ವಾಸ್ತು ಶಾಸ್ತ್ರ: ಮನೆಯಲ್ಲಿ ಮದರಂಗಿ ಸಸ್ಯ ನೆಡೋದ್ರಿಂದ ಕೆಟ್ಟದಾಗುತ್ತಾ?

First Published | Aug 28, 2022, 3:35 PM IST

ನಾವು ಮನೆಯಲ್ಲಿ ಅನೇಕ ರೀತಿಯ ಗಿಡ ಮರಗಳನ್ನು ನೆಡುತ್ತೇವೆ. ಅವುಗಳಲ್ಲಿ ಕೆಲವು ಮನೆಗೆ ಮಂಗಳಕರವಾಗಿವೆ ಮತ್ತು ಕೆಲವು ಅಶುಭವೆಂದು ಸಹ ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಮೆಹಂದಿ ಸಸ್ಯವನ್ನು ಮನೆಯಲ್ಲಿ ನೆಡಬೇಕೆ ಅಥವಾ ಬೇಡವೇ ಎಂದು ತಿಳಿದಿದೆಯೇ? ಅಲ್ಲದೆ, ಮನೆಯಲ್ಲಿ ಮೆಹಂದಿ ಸಸ್ಯವನ್ನು ನೆಡೋದರಿಂದ ಮನೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.

ಮನೆಯನ್ನು ಆಕರ್ಷಕವಾಗಿ ಮತ್ತು ಹಸಿರಾಗಿ ಕಾಣುವಂತೆ ಮಾಡಲು ಪ್ರತಿಯೊಬ್ಬರೂ ಸಾಮಾನ್ಯವಾಗಿ ಗಿಡ ಮರಗಳನ್ನು ಮನೆಯ ಸುತ್ತಮುತ್ತಲೂ ನೆಡುತ್ತಾರೆ. ಕೆಲವು ಒಳಾಂಗಣ ಸಸ್ಯಗಳಿವೆ, ಅವುಗಳನ್ನು ಮನೆಯ ಒಳಗೆ ನೆಡಲಾಗುತ್ತೆ, ಆದರೆ ಕೆಲವು ಹೊರಾಂಗಣ ಸಸ್ಯಗಳಿವೆ, ಅವುಗಳನ್ನು ಮನೆಯ ಹೊರಗೆ ಬಾಲ್ಕನಿ ಅಥವಾ ಅಂಗಳ ಎಲ್ಲೆಡೆ ನೆಡಲಾಗುತ್ತೆ. 

ಮರಗಳು ಮತ್ತು ಸಸ್ಯಗಳನ್ನು ನೆಡೋದ್ರಿಂದ, ಮನೆ ಸುಂದರವಾಗಿ ಕಾಣುತ್ತದೆ, ಆದರೆ ಅದೇ ಸಮಯದಲ್ಲಿ ಪರಿಸರವು ಸಹ ಶುದ್ಧವಾಗಿರುತ್ತದೆ, ಸ್ವಚ್ಚ ಗಾಳಿ ಬೀಸುತ್ತೆ ಮತ್ತು ಹಸಿರಿನಿಂದ ಕೂಡಿರುತ್ತದೆ. ಹೆಚ್ಚಿನ ಗಿಡ ಮರಗಳಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ (positive energy) ತುಂಬಿರುತ್ತೆ. 

Tap to resize

ವಾಸ್ತುವಿನ ಪ್ರಕಾರ, ಎಲ್ಲಾ ಮರಗಳು ಮತ್ತು ಸಸ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಮೆಹಂದಿ ಸಸ್ಯದ ಬಗ್ಗೆ ಹೇಳೋದಾದ್ರೆ, ಮೆಹಂದಿ ಸಸ್ಯದ ಬಗ್ಗೆ ಸಹ ವಾಸ್ತುವಿನಲ್ಲಿ ಹೇಳಲಾಗಿದೆ.  ಮೆಹಂದಿ ಸಸ್ಯವು ಮನೆಗೆ ಮಂಗಳಕರ ಅಥವಾ ಅಶುಭ ಎರಡೂ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಲಾಗಿದೆ.

