Vastu tips: ಮನೆಯಲ್ಲಿ ತಪ್ಪಿಯೂ ಈ ಸ್ಥಳಗಳಲ್ಲಿ ಕೀ ಇಡಬೇಡಿ

First Published | Aug 30, 2022, 5:11 PM IST

ಪ್ರತಿಯೊಬ್ಬರ ಮನೆಗಳಲ್ಲಿ ಕೀಗಳನ್ನು ಬಳಸಲಾಗುತ್ತದೆ. ಬೀರುವಿನಿಂದ ಹಿಡಿದು ಮನೆಯ ಬಾಗಿಲವರೆಗೆ ಮತ್ತು ವಾಹನಗಳ ಕೀವರೆಗೆ ಎಲ್ಲಾದಕ್ಕೂ ಕೀ ಬೇಕೇ ಬೇಕು. ಇನ್ನು ನಾವು ಕಿಗಳನ್ನು ಸುರಕ್ಷಿತವಾಗಿಡಲು ಒಂದು ಜಾಗವನ್ನು ನಿಗದಿಪಡಿಸಿ, ಪ್ರತಿದಿನ ಅದನ್ನು ಅಲ್ಲಿಯೇ ಇಡುತ್ತೇವೆ. ಏಕೆಂದರೆ ಕೀ ತಪ್ಪಾಗಿ ಕಳೆದುಹೋದರೆ, ಸಾಕಷ್ಟು ತೊಂದರೆ ಉಂಟಾಗುತ್ತೆ. ಆದರೆ ಕೀ ಇಡಲು ವಾಸ್ತು ಶಾಸ್ತ್ರವು ಕೆಲವು ನಿಯಮಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? 

ಕೀ ಇಡಲು ಸಹ ವಾಸ್ತು ಶಾಸ್ತ್ರದಲ್ಲಿ ಸೂಕ್ತವಾದ ಜಾಗವನ್ನು ತಿಳಿಸಲಾಗಿದೆ. ಯಾಕೆಂದರೆ ತಪ್ಪಾಗಿ  ಕೀ ಇಡೋದ್ರಿಂದ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅದೇ ಸಮಯದಲ್ಲಿ, ವಾಸ್ತುವಿನಲ್ಲಿ ಉಲ್ಲೇಖಿಸಲಾದ ನಿಯಮಗಳ ಪ್ರಕಾರ ನೀವು ಕೀ (key) ಇಟ್ಟುಕೊಂಡರೆ, ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ. 
 

ವಾಸ್ತು ಶಾಸ್ತ್ರವು ಕೀಗಳನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇರಿಸಿದರೆ, ಅವು ಶುಭ ಫಲಿತಾಂಶಗಳನ್ನು (good luck) ನೀಡುತ್ತವೆ ಎಂದು ಹೇಳುತ್ತದೆ. ಹಾಗಾದ್ರೆ ಬನ್ನಿ, ವಾಸ್ತು ಪ್ರಕಾರ ಮನೆಯಲ್ಲಿ ಕೀಲಿಗಳನ್ನು ಇಡುವ ನಿಯಮ ಏನು? ಅದರಿಂದ ಏನು ಪ್ರಯೋಜನ ಉಂಟಾಗುತ್ತೆ ಅನ್ನೋದನ್ನು ತಿಳಿಯೋಣ... 

