Viral mopping hack: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ನೆಲ ಒರೆಸುವ ನೀರಿಗೆ ಈ 3 ವಸ್ತುಗಳನ್ನು ಬೆರೆಸಿ ನೋಡಿ! ಸದ್ಯ ಇನ್‌ಸ್ಟಾಗ್ರಾಂನಲ್ಲಿ 2.6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದು ಭಾರೀ ವೈರಲ್ ಆಗುತ್ತಿರುವ ಈ ಸಿಂಪಲ್ ಟಿಪ್ಸ್ ಬಗ್ಗೆ ಇಲ್ಲಿದೆ ಮಾಹಿತಿ.
ನೆಟ್ಟಿಗರ ಗಮನ ಸೆಳೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನೂರಾರು ಸಲಹೆಗಳು, ಮನೆಮದ್ದುಗಳು ಮತ್ತು ವಾಸ್ತು ಟಿಪ್ಸ್‌ಗಳು ಹರಿದಾಡುತ್ತಿರುತ್ತವೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಅಂತಹದ್ದೇ ಒಂದು ವಿಡಿಯೋ ಭರ್ಜರಿ ವೈರಲ್ ಆಗಿದ್ದು, ಬರೋಬ್ಬರಿ 2.6 ಮಿಲಿಯನ್‌ಗಿಂತಲೂ (26 ಲಕ್ಷಕ್ಕೂ ಹೆಚ್ಚು) ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ನೆಟ್ಟಿಗರ ಗಮನ ಸೆಳೆದಿದೆ. ಮನೆಯಲ್ಲಿ ನೆಮ್ಮದಿ ಮತ್ತು ಆರ್ಥಿಕ ಸುಧಾರಣೆ ಕಾಣಲು ನೆಲ ಒರೆಸುವ ನೀರಿಗೆ ಕೆಲವೊಂದು ಪದಾರ್ಥಗಳನ್ನು ಬೆರೆಸುವಂತೆ ಈ ವಿಡಿಯೋದಲ್ಲಿ ಸಲಹೆ ನೀಡಲಾಗಿದೆ.
24
ನೆಲ ಒರೆಸುವ ನೀರಿಗೆ ಇವುಗಳನ್ನು ಬೆರೆಸಿ
ನೆಲ ಒರೆಸುವ ನೀರಿಗೆ ಇವುಗಳನ್ನು ಬೆರೆಸಿ ವಿಡಿಯೋ ಹಂಚಿಕೊಂಡಿರುವ ಬಳಕೆದಾರರ ಪ್ರಕಾರ, ನೆಲ ಒರೆಸುವ ಸಾಮಾನ್ಯ ನೀರಿಗೆ ಕಲ್ಲುಪ್ಪು, ಪಚ್ಚೆ ಕರ್ಪೂರ ಹಾಗೂ ಅರಿಶಿನವನ್ನು ಬೆರೆಸಬೇಕು. ಪಚ್ಚೆ ಕರ್ಪೂರವು ಮನೆಗೆ ಉತ್ತಮ ಸುಗಂಧ ನೀಡುವುದರ ಜೊತೆಗೆ ಸಕಾರಾತ್ಮಕ ಕಂಪನಗಳನ್ನು ತರುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ನೀವು ನಿತ್ಯ ಬಳಸುವ ಫ್ಲೋರ್ ಕ್ಲೀನರ್ ಅಥವಾ ಲಿಕ್ವಿಡ್‌ಗಳನ್ನೂ ಬಳಸಬಹುದು.
ವಾರದ ಯಾವುದೇ ದಿನ ಇದನ್ನು ಮಾಡಬಹುದಾದರೂ, ವಿಶೇಷವಾಗಿ ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಈ ಮೂರು ದಿನಗಳಲ್ಲಿ ಈ ರೀತಿ ನೆಲ ಒರೆಸಿದರೆ ಮನೆಯಲ್ಲಿ ಉತ್ತಮ ಸುಧಾರಣೆ ಕಾಣಬಹುದು ಎಂದು ಅವರು ತಿಳಿಸಿದ್ದಾರೆ.
34
ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ?
ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ? ಮನೆಯಲ್ಲಿ ಸದಾ ಕಿರಿಕಿರಿ ಉಂಟಾಗುತ್ತಿದ್ದರೆ, ಜನರ ದೃಷ್ಟಿದೋಷ ಬಿದ್ದಿದ್ದರೆ ಮತ್ತು ಎಷ್ಟೇ ದುಡಿದರೂ ಕೈಯಲ್ಲಿ ಕಾಸು ನಿಲ್ಲದೆ ಸಾಲದ ಸಮಸ್ಯೆ ಹೆಚ್ಚಾಗುತ್ತಿದ್ದರೆ ಈ ವಿಧಾನವನ್ನು ಪಾಲಿಸಬಹುದು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಉಪ್ಪು ಮತ್ತು ಅರಿಶಿನವು ನಕಾರಾತ್ಮಕ ಶಕ್ತಿಯನ್ನು (ನೆಗೆಟಿವ್ ಎನರ್ಜಿ) ಹೀರಿಕೊಂಡು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಹಲವರ ನಂಬಿಕೆಯಾಗಿದೆ.
ಕೇವಲ ಪರಿಹಾರ ಮಾತ್ರವಲ್ಲ, ಪರಿಶ್ರಮವೂ ಮುಖ್ಯ ಇದೇ ವೇಳೆ, ಈ ಪರಿಹಾರ ಮಾಡಿದ ತಕ್ಷಣ ಒಂದೇ ದಿನದಲ್ಲಿ ಎಲ್ಲವೂ ಸರಿಹೋಗಿ ಪವಾಡ ನಡೆಯುವುದಿಲ್ಲ ಎಂಬುದನ್ನೂ ವಿಡಿಯೋದಲ್ಲಿ ಸ್ಪಷ್ಟಪಡಿಸಲಾಗಿದೆ. "ಇದರ ಜೊತೆಗೆ ನಮ್ಮ ನಿರಂತರ ಪ್ರಯತ್ನ ಮತ್ತು ಕಠಿಣ ಶ್ರಮವೂ ಇರಬೇಕು. ನಂಬಿಕೆ ಮತ್ತು ಪರಿಶ್ರಮ ಎರಡೂ ಸೇರಿದಾಗ ಮಾತ್ರ ಜೀವನದಲ್ಲಿ ಒಳ್ಳೆಯ ಅಭಿವೃದ್ಧಿ ಕಾಣಲು ಸಾಧ್ಯ," ಎಂದು ವಿಡಿಯೋ ಹಂಚಿಕೊಂಡವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಈ ಸಿಂಪಲ್ ಟಿಪ್ಸ್ ಅನ್ನು ನೀವೂ ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಬಹುದು.