ವಾಸ್ತು ಹೇಳುತ್ತೆ ಈ ಗಿಡಗಳು ಮನೆಯಲ್ಲಿದ್ದರೆ ಬದಲಾಗುತ್ತೆ ಲಕ್

First Published Oct 19, 2020, 1:46 PM IST

ವಾಸ್ತು ಶಾಸ್ತ್ರದಲ್ಲಿ ಗಿಡಗಳಿಗೆ ಬಹಳ ಮಹತ್ವವಿದೆ. ಮನೆಯಲ್ಲಿ ಎಷ್ಟು ಗಿಡ, ಮರಗಳನ್ನು ಬೆಳೆಸುತ್ತೀರಿ ಅಷ್ಟೇ ಉತ್ತಮ ಪರಿಣಾಮ ಮನೆಯ ಮೇಲೆ ಬೀರಲಿದೆ. ಅದರಲ್ಲೂ ಕೆಲವೊಂದು ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಪಾಸಿಟಿವ್‌ ಎನರ್ಜಿ, ಲಕ್‌, ಸಂತೋಷ, ಸಂಪತ್ತು ವೃದ್ಧಿಯಾಗುತ್ತದೆ. ಇದರಿಂದ ಮನಸಿಗೆ ಶಾಂತಿ ಕೂಡ ಸಿಗುತ್ತೆ... 

ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಮಾಹಿತಿ ನೀಡಲಾಗಿದೆ, ಅವುಗಳನ್ನು ಪ್ರಪಂಚದಾದ್ಯಂತ ಲಕ್ಕಿ ಪ್ಲ್ಯಾಂಟ್‌ ಎಂದು ಕರೆಯಲಾಗುತ್ತದೆ. ವಾಸ್ತುವಿನಲ್ಲಿ ಪ್ರಾಮುಖ್ಯತೆ ಪಡೆದ ಗಿಡಗಳ ಬಗ್ಗೆ ಮಾಹಿತಿ ಇಲ್ಲಿದೆ.
undefined
ಮನಿಪ್ಲ್ಯಾಂಟ್‌ : ಈ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಗುಡ್‌ ಲಕ್‌ ಹಾಗೂ ಹಣ ಹೆಚ್ಚಾಗುತ್ತದೆ. ಮನಿ ಪ್ಲಾಂಟನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಬೆಳೆಸಿ. ಇದರಿಂದ ಹಣ ವೃದ್ಧಿಯಾಗುತ್ತದೆ. ಅಲ್ಲದೆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ.
undefined
ತಾವರೆ : ತಾವರೆ ಮತ್ತು ಲಿಲ್ಲಿ ಹೂವುಗಳು ಮನೆಯಲ್ಲಿ ಭಾಗ್ಯ ಮತ್ತು ಪಾವಿತ್ರ್ಯತೆಯನ್ನು ಹರಡುತ್ತದೆ. ತಾವರೆ ಹೂ ಮನ ಶಾಂತಿ ಹಾಗೂ ಸಮೃದ್ಧಿಯನ್ನು ತರುತ್ತದೆ. ಧಾರ್ಮಿಕತೆ ನಂಬುವುದಾದರೆ ಈ ಗಿಡವನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದು.
undefined
ಪೀಸ್‌ ಲಿಲ್ಲಿ : ಈ ಡಾರ್ಕ್‌ ಗ್ರೀನ್‌ ಗಿಡದಲ್ಲಿ ಅರಳುವ ಬ್ರೈಟ್‌ ಬಿಳಿ ಬಣ್ಣದ ಲಿಲ್ಲಿ ಹೂವುಗಳು ಮನೆಯಲ್ಲಿ ಸಂಪತ್ತು ವೃದ್ಧಿ ಮಾಡುತ್ತದೆ, ಜೊತೆಗೆ ಹೊರಗಿನ ಗಾಳಿಯ ಕ್ವಾಲಿಟಿಯನ್ನು ಉತ್ತಮಗೊಳಿಸುತ್ತದೆ. ಮಾನಸಿಕವಾಗಿ ಕುಗ್ಗಿದಾಗ ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ. ಮನೆಯಲ್ಲಿ ನೆಮ್ಮದಿ ಸಿಗುತ್ತದೆ, ಹಾಗೂ ಮನೆ ಮಂದಿ ಸಹನೆ - ಸಹಬಾಳ್ವೆಯಿಂದ ಬಾಳುತ್ತಾರೆ.
undefined
ತಾಳೆ ಮರ : ಇದಕ್ಕೆ ಫೆಂಗ್‌ಶುಯಿಯಲ್ಲಿ ಮಹತ್ವದ ಸ್ಥಾನವಿದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚುತ್ತದೆ.
undefined
ಕ್ಯಾಕ್ಟಸ್‌ (ಕಳ್ಳಿ ಗಿಡ) : ಸುಂದರವಾದ ಹೂಗಳನ್ನು ಹೊಂದಿರುವ ಕಳ್ಳಿ ಗಿಡವು ಗುಡ್‌ ಲಕ್‌ನ ಸಂಕೇತ. ಇದರಿಂದ ಮನೆಯಲ್ಲಿ ಅದೃಷ್ಟ ತುಂಬುತ್ತದೆ.
undefined
ತುಳಸಿ : ಇದು ಧಾರ್ಮಿಕ ಕಾರ್ಯದಲ್ಲಿ ಬಳಸುವಂತಹ ಪವಿತ್ರ ಗಿಡವಾಗಿದೆ. ಧಾರ್ಮಿಕ ಪೂಜೆ ವಿಧಿ ವಿಧಾನಗಳಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಮನೆಯಲ್ಲಿ ಇದ್ದರೆ ದೈವೀಕ ಶಕ್ತಿ ಮನೆಯಲ್ಲಿ ಆವರಿಸುತ್ತದೆ ಎನ್ನಲಾಗುತ್ತದೆ.
undefined
ಲಕ್ಕಿ ಬಾಂಬು : ಬಿದಿರಿನ ಗಿಡ ಅಥವಾ ಲಕ್ಕಿ ಬಾಂಬು ಮನೆಯಲ್ಲಿದ್ದರೆ ಅದೃಷ್ಟ ಹೆಚ್ಚುತ್ತದೆ. ಜೊತೆಗೆ ಇದು ದೀರ್ಘಾಯುಸ್ಸು, ಸಂಪತ್ತು, ಸಂತೋಷದ ಸಂಕೇತವಾಗಿದೆ. ಇದನ್ನು ಮನೆಯಲ್ಲಿ ಕೆಲಸದ ಜಾಗದಲ್ಲಿ ಇಡುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ
undefined
ಮಾರ್ನಿಂಗ್‌ ಗ್ಲೋರಿ : ಈ ಹೂವಿನ ಗಿಡ ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತುಂಬುತ್ತದೆ. ನಿಮಗೆ ಚೆನ್ನಾಗಿ ನಿದ್ರೆ ಬರಬೇಕು ಎಂದಾದರೆ ಈ ಹೂವಿನ ಬೀಜವನ್ನು ದಿಂಬಿನ ಕೆಳಗೆ ಇಟ್ಟು ಮಲಗಬೇಕು. ಸುಖವಾದ ನಿದ್ದೆ ನಿಮ್ಮದಾಗುತ್ತದೆ.
undefined
ಮಲ್ಲಿಗೆ : ಮಲ್ಲಿಗೆಯ ಪರಿಮಳವೇ ಮನಸಿಗೆ ನೆಮ್ಮದಿ ನೀಡುತ್ತದೆ. ಮಲ್ಲಿಗೆ ಹೂವು ರೊಮ್ಯಾನ್ಸ್ ಜೀವಂತವಾಗಿರಲು ಸಹಾಯ ಮಾಡುತ್ತದೆ. ಈ ಗಿಡ ಮನೆಯಲ್ಲಿದ್ದರೆ ಕೆಲಸದ ಒತ್ತಡ, ಮತ್ತೇನೋ ಕಾರಣಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾದಾಗ ಒತ್ತಡವನ್ನು ಕಡಿಮೆ ಮಾಡುತ್ತದೆ.
undefined
click me!