ಯಶಸ್ಸಿಗಾಗಿ ಏಳು ಅಶ್ವಗಳ (Horse) ಚಿತ್ರ
ವಾಸ್ತು ಪ್ರಕಾರ, ದೀಪಾವಳಿಯಂದು ಏಳು ಕುದುರೆಗಳ ಚಿತ್ರವನ್ನು ಹಾಕುವುದು ಅದೃಷ್ಟ (Luck) ಹೆಚ್ಚಿಸುತ್ತದೆ ಮತ್ತು ಮಾತಾ ಲಕ್ಷ್ಮಿಯ ಅನುಗ್ರಹ ಸದಾ ನಿಮ್ಮ ಮೇಲಿರುತ್ತೆ. ಈ ಚಿತ್ರವನ್ನು ಮನೆಯಲ್ಲಿಡೋದರಿಂದ, ನಿಮ್ಮ ಅಪೂರ್ಣ ಕಾರ್ಯಗಳು ವೇಗಗೊಳ್ಳುತ್ತವೆ ಮತ್ತು ನಿಮ್ಮ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಓಡುವ ಏಳು ಕುದುರೆಗಳು ಪ್ರಗತಿ, ಧೈರ್ಯ ಮತ್ತು ಯಶಸ್ಸನ್ನು ಸಂಕೇತಿಸುತ್ತವೆ. ದೀಪಾವಳಿಯ ಮೊದಲು, ಈ ಚಿತ್ರವನ್ನು ಮನೆಯ ಮುಖ್ಯ ಬಾಗಿಲಿನ ಮೇಲೆ ಅಥವಾ ಎಲ್ಲಾ ಸದಸ್ಯರು ಬರುವಾಗ ಮತ್ತು ಹೋಗುವಾಗ ನೋಡಬಹುದಾದ ಸ್ಥಳದಲ್ಲಿ ಇರಿಸಿ.