ಕೌಟುಂಬಿಕ ಕಲಹ: ಈ ವಾಸ್ತು ಟಿಪ್ಸ್ ಫಾಲೋ ಮಾಡಿದರೆ ಸಮಸ್ಯೆಗೆ ಸಿಗುತ್ತೆ ಪರಿಹಾರ!

First Published | Feb 21, 2023, 5:38 PM IST

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವು ಪರಸ್ಪರ ನಿಕಟ ಸಂಬಂಧ ಹೊಂದಿವೆ, ಎರಡೂ ಪರಸ್ಪರ ಒಂದಕ್ಕೊಂದು ಬೆಸೆದುಕೊಂಡಿದೆ ಎಂದರೆ ತಪ್ಪಾಗಲಾರದು. ನಕ್ಷತ್ರಗಳು, ಗ್ರಹಗಳು ಮತ್ತು ಅವುಗಳ ಪರಿಣಾಮಗಳನ್ನು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 

ಗ್ರಹಗಳು, ನಕ್ಷತ್ರಪುಂಜಗಳು ಮತ್ತು ರಾಶಿಗಳು ನಿಮ್ಮ ಕೆಲಸದ ಸ್ಥಳ ಮತ್ತು ವಾಸಿಸುವ ಸ್ಥಳದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ, ಆದ್ದರಿಂದ ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳದ ವಾತಾವರಣವನ್ನು ಉತ್ತಮಗೊಳಿಸಲು ವಾಸ್ತು ಶಾಸ್ತ್ರದ ಜ್ಞಾನ ಬಹಳ ಮುಖ್ಯ. ಇಲ್ಲಿ ನಿಮಗೆ ಕೆಲವು ಸುಲಭವಾದ ವಾಸ್ತು ಸಲಹೆಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಅಳವಡಿಸೋದ್ರಿಂದ ಕೌಟುಂಬಿಕ ಕಲಹವನ್ನು(Family dispute) ಹೇಗೆ ಹೋಗಲಾಡಿಸಬಹುದೆಂದು ಇಲ್ಲಿ ತಿಳಿಯಿರಿ.   
 

1. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂರ್ವ ದಿಕ್ಕಿನಲ್ಲಿ ದೊಡ್ಡ ಕಿಟಕಿ(Window) ಇರಬೇಕು. ಅದರ ಮೂಲಕ ಸೂರ್ಯನ ಬೆಳಕು ಮತ್ತು ಶಕ್ತಿ ಮನೆಯೊಳಗೆ ಬರಬಹುದು. ಮನೆಯೊಳಗೆ ಸೂರ್ಯನ ಕಿರಣ ಬೀಳೋದರಿಂದ ಮನೆಯಲ್ಲಿ ಪಾಸಿಟಿವಿಟಿ ತುಂಬಿಕೊಳ್ಳುತ್ತೆ. 

Tap to resize

2. ಗುರುಗ್ರಹವು ಈಶಾನ್ಯ ದಿಕ್ಕಿನ ಅಧಿಪತಿ. ವಾಸ್ತು ಶಾಸ್ತ್ರದ ಪ್ರಕಾರ, ಈಶಾನ್ಯ ಮೂಲೆಯಲ್ಲಿ ಪೂಜಾ ಮನೆಯನ್ನು(Pooja room) ನಿರ್ಮಿಸೋದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೇವರ ಕೋಣೆಯಲ್ಲಿ ದೇವರು ಮತ್ತು ದೇವತೆಗಳ ವಿಗ್ರಹವನ್ನು ಇರಿಸಿ. ಮರೆತು ಕೂಡ ನಿಮ್ಮ ಪೂರ್ವಜರ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಡಬೇಡಿ.

