ವಾಸ್ತು ದೋಷ; ಫೆಂಗ್ ಶುಯ್‌ನಲ್ಲಿದೆ ಪರಿಹಾರ

First Published Aug 4, 2020, 5:28 PM IST

ಚೀನೀ ವಾಸ್ತು ಶಾಸ್ತ್ರ ಫೆಂಗ್ ಶುಯ್ ಕೂಡಾ ನಮ್ಮ ವಾಸ್ತು ಶಾಸ್ತ್ರದಂತೆಯೇ- ಅದು ಭೂಮಿ, ಬೆಂಕಿ, ಆಕಾಶ, ನೀರು, ಹಾಗೂ ಗಾಳಿಯನ್ನು ಬ್ಯಾಲೆನ್ಸ್ ಮಾಡುವ ವೈಜ್ಞಾನಿಕ ತತ್ವ ಹೊಂದಿದೆ. ಮನೆ ಅಥವಾ ಕಚೇರಿಯಲ್ಲಿ ಕೆಲ ವಾಸ್ತುದೋಷಗಳಿದ್ದರೆ ಅವನ್ನು ಸರಿಪಡಿಸಲು ಫೆಂಗ್ ಶುಯ್‌ನಲ್ಲಿ ಪರಿಹಾರಗಳಿವೆ. 

ಲಿವಿಂಗ್ ಕೋಣೆಯಲ್ಲಿ ಅಕ್ವೇರಿಯಂ ಇಡುವುದರಿಂದ ಅದು ಮನರಂಜನೆ ಹಾಗೂ ರಿಲ್ಯಾಕ್ಸೇಶನ್ ಮೂಲವಾಗುತ್ತದೆ. ಈ ಅಕ್ವೇರಿಯಂನ್ನು ಲಿವಿಂಗ್ ಕೋಣೆಯ ಆಗ್ನೇಯ ದಿಕ್ಕಿನಲ್ಲಿಡುವುದರಿಂದ ಅದು ಮನೆಗೆ ಬಹಳಷ್ಟು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಅಕ್ವೇರಿಯಂ ಆಕಾರ ಚೌಕ ಇಲ್ಲವೇ ಆಯತ ಇರುವುದು ಉತ್ತಮ. ವೃತ್ತಾಕಾರದ ಅಕ್ವೇರಿಯಂ ಆದರೆ ಉತ್ತರ ದಿಕ್ಕಿನಲ್ಲಿರಿಸಿ.
undefined
ನೀವು ಹೊಸ ಉದ್ಯೋಗ, ಅದೃಷ್ಟ, ಅವಕಾಶಗಳಿಗೆ ಹಂಬಲಿಸುತ್ತಿದ್ದರೆ, ಸೀದಾ ಮನೆಯೊಳಗೆ ಹೋಗಿ ನಿಮಗೆ ಬೇಡದ 27 ವಸ್ತುಗಳನ್ನು ಕಲೆ ಹಾಕಿ ಅದನ್ನು ಬೇಕಾದವರಿಗೆ ನೀಡಿ ಇಲ್ಲವೇ ಮಾರಿಬಿಡಿ. ಇದರಿಂದ ಮನೆಯಲ್ಲಿ ಹೊಸ ವಸ್ತುಗಳು ಬರಲು ಸ್ಥಳಾವಕಾಶವಾಗುತ್ತದೆ.
undefined
ಮನೆಯ ಹೊರಾಂಗಣವನ್ನು ಹೆಚ್ಚು ಸುಂದರವಾಗಿಸಿ. ಉತ್ತಮ ಬೆಳಕನ್ನು ಹೊಂದಿದ ಆಕರ್ಷಕ ಬಲ್ಬ್ ಅಳವಡಿಸಿ. ತೆಂದದ ಡೋರ್ ಮ್ಯಾಟ್ ಹಾಕಿ, ಸಾಧ್ಯವಾದಷ್ಟು ಹಸಿರು ಗಿಡಗಳನ್ನು ಜೋಡಿಸಿ. ಚೆಂದದೊಂದು ಗಾಳಿಗಂಟೆ ಅಳವಡಿಸಿ. ಈ ಹೊರಾಂಗಣ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಇಲ್ಲಿಂದಲೇ ಮನೆಯೊಳಗೆ ಪಾಸಿಟಿವ್ ಎನರ್ಜಿ ಹರಿಯಬೇಕಲ್ಲವೇ ?
