ಇನ್ನು ಉತ್ತಮ ಕೆಲಸ ಸಿಗಬೇಕು ಅಂದ್ರೆ, ಶುಕ್ಲ ಪಕ್ಷದ ಗುರುವಾರದಂದು, ಸಿಂಧೂರದಿಂದ 63 ಸಂಖ್ಯೆಯನ್ನು ಹಳದಿ ಬಣ್ಣದ ಬಟ್ಟೆಯ ಮೇಲೆ ಬರೆಯಿರಿ ಮತ್ತು ಅದನ್ನು ತಾಯಿ ಲಕ್ಷ್ಮಿಯ (godess Lakshmi) ಪಾದಗಳಿಗೆ ಅರ್ಪಿಸಿ.
ಸಿಂಧೂರ ಮತ್ತು ಎಣ್ಣೆಯನ್ನು ಮಿಕ್ಸ್ ಮಾಡಿ ಮನೆಯ ಬಾಗಿಲಿಗೆ ಹಚ್ಚಿ. ಇದು ಮನೆಯ ಸಮಸ್ಯೆಗಳನ್ನು ದೂರ ಮಾಡುತ್ತೆ ಮತ್ತು ಮನೆಯ ಎಲ್ಲಾ ದೋಷಗಳನ್ನು ನಿವಾರಿಸುತ್ತೆ. ಇದರೊಂದಿಗೆ, ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ಮನೆ ಪ್ರವೇಶಿಸಲು ಸಾಧ್ಯವಾಗದಂತೆ ರಕ್ಷಿಸುತ್ತೆ.
ಸಿಂಧೂರಕ್ಕೆ ಎಣ್ಣೆಯನ್ನು ಸೇರಿಸಿ ಹಚ್ಚೋದ್ರಿಂದ ಶನಿದೇವ (shanidev)ಸಂತೋಷಪಡುತ್ತಾನೆ. ಅಲ್ಲದೇ ದುಷ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸುತ್ತೆ. ಮನೆಯ ಬಾಗಿಲಿಗೆ ಸಿಂಧೂರ ಹಚ್ಚುವುದರಿಂದ ತಾಯಿ ಲಕ್ಷ್ಮಿಗೆ ಸಂತೋಷವಾಗುತ್ತದೆ ಎಂದು ನಂಬಲಾಗಿದೆ.
ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಕಡಿಮೆಯಾಗಿದ್ದರೆ, ಈ ಪರಿಹಾರದ ಮೂಲಕ ನೀವು ಪರಸ್ಪರ ಪ್ರೀತಿ ಹೆಚ್ಚಿಸಬಹುದು. ರಾತ್ರಿ ಮಲಗುವ ಮೊದಲು, ಪತಿ ತನ್ನ ಹೆಂಡತಿಯ ದಿಂಬಿನ ಕೆಳಗೆ ಸಿಂಧೂರದ ಪುಡಿಯನ್ನು ಕಾಗದದಲ್ಲಿ ಹಾಕಿ ಇಡಬೇಕು ಮತ್ತು ಹೆಂಡತಿ ತನ್ನ ಗಂಡನ ದಿಂಬಿನ ಕೆಳಗೆ ಎರಡು ಕರ್ಪೂರ ಇಡಬೇಕು. ಬೆಳಿಗ್ಗೆ, ಸಿಂಧೂರವನ್ನು ಮನೆಯಿಂದ ಹೊರಗೆ ಎಸೆಯಿರಿ ಮತ್ತು ಕರ್ಪೂರವನ್ನು ಸುಟ್ಟುಹಾಕಿ. ಇದು ಇಬ್ಬರ ನಡುವಿನ ಪ್ರೀತಿಯನ್ನು ಮತ್ತೆ ಹೆಚ್ಚಿಸುತ್ತದೆ.
ಏಕಾಕ್ಷಿ ತೆಂಗಿನಕಾಯಿಗೆ (coconut) ಸಿಂಧೂರ ಹಚ್ಚಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಿ ಮತ್ತು ಲಕ್ಷ್ಮಿ ಮಾತೆಯನ್ನು ಧ್ಯಾನಿಸುವಾಗ ನಿಮ್ಮ ವ್ಯವಹಾರದ ಸ್ಥಳದಲ್ಲಿ ಇದನ್ನು ಸುರಕ್ಷಿತವಾಗಿರಿಸಿ. ಇದನ್ನು ಮಾಡುವುದರಿಂದ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತೆ.
ಪುಷ್ಯ ಯೋಗ ಅಥವಾ ಶುಕ್ಲ ಪಕ್ಷದ ಗುರು ಪುಷ್ಯ ಯೋಗದಲ್ಲಿ ಗಣೇಶನಿಗೆ ಸಿಂಧೂರ ದಾನ ಮಾಡೋದ್ರಿಂದ ನೀವು ಕೆಲಸ ಮತ್ತು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು, ಆತ್ಮವಿಶ್ವಾಸ ಹೆಚ್ಚಾಗುತ್ತೆ. ಇದನ್ನು ಮಾಡೋದ್ರಿಂದ, ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗುತ್ತೀರಿ.