ಒಂದು ಹಿಡಿ ಕರಿಬೇವು: ಬದಲಾಗುವುದು ನಿಮ್ಮ ಅದೃಷ್ಟ- ವಾಸ್ತು ದೋಷ ನಿವಾರಣೆಗೆ ಹೀಗಿವೆ ಪರಿಹಾರ

Published : Sep 09, 2026, 09:26 PM IST

ಕರಿಬೇವು ಕೇವಲ ಒಗ್ಗರಣೆಗೆ ಮಾತ್ರವಲ್ಲ, ಇದು ಔಷಧೀಯ ಗುಣಗಳನ್ನು ಹೊಂದಿದ್ದು ಕೂದಲು ಉದುರುವಿಕೆಗೆ ಪರಿಹಾರ ನೀಡುತ್ತದೆ. ಇದಲ್ಲದೆ, ವಾಸ್ತು ಪ್ರಕಾರ ಕರಿಬೇವನ್ನು ನಿರ್ದಿಷ್ಟ ದಿನಗಳಲ್ಲಿ ಬಳಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ, ಆರ್ಥಿಕ ವೃದ್ಧಿ ಮತ್ತು ದೃಷ್ಟಿದೋಷ ನಿವಾರಣೆಯಾಗುತ್ತದೆ.

PREV
15
ಕರಿಬೇವಿನ ಮಹಿಮೆ

ಒಗ್ಗರಣೆಗೆ ಕರಿಬೇವು ಇದ್ದರೇನೇ ಸೊಗಸು. ಅದಕ್ಕಾಗಿಯೇ ಅದನ್ನು ಒಗ್ಗರಣೆ ಸೊಪ್ಪು ಎಂದೂ ಕರೆಯುತ್ತಾರೆ. ಹಾಗೆಂದು ಕರಿಬೇವು ಕೇವಲ ಒಗ್ಗರಣೆಗೆ ಮಾತ್ರವಲ್ಲ, ಇದು ದಿವ್ಯ ಔಷಧವೂ ಹೌದು. ಹಲವು ಸಮಸ್ಯೆಗಳಿಗೆ ರಾಮಬಾಣ. ಅದರಲ್ಲಿಯೂ ಕೂದಲು ಉದುರುವ ಸಮಸ್ಯೆಗೆ ಇದು ಉತ್ತಮ ಔಷಧವೂ ಹೌದು. ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಕರಿಬೇವು ವಾಸ್ತು ದೋಷಕ್ಕೂ ಇದು ಉತ್ತಮವಾಗಿದೆ.

25
ಪ್ರತಿ ಶನಿವಾರ ಮನೆಯ ಮುಖ್ಯ ದ್ವಾರದಲ್ಲಿ 11 ಕರಿಬೇವಿನ ಎಲೆಗಳನ್ನು ಇಟ್ಟರೆ, ಸುಖ ಸಮೃದ್ಧಿ ಸದಾ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಪ್ರತಿ ಶನಿವಾರ ಮನೆಯ ಮುಖ್ಯ ದ್ವಾರದಲ್ಲಿ 11 ಕರಿಬೇವಿನ ಎಲೆಗಳನ್ನು ಇಟ್ಟರೆ, ಸುಖ ಸಮೃದ್ಧಿ ಸದಾ ನೆಲೆಸುತ್ತದೆ ಎಂಬ ನಂಬಿಕೆ ಇದೆ.

35
ನಿಂತ ಕೆಲಸ ಸರಾಗ

ಬುಧವಾರದಂದು ಕೆಲವು ಕರಿಬೇವಿನ ಎಲೆಗಳನ್ನು ರುಬ್ಬಿ, ಅದನ್ನು ಮನೆಯ ಹೊರಗೆ ಯಾವುದಾದರೂ ಭಾರಿ ಕಲ್ಲಿನ ಕೆಳಗೆ ಇಡಿ. ಇದರಿಂದ, ನಿಮ್ಮ ಕೆಲಸಗಳು ಯಾವುದಾದರೂ ನಿಂತಿದ್ದರೆ ಅದು ಮುಂದುವರೆಯುತ್ತದೆ.

45
ಆರ್ಥಿಕ ವೃದ್ಧಿ

ಪ್ರತಿ ಸೋಮವಾರ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ 11 ಕರಿಬೇವಿನ ಎಲೆಗಳನ್ನು ಇಟ್ಟು, ಬೆಳಿಗ್ಗೆ ಅದನ್ನು ಹೊರಗಡೆ ಚೆಲ್ಲಿ. ಇದರಿಂದ ಧನದ ಸಮೃದ್ಧಿಯಾಗುತ್ತದೆ.

55
ಶನಿವಾರ ಹೀಗೆ ಮಾಡಿ

ಶನಿವಾರ ಒಂದು ಹಿಡಿ ಕರಿಬೇವನ್ನು ಸುಟ್ಟು ಅದರ ಬೂದಿಯನ್ನು ಹರಿಯುವ ನೀರಿನಲ್ಲಿ ಬಿಟ್ಟರೆ, ಯಾವುದಾದರೂ ದೃಷ್ಟಿದೋಷವಿದ್ದರೆ ಅದು ಹೋಗಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ.

Read more Photos on
click me!

Recommended Stories