ದೀಪಾವಳಿ ಟೈಮಲ್ಲಾದರೂ ಇವನ್ನೆಲ್ಲ ಮನೆಯಿಂದ ಹೊರ ಹಾಕಿ, ಇಲ್ಲವೆಂದರೆ ಲಕ್ಷ್ಮಿ ಒಲಿಯೋಲ್ಲ

First Published Oct 13, 2022, 6:03 PM IST

ದೀಪಾವಳಿಯಂದು ಶುಚಿಗೊಳಿಸುವುದು ಧಾರ್ಮಿಕವಾಗಿ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಚೆನ್ನಾಗಿ ಶುಚಿಯಾದ, ವಸ್ತುಗಳನ್ನು ಸರಿಯಾಗಿ ಜೋಡಿಸಿದ ಮನೆಗೆ ತಾಯಿ ಲಕ್ಷ್ಮಿ ಆಕರ್ಷಿತಳಾಗುತ್ತಾಳೆ. ನಂಬಿಕೆಗಳ ಪ್ರಕಾರ, ಸ್ವಚ್ಛ ಮತ್ತು ಸುಸಂಘಟಿತ ಮನೆಗಳು ತಾಯಿ ಲಕ್ಷ್ಮಿಗೆ ಹೆಚ್ಚು ಪ್ರಿಯವಾಗಿವೆ. ಆದ್ದರಿಂದ, ದೀಪಾವಳಿಯಂದು ಯಾವುದೇ ಮುರಿದ ವಸ್ತುಗಳು ಮನೆಯಲ್ಲಿ ಉಳಿಯಬಾರದು. ಈ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ, ಇದು ನಿಮ್ಮ ಮನೆಯಲ್ಲಿ ಬಡತನವನ್ನು ಸಹ ಹೆಚ್ಚಿಸುತ್ತೆ. ದೀಪಾವಳಿಯ ಶುಚಿಗೊಳಿಸುವಿಕೆಯಲ್ಲಿ ಯಾವ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಅನ್ನೋದನ್ನು ತಿಳಿಯೋಣ.

ದೀಪಾವಳಿಗೆ ಮೊದಲು, ಹೆಚ್ಚಿನ ಮನೆಗಳಲ್ಲಿ ಸ್ವಚ್ಛಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತೆ ಮತ್ತು ಜನರು ತಮ್ಮ ಮನೆಗಳನ್ನು ಅಲಂಕರಿಸಲು ಪ್ರಾರಂಭಿಸುತ್ತಾರೆ. ದೀಪಾವಳಿಗಾಗಿ  ಶುಚಿಗೊಳಿಸಿದ್ರೆ, ತಾಯಿ ಲಕ್ಷ್ಮಿ(Goddess Lakshmi) ಮನೆಯಲ್ಲಿ ವಾಸಿಸುತ್ತಾಳೆ. ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತಾಳೆ. ಸಂಪೂರ್ಣ ಶುಚಿತ್ವವಿರುವ ಮನೆಗೆ ತಾಯಿ ಲಕ್ಷ್ಮಿ ಪ್ರವೇಶಿಸುತ್ತಾಳೆ. ದೀಪಾವಳಿಯಂದು ಸ್ವಚ್ಛತೆಗಾಗಿ ಮನೆಯಿಂದ ಯಾವ ವಸ್ತುಗಳನ್ನು ತೆಗೆದುಹಾಕಬೇಕು ಎಂದು ಇಲ್ಲಿ ತಿಳಿದುಕೊಳ್ಳಿ.

