ಪ್ರತಿಯೊಬ್ಬರೂ ಕಾನೂನು ತೊಡಕುಗಳಿಂದ ದೂರವಿರಲು ಬಯಸುತ್ತಾರೆ. ಆದರೆ ಹಲವು ಸಲ ಏನಾಗುತ್ತೆ ಅಂದ್ರೆ ವ್ಯಕ್ತಿ ನ್ಯಾಯಾಲಯದಲ್ಲಿ(Court) ಅಥವಾ ಪೊಲೀಸರೊಂದಿಗೆ ವಾಗ್ವಾದ ಅಥವಾ ಇನ್ನಾವುದೇ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಮೂಲಕ ಸಮಸ್ಯೆ ಎದುರಿಸುತ್ತಾನೆ.
ನೀವು ಯಾವುದೇ ರೀತಿಯ ಮೊಕದ್ದಮೆಯನ್ನು ಎದುರಿಸುತ್ತಿದ್ದರೆ, ಮೊದಲು ಆ ಕೇಸ್ ಗೆ ಸಂಬಂಧಿಸಿದ ಫೈಲ್ ಗಳು(Files) ಮತ್ತು ಕಾಗದಗಳನ್ನು ಪರಿಶೀಲಿಸಿ ಅವುಗಳನ್ನು ಯಾವ ದಿಕ್ಕಿನಲ್ಲಿ ಇರಿಸಲಾಗಿದೆ ಎಂದು ನೋಡಿ. ಇದನ್ನು ನೋಡಿದ ನಂತರ, ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಯೋಜನ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.
ಕೇಸ್ ಗೆ(Case) ಸಂಬಂಧಿಸಿದ ಫೈಲ್ಸ್ ಮತ್ತು ಕಾಗದಗಳು ನೈಋತ್ಯ ದಿಕ್ಕಿನಲ್ಲಿದ್ದರೆ, ಅದನ್ನು ಅಲ್ಲಿಂದ ತೆಗೆಯಿರಿ. ಇಲ್ಲದಿದ್ದರೆ, ವಿಚಾರಣೆ ದೀರ್ಘಕಾಲ ಮುಂದುವರಿಯುತ್ತೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪೇಪರ್ಸ್, ದಾಖಲೆಗಳನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಿ. ಇದರಿಂದ ಶುಭವಾಗುತ್ತೆ.
ಪಶ್ಚಿಮ ದಿಕ್ಕಿನಲ್ಲಿ ಹಳದಿ ಕಾಗದದ ಮೇಲೆ ನೀಲಿ ಪೆನ್ನಿನಿಂದ ನಿಮ್ಮ ಇಚ್ಛೆಯನ್ನು ಬರೆಯಿರಿ. ಇದರಿಂದ ನೀವು ಎದುರಿಸುತ್ತಿರುವ ತೊಂದರೆ ಬೇಗ ಮುಗಿಯುತ್ತೆ. ಎಲ್ಲಾ ಫೈಲ್ ಗಳ ಬಲ ಮೂಲೆಯಲ್ಲಿ ಕೇಸರಿ ಬಣ್ಣದಿಂದ ಸ್ವಸ್ತಿಕ(Swastik) ಚಿತ್ರವನ್ನು ಬಿಡಿಸಿ.
ಮಂಗಳವಾರ, ಹನುಮಂತನ (Hanuman) ದೇವಾಲಯದಲ್ಲಿ ಬೆಲ್ಲ-ಕಡಲೆ ಪ್ರಸಾದವನ್ನು ಅರ್ಪಿಸಿ. ನ್ಯಾಯಾಲಯ ಸಂಬಂಧಿತ ಕಾರ್ಯಗಳಿಗೆ ಹೋಗುವಾಗ ಕಪ್ಪು ಬಟ್ಟೆಗಳನ್ನು ಧರಿಸಬೇಕು. ಹಾಗೆ ಮಾಡೋದರಿಂದ ಫಲಿತಾಂಶವು ನಿಮ್ಮ ಪರವಾಗಿ ಬರುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ ಎಂದು ನಂಬಲಾಗಿದೆ.
ಒಂದು ಪ್ರಕರಣದ ವಿಚಾರಣೆ ನಡೆಯುವಾಗ, ಅದಕ್ಕೂ ಮೊದಲು ನಿಮ್ಮ ವಕೀಲರಿಗೆ ಪೆನ್(Pen) ಮತ್ತು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ. ಇದರಿಂದ ನೀವು ಜಯಶಾಲಿ ಆಗುತ್ತೀರಿ. ನ್ಯಾಯಾಲಯದ ವಿಚಾರಣೆಗೆ ಹೋಗುವ ಮೊದಲು, ಭೈರವ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಮತ್ತು ದೇವರ ಮುಂದೆ ದೀಪವನ್ನು ಬೆಳಗಿಸಿ. ಕಪ್ಪು ನಾಯಿಗೆ ತಿಂಡಿ ನೀಡಿ. ಎಲ್ಲವೂ ಶುಭವಾಗುತ್ತೆ.