ಮನೆಯ ಹಿರಿಯರು ರಾತ್ರಿ ಬಟ್ಟೆ ಒಗೀಬಾರದು ಅನ್ನೋದ್ಯಾಕೆ?

First Published | Nov 20, 2023, 12:42 PM IST

ಕೆಲವರಿಗೆ ರಾತ್ರಿ ಹೊತ್ತು ಬಟ್ಟೆ ವಾಶ್ ಮಾಡುವ ಅಭ್ಯಾಸ ಇರುತ್ತೆ. ಆದರೆ ಹೀಗೆ ಮಾಡೋದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಅನ್ನೋದು ಗೊತ್ತಾ? ಹೌದು, ವಾಸ್ತು ಶಾಸ್ತ್ರದಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ, ಅದರ ಬಗ್ಗೆ ತಿಳಿಯಿರಿ. 
 

ವಾಸ್ತು ಶಾಸ್ತ್ರದಲ್ಲಿ, ಪ್ರತಿಯೊಂದು ಕೆಲಸವನ್ನು ಮಾಡಲು ಕೆಲವು ನಿಯಮಗಳಿವೆ, ಅದನ್ನು ನಾವು ಅನುಸರಿಸಬೇಕು. ಅದೇ ಸಮಯದಲ್ಲಿ, ರಾತ್ರಿಯಲ್ಲಿ ಬಟ್ಟೆಗಳನ್ನು ತೊಳೆಯಬಾರದು (washing cloths at night) ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರ ಹಿಂದಿನ ಕಾರಣವನ್ನು ಇಂದು ನಾವು ನಿಮಗೆ ಹೇಳುತ್ತೇವೆ.

ರಾತ್ರಿಯಲ್ಲಿ ಬಟ್ಟೆ ಒಗೆಯುವುದು
ವಾಸ್ತು ಶಾಸ್ತ್ರದ (Vastu shastra) ಪ್ರಕಾರ, ಬಟ್ಟೆಗಳನ್ನು ರಾತ್ರಿಯಲ್ಲಿ ತೊಳೆಯಬಾರದು ಅಥವಾ ಒಣಗಿಸಬಾರದು. ಹಾಗೆ ಮಾಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಯಾಕೆ ಅನ್ನೋದನ್ನು ತಿಳಿಯಿರಿ. 

Tap to resize

ಕೆಟ್ಟ ಪ್ರಭಾವ
ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಬಟ್ಟೆಗಳನ್ನು ಒಗೆದರೆ, ಭವಿಷ್ಯದಲ್ಲಿ ಅದರ ಅಡ್ಡಪರಿಣಾಮಗಳನ್ನು (bad effect) ಎದುರಿಸಬೇಕಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದುದರಿಂದ ಆ ತಪ್ಪನ್ನು ಮಾಡಬಾರದು. 
 

ಮನೆಯಲ್ಲಿ ನಕಾರಾತ್ಮಕತೆ
ವಾಸ್ತು ಪ್ರಕಾರ, ರಾತ್ರಿಯಲ್ಲಿ ಬಟ್ಟೆ ಒಗೆಯುವುದು ಮನೆಯಲ್ಲಿ ನಕಾರಾತ್ಮಕತೆಯನ್ನು (negativity at home) ತರುತ್ತದೆ. ಅಲ್ಲದೆ, ಒದ್ದೆ ಬಟ್ಟೆಗಳನ್ನು ರಾತ್ರಿಯಲ್ಲಿ ಹೊರಗೆ ಒಣಗಿಸಬಾರದು. ಇದರಿಂದ 

ನಕಾರಾತ್ಮಕ ಶಕ್ತಿ (negative energy)
ರಾತ್ರಿಯಲ್ಲಿ ಬಟ್ಟೆಗಳನ್ನು ಒಗೆಯುವುದು ಮತ್ತು ಆಕಾಶದ ಕೆಳಗೆ ಒಣಗಿಸುವುದರಿಂದ ಬಟ್ಟೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ನಿಮ್ಮ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತೆ. 
 

ಜೀವನದ ಮೇಲೆ ಕೆಟ್ಟ ಪರಿಣಾಮ
ಮರುದಿನ ಬೆಳಿಗ್ಗೆ ಈ ಬಟ್ಟೆಗಳನ್ನು ಧರಿಸುವುದರಿಂದ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ, ಪ್ರತಿಯೊಂದು ಕಾರ್ಯಕ್ಕೂ ಅಡ್ಡಿಯಾಗಬಹುದು.

ಒತ್ತಡಕ್ಕೆ ಕಾರಣ 
ರಾತ್ರಿಯಲ್ಲಿ ಬಟ್ಟೆ ಒಗೆಯುವುದರಿಂದ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಇದಲ್ಲದೆ, ವ್ಯಕ್ತಿಯು ಎಲ್ಲಾ ಸಮಯದಲ್ಲೂ ಒತ್ತಡವನ್ನು ಅನುಭವಿಸಬಹುದು. ಹಾಗಾಗಿ ರಾತ್ರಿಯಲ್ಲಿ ಬಟ್ಟೆ ವಾಶ್ ಮಾಡುವ ತಪ್ಪು ಮಾಡಬೇಡಿ. 

ಬಯಲಿನಲ್ಲಿ ಒಣಗಿಸಬೇಡಿ
ಕೆಲವು ಕಾರಣಗಳಿಗಾಗಿ ನೀವು ರಾತ್ರಿಯಲ್ಲಿ ಬಟ್ಟೆಗಳನ್ನು ಒಗೆಯಬೇಕಾದರೆ, ಅವುಗಳನ್ನು ಬಯಲಿನಲ್ಲಿ ಅಂದರೆ ಆಕಾಶದ ಕೆಳಗೆ ಒಣಗಿಸಬಾರದು.  ಬಟ್ಟೆಗಳನ್ನು ಬಯಲಿನಲ್ಲಿ ಒಣಗಿಸುವುದರಿಂದ ಅವುಗಳ ಮೇಲೆ ಕೀಟಾಣುಗಳು ಬರಬಹುದು. ಅಥವಾ ಪಕ್ಷಿಗಳ ಮಲಮೂತ್ರ ಅದರ ಮೇಲೆ ಬೀಳುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇದರಿಂದ ಸಮಸ್ಯೆ ಖಚಿತ. 
 

Latest Videos

click me!