ರಾತ್ರಿ ಮಲಗುವಾಗ ಕೋಣೆಯಲ್ಲಿ ಯಾರೋ ಇದ್ದಾರೆ ಅನ್ಸತ್ತಾ? ಹಾಗಿದ್ರೆ ಈ ಸುದ್ದಿ ನೀವು ಓದ್ಲೇಬೇಕು

First Published Jul 28, 2024, 11:26 AM IST

ರಾತ್ರಿ ಮಲಗುವಾಗ, ಕೆಲವೊಮ್ಮೆ ಯಾರೋ ನಮ್ಮನ್ನು ರಹಸ್ಯವಾಗಿ ನೋಡುತ್ತಿದ್ದಾರೆ ಅಥವಾ ನಮ್ಮ ಕೋಣೆಯಲ್ಲಿ ಯಾರೋ ಇದ್ದಾರೆ ಎಂದು ಅನಿಸುತ್ತೆ. ರಾತ್ರಿಯಲ್ಲಿ ನಿಮಗೂ ಈ ರೀತಿ ಅನುಭವ ಆದ್ರೆ, ನಿಮ್ಮ ಮನೆಯಲ್ಲಿ ವಾಸ್ತು ದೋಷವೇ ಇದಕ್ಕೆ ಕಾರಣ ಅನ್ನೋದು ತಿಳಿಯಿರಿ. 
 

ಕೆಲವೊಮ್ಮೆ ನಾವು ರಾತ್ರಿ ಮಲಗಿದಾಗ, ಯಾರೋ ನಮ್ಮನ್ನು ಗುಟ್ಟಾಗಿ ನೋಡುತ್ತಿದ್ದಾರೆ ಅಥವಾ ಯಾರೋ ನಮ್ಮ ಹಾಸಿಗೆಯ ಸುತ್ತಲೂ ಅಲೆದಾಡುತ್ತಿದ್ದಾರೆ ಎನ್ನುವ ಅನುಭವ ನಮಗೆ ಆಗೋಕೆ ಶುರುವಾಗುತ್ತೆ. ರಾತ್ರಿಯಲ್ಲಿ ಈ ರೀತಿ ಅನಿಸೋದು ಸಾಮಾನ್ಯವಾಗಿರಬಹುದು, ಆದರೆ  ನಿಮಗೆ ಯಾವಾಗಲೂ ಈ ರೀತಿಯ ಫೀಲ್ ಆಗುತ್ತಿದ್ದಾರೆ. ಮನೆಯಲ್ಲಿ ನಕಾರಾತ್ಮಕತೆ (negativity) ಹೆಚ್ಚಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. 
 

ನಕಾರಾತ್ಮಕತೆಯು ಮನೆಯಲ್ಲಿ ನೆಲೆಸಿದ್ರೆ, ಅದನ್ನ ಶೀಘ್ರವಾಗಿ ನಿವಾರಣೆ ಮಾಡಲೇಬೇಕಾಗುತ್ತೆ. ವಾಸ್ತವವಾಗಿ, ವಾಸ್ತು ದೋಷವು ಮನೆಯಲ್ಲಿ ನಕಾರಾತ್ಮಕ ಶಕ್ತಿಗೆ (negative energy) ಕಾರಣವಾಗಬಹುದು. ಕೋಣೆಯಲ್ಲಿ ಇರಿಸುವಂತಹ ಕೆಲವು ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದಲೇ ರಾತ್ರಿ ನಿಮಗೆ ಯಾರೋ ನಿಮ್ಮನ್ನ ಗಮನಿಸುತ್ತಿದ್ದಾರೆ ಅಂತ ಅನಿಸಿರಬಹುದು. ಹಾಗಿದ್ರೆ ವಾಸ್ತು ದೋಷಗಳಿಗೆ ಕಾರಣವಾಗುವ ಕೋಣೆಯಲ್ಲಿ ಇರಿಸಲಾದ ವಸ್ತುಗಳು ಯಾವುವು ಅನ್ನೋದನ್ನ ತಿಳಿಯೋಣ. 
 

Latest Videos


ಕೋಣೆಯಲ್ಲಿಟ್ಟ ತುಂಡಾದ ವಸ್ತುಗಳು (broken items in the room)
ಮನೆಯಲ್ಲಿ ಇಟ್ಟಿರೋ ಯಾವುದೋ ಫೋಟೋ, ಶೋಪೀಸ್ ಅಥವಾ ಇನ್ನಾವುದೇ ವಸ್ತು ಹಾಳಾದರೆ ಅಥವಾ ತುಂಡಾಗಿದ್ದರೆ, ನಾವು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಹಾಳಾದ ವಸ್ತುಗಳು ಕೋಣೆಯಲ್ಲಿ ಹಾಗೆಯೇ ಉಳಿದರೆ ನಕಾರಾತ್ಮಕ ಶಕ್ತಿ ನಿಮ್ಮ ಮನೆಯನ್ನು ಆವರಿಸುತ್ತೆ. ಇದರಿಂದ ನಿಮಗೆ ರಾತ್ರಿ ಹೊತ್ತು ಯಾರೋ ನಿಮ್ಮನ್ನ ಗಮನಿಸಿದ ಅನುಭವ ನೀಡುತ್ತೆ. ಹಾಗಾಗಿ ತುಂಡಾದ ವಸ್ತುಗಳನ್ನ ಸಮಯಕ್ಕೆ ಸರಿಯಾಗಿ ಹೊರ ಹಾಕೋದು ಉತ್ತಮ.