ಮನೆಯ ಯಾವುದೇ ಮೂಲೆಯಲ್ಲಿ ಮುರಿದ ಗಾಜನ್ನು(Broken glass) ಇಡಬಾರದು

ಮನೆಯ ಯಾವುದೇ ಮೂಲೆಯಲ್ಲಿ ಒಡೆದ ಗಾಜು ಇರಬಾರದು. ವಾಸ್ತು ಪ್ರಕಾರ, ಮುರಿದ ಗಾಜನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತೆ ಮತ್ತು ಅದು ಬಡವರನ್ನಾಗಿ ಮಾಡುತ್ತೆ. ಮನೆಯ ಯಾವುದೇ ಕಿಟಕಿ ಅಥವಾ ಬಾಗಿಲಿನ ಗಾಜು ಮುರಿದಿದ್ದರೆ, ದೀಪಾವಳಿಗೆ ಮೊದಲು ಅದನ್ನು ಸರಿಪಡಿಸಿ. ಬಾತ್ ರೂಮಿನ ಕಿಟಕಿಗಳು ಸಹ ಒಡೆದ ಗಾಜು ಹೊಂದಿದ್ದರೆ ಸರಿಮಾಡಿಸಿ.

Latest Videos


ಎಲೆಕ್ಟ್ರಿಕ್ ಉಪಕರಣಗಳ (Electrical items)ರಿಪೇರಿ

ಮನೆಯಲ್ಲಿ ಎಲೆಕ್ಟ್ರಿಕ್ ಉಪಕರಣಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅಥವಾ ಅದು ಸಂಪೂರ್ಣವಾಗಿ ಹಾನಿಗೀಡಾಗಿದ್ದರೆ, ದೀಪಾವಳಿಗೆ ಮೊದಲು ಅದನ್ನು ಸರಿಪಡಿಸಿ ಅಥವಾ ಅದನ್ನು ಜಂಕ್ ಎಂದು ಎಸೆಯಿರಿ ಮತ್ತು ಅದರ ಜಾಗಕ್ಕೆ ಬೇರೊಂದನ್ನು ತನ್ನಿ. ಮನೆಯ ಫ್ಯಾನ್ ನಿಂದ ಶಬ್ದ ಬಂದರೂ, ಅದನ್ನು ಸರಿಪಡಿಸಿ ಅಥವಾ ಬದಲಾಯಿಸಿ.

ಹಳೆಯ ಗಡಿಯಾರ(Clock)

ಹಳೆಯ ಗಡಿಯಾರ ದುರಾದೃಷ್ಟವನ್ನು ಆಹ್ವಾನಿಸುವುದಕ್ಕೆ ಸಮಾನ. ಒಂದೋ ಈ ಗಡಿಯಾರ ಸರಿಪಡಿಸಿ ಮತ್ತು ಅವು ಸರಿಪಡಿಸಲು ಯೋಗ್ಯವಾಗಿಲ್ಲದಿದ್ದರೆ, ಅವುಗಳನ್ನು ಮನೆ ಹೊರಗೆ ಎಸೆಯಿರಿ. ಮನೆಯಲ್ಲಿ ನಿಂತ ಗಡಿಯಾರಗಳನ್ನು ಇಟ್ಟುಕೊಳ್ಳೋದು ಉದ್ದೇಶಪೂರ್ವಕವಾಗಿ ನಿಮ್ಮ ಪ್ರಗತಿಯನ್ನು ನಿಲ್ಲಿಸಿದಂತೆ.
 

ಮುರಿದ ಮೂರ್ತಿ (Broken Idol)

ಮನೆಯ ಪೂಜಾ ಸ್ಥಳದಲ್ಲಿ ವಿಗ್ರಹವು ಮುರಿದಿದ್ದರೆ ಅಥವಾ ಮನೆಯ ಇತರ ಯಾವುದೇ ಭಾಗದಲ್ಲಿ ಮುರಿದ ವಿಗ್ರಹವಿದ್ದರೆ, ಅದನ್ನು ದೀಪಾವಳಿಯ ಮೊದಲು ಸರಿಪಡಿಸಿ. ಮುರಿದ ವಿಗ್ರಹವನ್ನು ಪೂಜಿಸೋದು ಧರ್ಮಗ್ರಂಥಗಳಲ್ಲಿ ತಪ್ಪೆಂದು ಪರಿಗಣಿಸಲಾಗಿದೆ. ಬದಲಾಗಿ, ಒಂದು ಹೊಸ ವಿಗ್ರಹ ತಂದು, ಪ್ರತಿಷ್ಠಾಪಿಸಿ ಪೂಜಿಸಿ. ದೇವರ ಯಾವುದೇ ವಿಗ್ರಹವು ಪೂಜೆ ಮಾಡುವಾಗ ಮುರಿದಿರಬಾರದು. ಇದಲ್ಲದೆ, ಪೂಜಾ ಸ್ಥಳದಿಂದ ಇತರ ಮುರಿದ ವಸ್ತುಗಳನ್ನು ತೆಗೆದುಹಾಕಿ.

