ಆಮೆ ಉಂಗುರ ಸುಮ್ ಸುಮ್ನೆ ಧರಿಸಿದ್ರೆ ಲಕ್ಷ್ಮೀ ದೇವಿ ಕೃಪೆ ಸಿಗಲ್ವಂತೆ !

First Published Aug 29, 2022, 8:10 PM IST

ಈ ವಾಸ್ತು, ಫೆಂಗ್ ಶುಯಿ ನಂಬುವವರು ಖಂಡಿತವಾಗಿಯೂ ಆಮೆ ಉಂಗುರವನ್ನು ನಂಬುತ್ತಾರೆ.  ಇತ್ತೀಚಿನ ದಿನಗಳಲ್ಲಿ, ಆಮೆ ಉಂಗುರವು ತುಂಬಾ ಟ್ರೆಂಡಿನಲ್ಲಿದೆ. ಹೆಚ್ಚಿನ ಜನರು ಈ ಉಂಗುರವನ್ನು ತಮ್ಮ ಕೈಯಲ್ಲಿ ಧರಿಸುತ್ತಾರೆ. ಏಕೆಂದರೆ ಆಮೆ ಉಂಗುರ ನೋಡಲು ಆಕರ್ಷಕವಾಗಿ ಕಾಣುತ್ತೆ, ಮತ್ತು ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತೆ. ಲಾಫಿಂಗ್ ಬುದ್ಧ, ಮೂರು ಕಾಲಿನ ಕಪ್ಪೆ ಮತ್ತು ಚೀನೀ ನಾಣ್ಯಗಳ ಮಹತ್ವವನ್ನು ಚೀನೀ ವಾಸ್ತು ಶಾಸ್ತ್ರ ಫೆಂಗ್ ಶುಯಿಯಲ್ಲಿ ಹೇಳಿದಂತೆ, ಆಮೆ ಉಂಗುರವನ್ನು ಸಹ ವಿಶೇಷ ಎಂದು ಪರಿಗಣಿಸಲಾಗುತ್ತೆ.
 

ಆಮೆ ಆಕಾರದ ಉಂಗುರವನ್ನು ಧರಿಸೋದು ದುರಾದೃಷ್ಟವನ್ನು ತೆಗೆದು ಹಾಕುತ್ತೆ ಎಂದು ಹೇಳಲಾಗುತ್ತೆ. ಆಮೆ ಉಂಗುರ (Turtle ring) ಧರಿಸುವ ಯಾವುದೇ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿಯ ಕೃಪೆ ಸದಾ ಇರುತ್ತೆ. ಅಂತಹ ಜನರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರೋದಿಲ್ಲ. ಆದ್ದರಿಂದ ಆಮೆ ಉಂಗುರವನ್ನು ಧರಿಸುವ ಸರಿಯಾದ ವಿಧಾನ ಮತ್ತು ಅದನ್ನು ಧರಿಸುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ...  

ನಿಮ್ಮ ಸುತ್ತಲಿನ ಜನರು ತಮ್ಮ ಬೆರಳಿನಲ್ಲಿ ಆಮೆ ಉಂಗುರವನ್ನು ಧರಿಸುವುದನ್ನು ನೀವು ನೋಡಿರಬಹುದು. ಆಮೆ ಉಂಗುರವನ್ನು ಧರಿಸುವುದು ಸಂಪತ್ತಿನ ಹಾದಿಯನ್ನು ತೆರೆಯುತ್ತದೆ ಎಂದು ನಂಬಲಾಗಿದೆ. ಪುರಾಣಗಳು ಮತ್ತು ಧರ್ಮಗ್ರಂಥಗಳ ಪ್ರಕಾರ, ಆಮೆಯನ್ನು ವಿಷ್ಣುವಿನ(Vishnu) ಕೂರ್ಮಾವತಾರವೆಂದು ಪರಿಗಣಿಸಲಾಗಿದೆ, ಅವರ ಸಹಾಯದಿಂದ ತಾಯಿ ಲಕ್ಷ್ಮಿ ಸಮುದ್ರ ಮಂಥನದ ಸಮಯದಲ್ಲಿ ಕಾಣಿಸಿಕೊಂಡಳು. ಆದ್ದರಿಂದ ಆಮೆ ಉಂಗುರವನ್ನು ಧರಿಸುವುದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. 

ಅನೇಕ ಜನರು ಅರಿವಿಲ್ಲದೆ ಆಮೆ ಉಂಗುರ ಧರಿಸುತ್ತಾರೆ, ಇದರಿಂದಾಗಿ ಅದು ಅದರ ಶುಭ ಪರಿಣಾಮ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂದು ನಾವು ಆಮೆ ಉಂಗುರಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಮತ್ತು ಅದನ್ನು ಧರಿಸುವ ಸರಿಯಾದ ವಿಧಾನವನ್ನು ನಿಮಗೆ ತಿಳಿಸುತ್ತೇವೆ. ಈ ನಿಯಮಗಳನ್ನು ಅನುಸರಿಸುವ ಮೂಲಕ, ನೀವು ಅನೇಕ ಬದಲಾವಣೆಗಳನ್ನು ನೋಡುತ್ತೀರಿ. ಉಂಗುರದ(Ring) ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ...