3. ವಾಯುವ್ಯ ದಿಕ್ಕಿನ ಅಧಿಪತಿ ಚಂದ್ರ. ವಾಸ್ತು ಶಾಸ್ತ್ರದ ಪ್ರಕಾರ, ಅನಗತ್ಯ ವಸ್ತುಗಳನ್ನು ಮನೆಯ ಈ ಮೂಲೆಯಲ್ಲಿ ಇಡಬಾರದು ಮತ್ತು ಆ ಸ್ಥಳವನ್ನು ಕತ್ತಲೆಯಿಂದ ತುಂಬಬಾರದು. ಇಲ್ಲದಿದ್ದರೆ, ಮನೆಯಲ್ಲಿ ವಾಸಿಸುವ ಮಹಿಳೆಯರ ಆರೋಗ್ಯವು(Woman health) ಹದಗೆಡಬಹುದು.

4. ಕುಟುಂಬ ಕಲಹವನ್ನು ತಪ್ಪಿಸಲು, ವರಾಂಡಾದಲ್ಲಿ ವಿಂಡ್ ಚೈಮ್(Wind chime) ನೇತುಹಾಕಿ ಮತ್ತು ಕೋಣೆಯಲ್ಲಿ ಸ್ಫಟಿಕವನ್ನು ಇರಿಸಿ. ವಿಂಡ್ ಚೈಮ್ ಇಡೋದರಿಂದ ಮನೆಯಲ್ಲಿ ನೆಗೆಟಿವ್ ಶಕ್ತಿ ಪ್ರವೇಶಿಸೋದನ್ನು ತಡೆಯುತ್ತೆ ಎಂದು ನಂಬಲಾಗಿದೆ. ಆದುದರಿಂದ ಇದನ್ನು ಮನೆಯ ಹೊರಗೆ ಹಾಕಿ.

5. ವಾಸ್ತು ಶಾಸ್ತ್ರದ ಪ್ರಕಾರ, ನಿಂತ ಗಡಿಯಾರವನ್ನು(Clock) ಮನೆಯಲ್ಲಿ ಇಡಬೇಡಿ. ಇದು ಕುಟುಂಬ ಸದಸ್ಯರ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯೋದಿಲ್ಲ, ನಿಂತ ಗಡಿಯಾರದಂತೆ ನಮ್ಮ ಜೀವನವೂ ಸ್ಥಗಿತವಾಗುತ್ತೆ ಎಂದು ನಂಬಲಾಗಿದೆ. 

6. ದಕ್ಷಿಣ ದಿಕ್ಕಿನ ಅಧಿಪತಿ ಅಗ್ನಿ ದೇವ, ಆದ್ದರಿಂದ ಮನೆಯ ಈ ಮೂಲೆಯಲ್ಲಿ ಅಡುಗೆಮನೆಯನ್ನು(Kitchen) ನಿರ್ಮಿಸೋದು ಉತ್ತಮವೆಂದು ಪರಿಗಣಿಸಲಾಗಿದೆ. ಅಡುಗೆ ಮಾಡುವಾಗ, ಮುಖ ಪೂರ್ವ ದಿಕ್ಕಿನಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಮನೆಯವರ ಆರೋಗ್ಯ ಉತ್ತಮವಾಗಿರುತ್ತೆ. 

7. ಈಶಾನ್ಯ ದಿಕ್ಕು ಕೇತು ಗ್ರಹಕ್ಕೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ ಮೆಟ್ಟಿಲುಗಳನ್ನು(Stairs) ನಿರ್ಮಿಸಬಾರದು. ಇದು ಗೊಂದಲವನ್ನು ಸೃಷ್ಟಿಸುತ್ತೆ  ಮತ್ತು ಅದೃಷ್ಟವನ್ನು ಕಡಿಮೆ ಮಾಡುತ್ತೆ.

8. ಮನೆಯ ಮುಖ್ಯ ದ್ವಾರವನ್ನು ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನಿರ್ಮಿಸಬಹುದು. ಆದರೆ ಮುಖ್ಯ ದ್ವಾರದ ಬಳಿ ಶೂ ಸ್ಟಾಂಡ್(Shoe stand) ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಹಾಗೆ ಮಾಡೋದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತೆ.

Latest Videos

click me!