ಹಲವಾರು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಮೆಹಂದಿಯ ಬಳಕೆ ಮಾಡೋದು ಮಂಗಳಕರವೆಂದು ಪರಿಗಣಿಸಲಾಗಿದೆ. ಮದುವೆ, ಹಬ್ಬಗಳಲ್ಲಿ ಮೆಹಂದಿ ಹಚ್ಚುವುದು ಶುಭಕರವಾಗಿದೆ.  ಆದರೆ ಮೆಹಂದಿ ಸಸ್ಯವನ್ನು ಮನೆಯಲ್ಲಿ ನೆಡಬೇಕೇ? ಬೇಡವೇ? ಇದರಿಂದ ಏನಾಗುತ್ತದೆ ತಿಳಿಯಿರಿ.

ಮೆಹಂದಿ ಸಸ್ಯದ ಬಗ್ಗೆ ವಾಸ್ತು ಏನು ಹೇಳುತ್ತದೆ?
ಮೆಹಂದಿ ಮರದ ಸುವಾಸನೆ ಖಂಡಿತವಾಗಿಯೂ ನಿಮ್ಮನ್ನು ಆಕರ್ಷಿಸುತ್ತದೆ, ಆದರೆ ಈ ಸಸ್ಯವನ್ನು ಮನೆಯಲ್ಲಿ ನೆಡೋದನ್ನು ತಪ್ಪಿಸಬೇಕು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಋಣಾತ್ಮಕ ಶಕ್ತಿಗಳು ಮೆಹಂದಿ ಸಸ್ಯದಲ್ಲಿ ವಾಸಿಸುತ್ತವೆ ಎಂದು ನಂಬಲಾಗಿದೆ. ಆದುದರಿಂದ ಇದನ್ನು ಮನೆಯಲ್ಲಿ ನೆಡಬಾರದು ಎನ್ನಲಾಗುತ್ತದೆ. 

ಮೆಹಂದಿ ಸಸ್ಯವನ್ನು ನೆಡುವ ಸ್ಥಳದಲ್ಲಿ, ನಕಾರಾತ್ಮಕ ಶಕ್ತಿ ಹರಿಯಲು ಪ್ರಾರಂಭಿಸುತ್ತದೆ. ವಾಸ್ತುವಿನ ಪ್ರಕಾರ, ನಕಾರಾತ್ಮಕ ಶಕ್ತಿಯು ಮನೆಯ ಸಂತೋಷ ಮತ್ತು ಪ್ರಗತಿಗೆ ಅಡ್ಡಿಪಡಿಸುತ್ತದೆ, ಆದ್ದರಿಂದ ಮನೆಯಲ್ಲಿ ಮೆಹಂದಿ ಸಸ್ಯವನ್ನು ನೆಡಬೇಡಿ ಎಂದು ಕೆಲವೊಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಈ ಸಸ್ಯಗಳನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ..
ವಾಸ್ತುವಿನಲ್ಲಿ, ಅಂತಹ ಕೆಲವು ಮರಗಳು ಮತ್ತು ಸಸ್ಯಗಳನ್ನು ತಿಳಿಸಲಾಗಿದೆ, ಅವುಗಳನ್ನು ಮನೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಮರಗಳು ಮತ್ತು ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು (negative energy) ಉತ್ಪಾದಿಸುತ್ತವೆ. ವಾಸ್ತು ಪ್ರಕಾರ, ಮೆಹಂದಿ ಸೇರಿದಂತೆ ಹತ್ತಿ, ಅಕೇಶಿಯಾ ಮತ್ತು ಹುಣಸೆಯಂತಹ ಮರಗಳು ಮತ್ತು ಸಸ್ಯಗಳನ್ನು ಮನೆಯಲ್ಲಿ ನೆಡಬಾರದು.

Latest Videos

click me!