ಮೃತ ಸಂಬಂಧಿಕರ ಚಿತ್ರ (ancestors photo)
ಮೃತ ಸಂಬಂಧಿಕರ ಫೋಟೋಗಳನ್ನು ಕೋಣೆಯಲ್ಲಿ ಇಡಬಾರದು. ಈ ಫೋಟೋಗಳನ್ನು ಹಾಲ್  ನಲ್ಲಿ ಇಡಬೇಕು ಅಥವಾ ನೀವು ಮಲಗದ ಗೋಡೆಯ ಮೇಲೆ ಹಾಕಬೇಕು. ಮಲಗುವ ಕೋಣೆಯಲ್ಲಿ ಮೃತ ಸಂಬಂಧಿಕರ ಫೋಟೋಗಳನ್ನು ಇಡೋದ್ರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಬಹುದು. ಈ ಕಾರಣದಿಂದಾಗಿ, ನಿಮಗೆ ನಿದ್ರಿಸೋವಾಗ ಯಾರೋ ಇದ್ದಂತೆ ವಿಚಿತ್ರ ಅನುಭವ ಉಂಟಾಗುತ್ತೆ.

ಗುಜಿರಿ ಸಾಮಾಗ್ರಿಗಳು (scrap items in the room)
ನೀವು ಮನೆಯಲ್ಲಿನ ಬೇಡವಾದ ವಸ್ತುಗಳನ್ನು ಒಂದು ದೊಡ್ಡದಾದ ಪೆಟ್ಟಿಗೆ ಅಥವಾ ಚೀಲದಲ್ಲಿ ಸಂಗ್ರಹಿಸಿ ಸ್ಕ್ರ್ಯಾಪ್ ಡೀಲರ್ ಗೆ ಮಾರಾಟ ಮಾಡಲು ಯೋಚಿಸುತ್ತಿದ್ದರೆ, ಈ ಪೆಟ್ಟಿಗೆಯನ್ನು ನಿಮ್ಮ ಕೋಣೆಯ ಹೊರಗೆ ಅಥವಾ ಸ್ಟೋರ್ ರೂಮ್ ನಲ್ಲಿ ಇರಿಸೋದು ಉತ್ತಮ. ಜಂಕ್ ಅಥವಾ ತ್ಯಾಜ್ಯ ವಸ್ತುಗಳನ್ನು ಮನೆಯ ಒಳಗೆ ಅಥವಾ ನಿಮ್ಮ ಕೋಣೆಯಲ್ಲಿ ಇರಿಸೋದರಿಂದ ಮನೆಯಲ್ಲಿ ವಾಸ್ತು ದೋಷ ಕಾಣಿಸಿಕೊಳ್ಳುತ್ತೆ. 

ದಕ್ಷಿಣ ದಿಕ್ಕಿನಲ್ಲಿ ಪಾದಗಳನ್ನು ಇರಿಸಿ ಮಲಗುವುದು (keeping leg towards south)
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಉದಾಹರಣೆಗೆ, ಪೂರ್ವ ಮತ್ತು ಉತ್ತರ ದಿಕ್ಕನ್ನು ಶುಭ ಕಾರ್ಯಗಳಿಗೆ ಉತ್ತಮ ಎಂದರೆ, ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಉತ್ತರ ದಿಕ್ಕನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎನ್ನುತ್ತಾರೆ, ಹಾಗಾಗಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಯಾವುದೇ ಶುಭ ಕಾರ್ಯವನ್ನು ಮಾಡಲಾಗುವುದಿಲ್ಲ. ಹಾಗಾಗಿ ಮಲಗುವಾಗ ನಿಮ್ಮ ಪಾದಗಳು ಎಂದಿಗೂ ದಕ್ಷಿಣ ದಿಕ್ಕಿನಲ್ಲಿರಬಾರದು. ಇದು ವಾಸ್ತು ದೋಷ ಉಂಟಾಗಲು ಕಾರಣವಾಗುತ್ತೆ. 
 

ಹಾಳಾದ ಗಡಿಯಾರಗಳು (stopped clock)
ನಿಮ್ಮ ಕೋಣೆಯಲ್ಲಿ ಹಾಳಾದ ಗಡಿಯಾರಗಳಿದ್ದರೆ, ಈ ಗಡಿಯಾರಗಳನ್ನು ಸಮಯಕ್ಕೆ ಸರಿಯಾಗಿ ಕೋಣೆಯಿಂದ ಹೊರತೆಗೆಯುವುದು ಅಥವಾ ಅವುಗಳನ್ನು ಸರಿ ಮಾಡೋದು ಉತ್ತಮ. ಇದು ನಿಮ್ಮ ಮನೆಯಿಂದ ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ. ನೀವು ಮಲಗುವ ಕೋಣೆಯಲ್ಲಿ ನಿಂತ ಅಥವಾ ಹಾಳಾದ ಗಡಿಯಾರ ಇದ್ರೆ ಕೂಡ್ಲೇ ಅದನ್ನ ತೆಗೆದು ಹಾಕಿ. ಅಥವಾ ಸರಿಪಡಿಸಿ. 

click me!