Tap to resize

ಡ್ರಾಯಿಂಗ್ ರೂಮ್ ಇಟ್ಟುಕೊಳ್ಳಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಡ್ರಾಯಿಂಗ್ ರೂಮ್ (drawing room) ನಲ್ಲಿ ಕೀಲಿಕೈಗಳನ್ನು ಎಂದಿಗೂ ಇಡಬಾರದು. ಏಕೆಂದರೆ ಡ್ರಾಯಿಂಗ್ ರೂಮಿನಲ್ಲಿ ಕೀ ಇಡುವುದರಿಂದ ಹೊರಗಿನಿಂದ ಬರುವ ಜನರು ಅವುಗಳನ್ನು ನೋಡುವಂತೆ ಮಾಡುತ್ತದೆ, ಇದರಿಂದ ದೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಪೂಜೆಯ ಸ್ಥಳದಲ್ಲಿ ಕೀ ಇಡಬೇಡಿ
ವಾಸ್ತುವಿನ ಪ್ರಕಾರ, ಮನೆಯ ಪೂಜಾ ಸ್ಥಳದ ಸುತ್ತಲೂ ಕೀಲಿಗಳನ್ನು ಇಡಬಾರದು, ಏಕೆಂದರೆ ಕೀ  ಮನೆಯಿಂದ ಹೊರಗೆ ತರುವುದರಿಂದ, ಕೈಯಲ್ಲಿರುವ ಕೊಳಕು ಅದಕ್ಕೆ ಅಂಟಿಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪೂಜಾ ಸ್ಥಳದಲ್ಲಿ ಕೊಳಕು ಕೀಗಳನ್ನು ಇಟ್ಟರೆ, ಆಗ ನೀವು ನಕಾರಾತ್ಮಕ ಪರಿಣಾಮಗಳನ್ನು (negative affect) ಎದುರಿಸಬೇಕಾಗಿ ಬರುತ್ತದೆ, ಆದುದರಿಂದ ಈ ತಪ್ಪನ್ನು ಮಾಡಬೇಡಿ. 

ಅಡುಗೆ ಮನೆಯಲ್ಲಿ ಕೀ ಇಡಬೇಡಿ
ಅಡುಗೆ ಮನೆಯಲ್ಲಿ ಕೀ ಇಡುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅಡುಗೆಮನೆಯನ್ನು ಸಹ ಶುದ್ಧ ಸ್ಥಳವೆಂದು ಪರಿಗಣಿಸಲಾಗುತ್ತದೆ. ವಾಸ್ತುವಿನ ಪ್ರಕಾರ, ನೀವು ಅಡುಗೆ ಮನೆಯಲ್ಲಿಯೂ ಕೀ ಗಳನ್ನು ಇಡುವುದನ್ನು ತಪ್ಪಿಸಬೇಕು. 

ದಿಕ್ಕನ್ನು ಮನಸ್ಸಿನಲ್ಲಿಟ್ಟುಕೊಳ್ಳಿ
ಕೀಗಳನ್ನು ಲೋಹದಿಂದ ತಯಾರಿಸಲಾಗುತ್ತದೆ. ಹಾಗಾಗಿ, ನೀವು ಮನೆಯಲ್ಲಿ ಕೀಲಿಯನ್ನು ಇಡಲು ಸ್ಥಳವನ್ನು ಹುಡುಕುತ್ತಿದ್ದರೆ, ಪಶ್ಚಿಮ ದಿಕ್ಕಿನ ಕಡೆಗೆ ಇಡಬಹುದು. ಕೀಗಳನ್ನು ಇಡಲು ಇದು ಉತ್ತಮವಾದ ದಿಕ್ಕು ಎಂದು ತಿಳಿದು ಬಂದಿದೆ.

ಈ ವಿಷಯಗಳನ್ನು ನೆನಪಿನಲ್ಲಿಡಿ 
ಕೀಯನ್ನ ಮನೆಯಲ್ಲಿ ಇಡುವ ಬದಲು, ಕೀ-ಹ್ಯಾಂಗರ್ (key hanger) ಅನ್ನು ಬಳಸಿ. ವಾಸ್ತುವಿನ ಪ್ರಕಾರ, ಮರದ ಕೀ-ಹ್ಯಾಂಗರ್ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ದೇವರ ಚಿತ್ರ ಇತ್ಯಾದಿಗಳನ್ನು ಹೊಂದಿರುವ ಕೀ ಗಳನ್ನು ಇಡಲು ಕೀಲಿ-ರಿಂಗ್ ಬಳಸಬೇಡಿ ಎಂದು ವಾಸ್ತುವಿನಲ್ಲಿ ತಿಳಿಸಲಾಗಿದೆ.

Latest Videos

click me!