undefined
ಮನೆಯಲ್ಲಿ ಉತ್ತಮ ಗುಣಮಟ್ಟದ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಿ. ಇವೆರಡೂ ಕೂಡಾ ಪಾಸಿಟಿವ್ ಎನರ್ಜಿಯನ್ನು ಎಳೆತರುತ್ತವೆ. ಕಿಟಕಿಗಳನ್ನು ತೆರೆದಿಡಿ. ಫೆಂಗ್ ಶುಯ್ ಗಾಳಿ ಸ್ವಚ್ಛಗೊಳಿಸುವ ಸಸ್ಯಗಳನ್ನು ಮನೆಯಲ್ಲಿರಿಸಿ.
undefined
ದೊಡ್ಡದಾದ ಕಲಾಕೃತಿಯಂತಿರುವ ಗಡಿಯಾರ ಲಿವಿಂಗ್ ರೂಂ ಕಳೆಯನ್ನು ಹೆಚ್ಚಿಸುತ್ತದೆ. ಪೆಂಡುಲಮ್ ಇರುವ ಗಡಿಯಾರವಾದರೆ ವಾಯುವ್ಯ ದಿಕ್ಕಿನಲ್ಲಿ ನೇತು ಹಾಕುವುದು ಒಳಿತು. ಇದರಿಂದ ನಿಮಗೆ ಪ್ರವಾಸ ಯೋಗ ಹೆಚ್ಚುತ್ತದೆ. ಜೊತೆಗೆ, ಗೆಳೆಯರ ಸಹಾಯ ಹೆಚ್ಚುತ್ತದೆ. ಡೈನಿಂಗ್ ಟೇಬಲ್ ಬಳಿಯಲ್ಲಿ ಗಡಿಯಾರ ಇರಿಸಬೇಡಿ.
undefined
ಮುರಿದು ಹೋದ ಯಾವುದೇ ವಸ್ತುಗಳನ್ನು ಮನೆಯಲ್ಲಿರಿಸಿಕೊಳ್ಳಬೇಡಿ. ಮುರಿದ ಬಾಗಿಲ ಚಿಲಕ, ಮುರಿದ ಪೇಂಟಿಂಗ್, ಒಡಕು ಹೂಕುಂಡ ಇತ್ಯಾದಿಗಳಾವುವೂ ಮನೆಯಲ್ಲಿರಬಾರದು. ಒಂದು ವೇಳೆ ಮುರಿದ ವಸ್ತು ಅಗತ್ಯವಿದ್ದಲ್ಲಿ ತಕ್ಷಣವೇ ಅದರ ರಿಪೇರಿ ಮಾಡಿಸಿ ಇಟ್ಟುಕೊಳ್ಳಿ.
undefined
ಮನೆಯಲ್ಲಿ ಉತ್ತಮ ಗುಣಮಟ್ಟದ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಿ. ಇವೆರಡೂ ಕೂಡಾ ಪಾಸಿಟಿವ್ ಎನರ್ಜಿಯನ್ನು ಎಳೆತರುತ್ತವೆ. ಕಿಟಕಿಗಳನ್ನು ತೆರೆದಿಡಿ. ಫೆಂಗ್ ಶುಯ್ ಗಾಳಿ ಸ್ವಚ್ಛಗೊಳಿಸುವ ಸಸ್ಯಗಳನ್ನು ಮನೆಯಲ್ಲಿರಿಸಿ.
