ಮಾಡುವ ಸರಳ ವಿಧಾನ
ಮಡಕೆಯ ಸಿದ್ಧತೆ: ಮಣ್ಣಿನ ಮಡಕೆಯನ್ನು ಚೆನ್ನಾಗಿ ತೊಳೆದು ಒಣಗಿಸಿ. ಅರಿಶಿನ ಮತ್ತು ಶ್ರೀಗಂಧದ ಪೇಸ್ಟ್ ಮಾಡಿ ಮಡಕೆಯ ಹೊರಭಾಗಕ್ಕೆ ಹಚ್ಚಿ, 5 ಕಡೆ ಕುಂಕುಮದ ಬೊಟ್ಟು ಇಡಿ.
ಒಳಗೆ ಹಾಕಬೇಕಾದ ವಸ್ತುಗಳು: ಮಡಕೆಯೊಳಗೆ ಸ್ವಲ್ಪ ಅರಿಶಿನ, ಕುಂಕುಮ, ಸುಗಂಧಭರಿತ ಜಾವಾದ್ ಪೌಡರ್ ಹಾಕಿ, ನಂತರ ಕಾಲು ಭಾಗದಷ್ಟು ಕಲ್ಲುಪ್ಪನ್ನು ತುಂಬಿಸಿ.
11 ನಾಣ್ಯಗಳ ರಹಸ್ಯ: ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ 11 ನಾಣ್ಯಗಳನ್ನಿಟ್ಟು ಗಂಟು ಕಟ್ಟಿ (ಮಡಚಿ), ಅದನ್ನು ಮಡಕೆಯೊಳಗಿನ ಕಲ್ಲುಪ್ಪಿನ ಮಧ್ಯಭಾಗದಲ್ಲಿಡಿ.
ಲವಂಗದ ಬಳಕೆ: ಆ ಬಟ್ಟೆಯ ಮೇಲೆ ಮತ್ತೆ ಸ್ವಲ್ಪ ಕಲ್ಲುಪ್ಪು ಹಾಕಿ ಮುಚ್ಚಿ, ಅದರ ಮೇಲ್ಭಾಗದಲ್ಲಿ 5 ಲವಂಗಗಳನ್ನು ಇಡಿ.
ಪೂಜೆ: ಈ ಮಡಕೆಯನ್ನು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಫೋಟೋದ ಮುಂದೆ ಇಟ್ಟು ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವು ಇಟ್ಟು ಧೂಪ-ದೀಪಗಳಿಂದ ಭಕ್ತಿಯಿಂದ ಪೂಜೆ ಮಾಡಿ.