ಮನೆಯಲ್ಲೇನೋ ನೆಮ್ಮದಿ ಇಲ್ಲ ಅನಿಸಿದರೆ ಮೊದಲು ಈ ಕೆಲಸ ಮಾಡಿ ನೋಡಿ!

First Published | Nov 22, 2023, 3:43 PM IST

ವಾಸ್ತು ಮತ್ತು ಜ್ಯೋತಿಷ್ಯದಲ್ಲಿ, ಮನೆಯ ನಕಾರಾತ್ಮಕತೆಯನ್ನು ತೆಗೆದುಹಾಕಲು ಅನೇಕ ರೀತಿಯ ಪರಿಹಾರಗಳನ್ನು ಹೇಳಲಾಗಿದೆ. ಇದನ್ನು ಮಾಡುವುದರಿಂದ, ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. 
 

ಹಿಂದೂ ಧರ್ಮದಲ್ಲಿ (Hindi Region) ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಮನೆಯ ನಕಾರಾತ್ಮಕತೆಯನ್ನು ತೆಗೆದುಹಾಕಲು ವಿವಿಧ ಕ್ರಮಗಳನ್ನು ಅನುಸರಿಸಲು ಹೇಳಲಾಗುತ್ತೆ, ಆದ್ದರಿಂದ ಅವುಗಳನ್ನು ಪ್ರಯತ್ನಿಸುವ ಮೂಲಕ ಗ್ರಹ ದೋಷಗಳು ಮತ್ತು ಎಲ್ಲಾ ತೊಂದರೆಗಳನ್ನು ತೊಡೆದು ಹಾಕಬಹುದು.

ವಾಸ್ತುವಿನಲ್ಲಿ (Vaastu) ಎಲ್ಲ ವಸ್ತುಗಳನ್ನು ಇಡಲು ಸರಿಯಾದ ದಿಕ್ಕಿನ ಬಗ್ಗೆ ಉಲ್ಲೇಖಿಸುತ್ತದೆ. ಇದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ . ಇದರಿಂದ ವ್ಯಕ್ತಿಯು ಶುಭ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ. ಮನೆಯ ನಕಾರಾತ್ಮಕತೆಯನ್ನು ತೆಗೆದು ಹಾಕಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಜ್ಯೋತಿಷಿಗಳ ಮೂಲಕ ತಿಳಿದುಕೊಳ್ಳೋಣ. 

Tap to resize

ನಕಾರಾತ್ಮಕತೆಯನ್ನು ತೆಗೆದುಹಾಕಲು, ಪ್ರತಿದಿನ ಮನೆಯನ್ನು ಉಪ್ಪಿನಿಂದ ಒರೆಸಿ.
ನೀವು ಮನೆಯ ನಕಾರಾತ್ಮಕತೆಯನ್ನು (negativity) ತೆಗೆದು ಹಾಕಲು ಬಯಸಿದರೆ, ಶುದ್ಧ ನೀರಿಗೆ ಉಪ್ಪು ಸೇರಿಸುವ ಮೂಲಕ ಮನೆಯನ್ನು ಪ್ರತಿದಿನ ಒರೆಸಬೇಕು. ಇದು ವ್ಯಕ್ತಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಸಮಸ್ಯೆಗಳನ್ನು ನಿವಾರಿಸುತ್ತೆ, ಆದರೆ ಗುರುವಾರ ಉಪ್ಪು ನೀರಿನಿಂದ (salt water) ಒರೆಸಬೇಡಿ ಎಂಬುದನ್ನು ನೆನಪಿನಲ್ಲಿಡಿ. ಇದು ಹಣದ ನಷ್ಟಕ್ಕೂ ಕಾರಣವಾಗಬಹುದು. ಅಲ್ಲದೆ, ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಇರಿಸಿ. ಹೀಗೆ ಮಾಡೋದರಿಂದ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಬಹುದು. 
 

ಪ್ರತಿದಿನ ಫೋಟೋಗಳನ್ನು ಸ್ವಚ್ಛಗೊಳಿಸಿ. 
 ಮನೆಯಲ್ಲಿನ ಫೋಟೋಗಳನ್ನು ಪ್ರತಿದಿನ ಸ್ವಚ್ಛವಾದ (clean the photo) ಬಟ್ಟೆಯಿಂದ ಒರೆಸಿ. ಇದನ್ನು ಮಾಡುವುದರಿಂದ, ನೀವು ಎಂದಿಗೂ ಅನಗತ್ಯ ತೊಂದರೆಗಳನ್ನು ಎದುರಿಸೋದಿಲ್ಲ ಮತ್ತು ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಯಾಗುತ್ತವೆ. 

ಮನೆಯ ಸಸ್ಯಗಳಿಂದ ಪ್ರತಿದಿನ ನೀರನ್ನು ಬದಲಿಸಿ  
ನೀವು ಮನೆಯಲ್ಲಿ ನೀರಿನ ಸಸ್ಯಗಳನ್ನು ನೆಟ್ಟಿದ್ದರೆ, ಪ್ರತಿದಿನ ಅದರಿಂದ ನೀರನ್ನು ತೆಗೆದುಹಾಕಿ. ಇದನ್ನು ಮಾಡುವುದರಿಂದ, ನಕಾರಾತ್ಮಕತೆಯನ್ನು ತೆಗೆದುಹಾಕಬಹುದು. ಜೊತೆಗೆ ಇದು ಮನೆಯ ಸುತ್ತಲಿನ ಪರಿಸರವನ್ನೂ ಆಹ್ಲಾದಕರವಾಗಿರುತ್ತದೆ ಮತ್ತು ಭಿನ್ನಾಭಿಪ್ರಾಯದ ಪರಿಸ್ಥಿತಿಯನ್ನು ಸಹ ನಿವಾರಿಸಬಹುದು. 

ಗಿಡಗಳಿರುವ ಕುಂಡಕ್ಕೆ ಪ್ರತಿದಿನ ಅರಿಶಿನ ಸೇರಿಸಿ.
ನಿಮ್ಮ ಮನೆಯಲ್ಲಿ ಸಸ್ಯಗಳಿದ್ದರೆ, ಆ ಗಿಡದ ಕುಂಡಕ್ಕೆ ಪ್ರತಿದಿನ ಅರಿಶಿನ (turmeric) ಸೇರಿಸಿ. ಇದನ್ನು ಮಾಡುವುದರಿಂದ, ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ನಿವಾರಿಸಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯ ಸಹ ಬರೋದಿಲ್ಲ. ಕಪ್ಪು ಇರುವೆಗಳು ಸಸ್ಯದೊಳಗೆ ಬರದಂತೆ ನೋಡಿಕೊಳ್ಳಿ. ಇದು ವ್ಯಕ್ತಿಯನ್ನು ರೋಗಕ್ಕೆ ಗುರಿಯಾಗುವಂತೆ ಮಾಡುತ್ತದೆ. ಆದ್ದರಿಂದ, ಪ್ರತಿದಿನ ಕುಂಡದಲ್ಲಿ ಅರಿಶಿನ ಸೇರಿಸಿ.

Latest Videos

click me!