ವಾಸ್ತು ಶಾಸ್ತ್ರದಲ್ಲಿ (Vaastu) ನಾವು ಮಾಡುವ ಅನೇಕ ಕಾರ್ಯಗಳ ಬಗ್ಗೆ ನಿಯಮಗಳು ಮತ್ತು ನಂಬಿಕೆಗಳಿವೆ. ಅಂತಹ ಒಂದು ನಂಬಿಕೆ ಎಂದರೆ ಮನೆಯ ಮುಖ್ಯ ಬಾಗಿಲಿನಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ತೆಗೆಯಬಾರದು. ಮನೆಯ ಮುಖ್ಯ ಬಾಗಿಲಿನ ಎದುರು ಚಪ್ಪಲಿ ಮತ್ತು ಬೂಟುಗಳನ್ನು ಏಕೆ ಇಡಬಾರದು ಅನ್ನೋದರ ಬಗ್ಗೆ ತಿಳಿಯೋಣ. .
ಮನೆಯ ಮುಖ್ಯ ಬಾಗಿಲಿನ ಪ್ರಾಮುಖ್ಯತೆ
ಮನೆಯ ಮುಖ್ಯ ದ್ವಾರವನ್ನು (main door) ಶ್ರೀ ಗಣೇಶನ ಸಂಕೇತವೆಂದು ಪರಿಗಣಿಸಲಾಗಿದೆ. ಅಲ್ಲದೇ ರಾಹು ಮನೆಯ ಹೊಸ್ತಿಲಲ್ಲಿ ವಾಸಿಸುತ್ತಾನೆ ಅನ್ನೋ ಒಂದು ನಂಬಿಕೆ ಸಹ ಇದೆ. ಈ ಕಾರಣಕ್ಕಾಗಿ, ಮನೆಯ ಹೊಸ್ತಿಲನ್ನು ಸ್ವಚ್ಛವಾಗಿ ಇಡಬೇಕು. ಇಲ್ಲವಾದರೆ ರಾಹುವಿನ ಕೆಟ್ಟ ಪರಿಣಾಮ ಎದುರಿಸಬೇಕಾಗಬಹುದು.
ವಾಸ್ತು ಶಾಸ್ತ್ರದ (Vastu shashtra) ಪ್ರಕಾರ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಮತ್ತು ಪ್ರಗತಿ ಮುಖ್ಯ ದ್ವಾರದಿಂದ ಬರುತ್ತದೆ. ಅಲ್ಲದೆ, ಹೊಸ್ತಿಲನ್ನು ಬಲಪಡಿಸಿದಷ್ಟೂ, ರಾಹು ಹೆಚ್ಚು ಮಂಗಳಕರವಾಗಿರಲಿದೆ. ಆದ್ದರಿಂದ, ಮನೆಯ ಮುಖ್ಯ ಬಾಗಿಲು ಮತ್ತು ಹೊಸ್ತಿಲಿಗೆ ಸಂಬಂಧಿಸಿದಂತೆ ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
ಚಪ್ಪಲಿ ಮತ್ತು ಬೂಟುಗಳನ್ನು ಮುಖ್ಯದ್ವಾರದ ಬಳಿ ಇಡಬೇಡಿ
ಚಪ್ಪಲಿಗಳು ಮತ್ತು ಬೂಟುಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡಬಾರದು ಏಕೆಂದರೆ ಅದು ಶ್ರೀ ಗಣೇಶನನ್ನು ಅವಮಾನಿಸಿದಂತಾಗುತ್ತದೆ. ಇದರಿಂದ ಗಣೇಶ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾನೆ ಎಂದು ನಂಬಲಾಗಿದೆ.
ಮುಖ್ಯದ್ವಾರದ ಬಳಿ ಚಪ್ಪಲಿ ಬಿಡೋದರಿಂದ, ಮನೆಯಲ್ಲಿ ರಾಹುವಿನ ಅಡ್ಡಪರಿಣಾಮಗಳು ಹೆಚ್ಚಾಗುತ್ತವೆ (side effects). ಇದು ತುಂಬಾ ಅಶುಭ. ಹೊಸ್ತಿಲಿನ ಬಳಿ ಚಪ್ಪಲಿ ಮತ್ತು ಬೂಟುಗಳನ್ನು ಇಡುವುದು ರಾಹು ಜಾತಕದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ..
ಮನೆಯ ಮುಖ್ಯ ಬಾಗಿಲಿನ ಮುಂದೆ ಅಥವಾ ಮುಖ್ಯ ಬಾಗಿಲಿನ ಸುತ್ತಲೂ ಚಪ್ಪಲಿಗಳನ್ನು ಇಡುವುದು ರಾಹು ದೋಷಕ್ಕೆ ಕಾರಣವಾಗುತ್ತದೆ ಮತ್ತು ದುರದೃಷ್ಟವನ್ನು ತೆರೆಯುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಮತ್ತಿತರ ಸಮಸ್ಯೆಗಳು ಕಾಡಬಹುದು ಎನ್ನಲಾಗುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಇಡೋದ್ರಿಂದ, ತಾಯಿ ಲಕ್ಷ್ಮಿ (Goddedd Lakshmi) ಕೂಡ ಕೋಪಗೊಳ್ಳುತ್ತಾಳೆ ಮತ್ತು ಆರ್ಥಿಕ ಬಿಕ್ಕಟ್ಟು ಉದ್ಭವಿಸಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಯಾವತ್ತೂ ಮುಖ್ಯ ದ್ವಾರದ ಎದುರು ಚಪ್ಪಲಿ ಇಡೋ ತಪ್ಪು ಮಾಡಬೇಡಿ.
ಶೂಗಳು ಮತ್ತು ಚಪ್ಪಲಿಗಳನ್ನು ಹೇಗೆ ಇಡಬೇಕು?
ಶೂಗಳು ಮತ್ತು ಚಪ್ಪಲಿಗಳನ್ನು ಯಾವಾಗಲೂ ಮನೆಯಲ್ಲಿ ಶೂ ರ್ಯಾಕ್ ನಲ್ಲಿ ಇಡಬೇಕು. ಅಷ್ಟೇ ಅಲ್ಲ ಅವುಗಳನ್ನು ಯಾವತ್ತೂ ತಲೆಕೆಳಗಾಗಿ ಬಿಡಬಾರದು. ಅವುಗಳನ್ನು ತಕ್ಷಣವೇ ನೇರಗೊಳಿಸಬೇಕು. ಜೊತೆಗೆ ಶೂ ರ್ಯಾಕ್ ಗಳನ್ನು ಮುಖ್ಯ ದ್ವಾರದಿಂದ ದೂರವೇ ಇರಿಸಿ.