ಆಮೆ ಉಂಗುರ ಧರಿಸುವ ಪ್ರಯೋಜನಗಳು

ವಾಸ್ತು ಶಾಸ್ತ್ರದ ಪ್ರಕಾರ, ಆಮೆ ಉಂಗುರವನ್ನು ಧರಿಸೋದರಿಂದ ನಕಾರಾತ್ಮಕ ಶಕ್ ದೂರವಾಗುತ್ತೆ ಮತ್ತು ಸುತ್ತಲೂ ಧನಾತ್ಮಕ ಶಕ್ತಿ ನೆಲೆಸುತ್ತೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ, ಆಮೆಯನ್ನು ತಾಯಿ ಲಕ್ಷ್ಮಿಯ(Goddess Lakshmi) ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅದನ್ನು ಧರಿಸುವುದರಿಂದ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಆಮೆ ಉಂಗುರವನ್ನು ಧರಿಸುವ ಯಾವುದೇ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯ ಮತ್ತು ಸಂಪತ್ತನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಆರ್ಥಿಕ ಸಮಸ್ಯೆಗಳನ್ನು ಸಹ ತೆಗೆದುಹಾಕಲಾಗುತ್ತೆ. ಇದಲ್ಲದೆ, ಆಮೆಯನ್ನು ಶಾಂತಿ ಮತ್ತು ತಾಳ್ಮೆಯ ಸಂಕೇತವೆಂದು ಪರಿಗಣಿಸಲಾಗುತ್ತೆ, ಆದ್ದರಿಂದ ಅದರ ಉಂಗುರವನ್ನು ಧರಿಸೋದು ಮನುಷ್ಯನೊಳಗೆ ತಾಳ್ಮೆ(Patience) ಮತ್ತು ಶಾಂತಿಯನ್ನು ತರುತ್ತೆ.

ಆಮೆ ಉಂಗುರವನ್ನು ಧರಿಸೋದು ಹೇಗೆ?

ಆಮೆ ಉಂಗುರ ಬೆಳ್ಳಿ ಲೋಹದಿಂದ(Silver) ಮಾತ್ರ ತಯಾರಿಸಬೇಕು ಎಂದು ನಂಬಲಾಗಿದೆ, ಆಗ ಮಾತ್ರ ಅದರ ಶುಭ ಫಲಿತಾಂಶಗಳು ಕಂಡುಬರುತ್ತೆ. ಅದೇ ಸಮಯದಲ್ಲಿ, ಈ ಉಂಗುರವನ್ನು ಬಲಗೈಯಲ್ಲಿ ಮಾತ್ರ ಧರಿಸಬೇಕು. ಅದನ್ನು ಎಡಗೈಯಲ್ಲಿ ಧರಿಸೋದರಿಂದ ಯಾವುದೇ ಪ್ರಯೋಜನವಾಗೋದಿಲ್ಲ.

ಆಮೆ ಉಂಗುರವನ್ನು ಬಲಗೈ(Right hand) ತೋರುಬೆರಳು ಮತ್ತು ಮಧ್ಯದ ಬೆರಳಿನಲ್ಲಿ ಮಾತ್ರ ಧರಿಸಬೇಕು. ಅದನ್ನು ಧರಿಸುವಾಗ, ಅದರ ತಲೆ ನಿಮಗೆ ಮುಖ ಮಾಡಿದೆ ಎಂಬುದನ್ನು ನೆನಪಿನಲ್ಲಿಡಿ. ಇದು ಹಣವನ್ನು ಆಕರ್ಷಿಸುತ್ತೆ. ಆಮೆಯು ಹೊರ ಮುಖವಾಗಿದ್ದರೆ ಹಣವನ್ನು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. 

ವಾಸ್ತು ಶಾಸ್ತ್ರ ಮತ್ತು ಫೆಂಗ್ ಶುಯಿ(Feng shui) ನಿಮ್ಮ ಜೀವನದಲ್ಲಿ ಸಮತೋಲನ, ಸಕಾರಾತ್ಮಕತೆ ಮತ್ತು ಪ್ರಶಾಂತತೆಯನ್ನು ತರಲು ಆಮೆ ಉಂಗುರ ಧರಿಸಲು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ಆಮೆ ಉಂಗುರ ಧರಿಸುವುದು ಹೇಗೆ?

ಆಮೆ ಉಂಗುರ ಧರಿಸುವ ಮೊದಲು, ಅದನ್ನು ಹಸಿ ಹಾಲಿನಲ್ಲಿ(Milk) ಅದ್ದಿ ನಂತರ ಅದನ್ನು ಗಂಗಾ ನೀರಿನಿಂದ ಸ್ವಚ್ಛಗೊಳಿಸಿ ಮತ್ತು ಅದನ್ನು ತಾಯಿ ಲಕ್ಷ್ಮಿಯ ಮುಂದೆ ಇರಿಸಿ. ಇದರ ನಂತರ, ಲಕ್ಷ್ಮಿ ದೇವಿಯನ್ನು ಪೂಜಿಸಿ ಮತ್ತು ಶ್ರೀ ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸಿ. ಇದರ ನಂತರ, ಆಮೆ ಉಂಗುರ ಧರಿಸಿ. ಇದನ್ನು ಮಾಡೋದ್ರಿಂದ, ತಾಯಿ ಲಕ್ಷ್ಮಿಯ ಆಶೀರ್ವಾದ ಮತ್ತು ಸಮೃದ್ಧಿ ಪಡೆಯಲಾಗುತ್ತದೆ.

click me!