undefined
ಮನೆಯ ಸಮೃದ್ಧಿಯನ್ನು ಹೆಚ್ಚಿಸಲು ಹರಿಯುವ ನೀರಿನ ಚಿತ್ರಗಳನ್ನು ಬಳಸಿ. ನಿಂತ ನೀರು, ಕೆರೆಯ ಚಿತ್ರಗಳ ಬದಲಿಗೆ ಧುಮ್ಮಿಕ್ಕುವ ಜಲಪಾತದ ಚಿತ್ರ ಉತ್ತಮ.
undefined
ಮನೆಯು ಸಂತೆ ಮಾರ್ಕೆಟ್ಟಿನಂತಿದ್ದರೆ ಎನರ್ಜಿಯು ಎಲ್ಲೆಡೆ ಸರಿಯಾಗಿ ಹರಿದಾಡಲಾಗುವುದಿಲ್ಲ. ಹಾಗಾಗಿ, ಸದಾ ಸ್ವಚ್ಛವಾದ, ಜೋಡಿಸಿಟ್ಟ ಮನೆ ನಿಮ್ಮದಾಗಿರಲಿ. ಬೇಡದ ವಸ್ತುಗಳನ್ನು ಎಸೆಯಿರಿ. ಮ್ಯೂಸಿಕ್, ಸ್ವಚ್ಛ ಗಾಳಿಯು ಮನೆಯಲ್ಲಿ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ
undefined
ಲಿವಿಂಗ್ ರೂಂನ ಆಗ್ನೇಯ ದಿಕ್ಕಿನಲ್ಲಿ ಹಸಿರು ಸಸ್ಯಗಳನ್ನಿರಿಸುವುದರಿಂದ ಅವು ಸಮೃದ್ಧಿ ತರುತ್ತವೆ. ದಕ್ಷಿಣಕ್ಕಿರಿಸಿದರೆ ಅವು ನಿಮಗೆ ಪ್ರಸಿದ್ಧಿಯನ್ನೂ, ಗೌರವವನ್ನೂ ತರುತ್ತವೆ. ಪೂರ್ವ ಭಾಗದಲ್ಲಿ ಸಸ್ಯಗಳನ್ನಿರಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಒಟ್ಟಿನಲ್ಲಿ ಹಸಿರು ಸಸ್ಯಗಳು ಮನೆಗೆ ಜೀವಂತಿಕೆ ಕಳೆ ನೀಡುತ್ತವೆ.
undefined
ಹಸಿರು ಬಣ್ಣವು ಬೆಳವಣಿಗೆ ಹಾಗೂ ಗುಣಮುಖದ ಸೂಚನೆ. ಹಾಗಾಗಿ, ಮನೆಯಲ್ಲಿ ಸಾಕಷ್ಟು ಹಸಿರು ಬಣ್ಣಗಳನ್ನು ಬಳಸಿ. ಪೂರ್ವ, ಆಗ್ನೇಯ, ದಕ್ಷಿಣ ದಿಕ್ಕುಗಳಲ್ಲಿ ಹಸಿರು ಬಣ್ಣದ ಬಳಕೆ ಹೆಚ್ಚಿರಲಿ.
undefined
ಮನೆಯ ತುಂಬೆಲ್ಲ ಸಂತೋಷ ಸೂಚಿಸುವ ಚಿತ್ರಗಳಿರಲಿ. ಅದರಲ್ಲೂ ಅಡುಗೆ ಕೋಣೆ, ಲಿವಿಂಗ್ ರೂಂ ಹಾಗೂ ಮನೆಯ ಪೂರ್ವ ಭಾಗದಲ್ಲಿ ಕುಟುಂಬದ, ಪ್ರಾಣಿಗಳ ಇನ್ನಿತರೆ ಸಂತೋಷವನ್ನು ಸೂಚಿಸುವಂಥ ಚಿತ್ರಗಳನ್ನು ನೇತುಹಾಕಿ.
undefined
click me!