ರೂಫ್ ಕ್ಲೀನಿಂಗ್(Roof cleaning)

ಮನೆಯ ಛಾವಣಿಯನ್ನು ಸ್ವಚ್ಛಗೊಳಿಸಲು ವಿಶೇಷ ಒತ್ತು ನೀಡಲಾಗುತ್ತೆ. ರೂಫ್ ಕೊಳಕಾಗಿರುವ ಮನೆಯ ಜನರು ಯಾವಾಗಲೂ ಅನಾರೋಗ್ಯ ಮತ್ತು ಅಸಂತುಷ್ಟರಾಗಿರುತ್ತಾರೆ. ಮನೆಯ ರೂಫ್ ಯಾವಾಗಲೂ ಸ್ವಚ್ಛವಾಗಿರಬೇಕು. ಯಾವುದೇ ಜಂಕ್ ವಸ್ತುಗಳನ್ನು ಅಲ್ಲಿ ಇಡಬಾರದು. ದೀಪಾವಳಿಗೆ ಮೊದಲು, ಮನೆಯ ಛಾವಣಿಯನ್ನು ತೊಳೆಯಿರಿ ಮತ್ತು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಮುರಿದ ಪಾತ್ರೆಗಳು(Broken plates)

ಮುರಿದ ಪಾತ್ರೆಗಳಲ್ಲಿ ಆಹಾರ ತಿನ್ನುವವರ ಅದೃಷ್ಟ ಕೆಟ್ಟದಾಗಿರುತ್ತೆ ಎಂದು ನಂಬಲಾಗಿದೆ. ಆದ್ದರಿಂದ ಮುರಿದ ಪಾತ್ರೆಗಳನ್ನು ಮನೆಯಲ್ಲಿ ಇಡಲೇಬಾರದು. ಅವು ಎಷ್ಟೇ ದುಬಾರಿಯಾಗಿದ್ದರೂ, ದೀಪಾವಳಿಯ ಮೊದಲು ಮನೆಯಿಂದ ಎಲ್ಲಾ ಮುರಿದ ಪಾತ್ರೆಗಳನ್ನು ತೆಗೆದುಹಾಕಿ.
 

ಮುರಿದ ಫರ್ನಿಚರ್ (Broken furniture)

ಮುರಿದ ಫರ್ನಿಚರ್ಗಳನ್ನು ಮನೆಯಲ್ಲಿ ಇಡುವುದು ತುಂಬಾ ಅಶುಭವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ಮನೆಯಲ್ಲಿ ಚೇರ್, ಟೇಬಲ್ ಅಥವಾ ಇತರ ಯಾವುದೇ ಫರ್ನಿಚರ್ ಮುರಿದಿದ್ದರೆ, ದೀಪಾವಳಿಗೆ ಮೊದಲು ಅದನ್ನು ಸರಿಪಡಿಸಿ ಅಥವಾ ಮನೆಯಿಂದ ತೆಗೆದುಹಾಕಿ. ಮುರಿದ ಫರ್ನಿಚರ್ ಮನೆಯೊಳಗಿನ ದುರ್ಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತೆ . ಇದು ತುಂಬಾ ಹೊಳೆಯುವ ಮತ್ತು ಸ್ವಚ್ಛವಾಗಿರಬೇಕು.
 

click me!