ಕಪ್ಪು ಇರುವೆಗಳ ಸಾಲು ಮನೆಯಲ್ಲಿ ಅಚಾನಕ್ ಆಗಿ ಕಾಣಿಸಿಕೊಂಡ್ರೆ ನೀವು ಶೀಘ್ರದಲ್ಲಿ ಶೀಮಂತರಾಗ್ತೀರಿ !

Published : Jul 13, 2024, 02:01 PM ISTUpdated : Jul 13, 2024, 02:03 PM IST

ವಾಸ್ತು ಶಾಸ್ತ್ರದ ಪ್ರಕಾರ, ಹಣವು ನಿಮಗೆ ಬರೋದಕ್ಕೂ ಮೊದಲು ಕೆಲವು ಚಿಹ್ನೆಗಳನ್ನು ನೋಡಬಹುದು. ನೀವು ಈ ಚಿಹ್ನೆಗಳನ್ನು ನೋಡುತ್ತಿದ್ದರೆ, ನೀವು ಶೀಘ್ರದಲ್ಲಿ ಶ್ರೀಮಂತರಾಗಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ.  

PREV
16
ಕಪ್ಪು ಇರುವೆಗಳ ಸಾಲು ಮನೆಯಲ್ಲಿ ಅಚಾನಕ್ ಆಗಿ ಕಾಣಿಸಿಕೊಂಡ್ರೆ ನೀವು ಶೀಘ್ರದಲ್ಲಿ ಶೀಮಂತರಾಗ್ತೀರಿ !

ಹೇಗಪ್ಪ ಹಣ ಮಾಡೋದು (making money)? ಶ್ರೀಮಂತರಾಗೋದು ಅನ್ನೋ ಯೋಚನೆ ಎಲ್ಲರಲ್ಲೂ ಇರುತ್ತೆ. ಆದ್ರೆ ಶ್ರೀಮಂತರಾಗೋದು ಅಷ್ಟೊಂದು ಸುಲಭ ಅಲ್ಲ. ಆದ್ರೆ ನಿಮಗೆ ಗೊತ್ತಾ, ನಿಮಗೆ ಹಣ ಬರೋ ಮೊದ್ಲು, ಅಥವಾ ನಿಮಗೆ ಶ್ರೀಮಂತಿಕೆ ಬರೊ ಮೊದ್ಲು ಮನೆಯಲ್ಲಿ ಕೆಲವೊಂದು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. 
 

26

ವಾಸ್ತು ಶಾಸ್ತ್ರದ (Vastu Tips)ಪ್ರಕಾರ ನಿಮಗೆ ಮನೆಯಲ್ಲಿ ಕೆಲವೊಂದು ಸೂಚನೆಗಳು ಸಿಕ್ತಿದೆ ಅಂದ್ರೆ ಶೀಘ್ರದಲ್ಲೇ ನೀವು ಶ್ರೀಮಂತರಾಗ್ತೀರಿ ಅಂತ ಅರ್ಥ ಮಾಡ್ಕೊಳಿ. ಮನೆಯಲ್ಲಿ ಇಂತಹ ಸೂಚನೆಗಳನ್ನು ಕಾಣುವುದು ಶುಭ ಎನ್ನಲಾಗುತ್ತೆ. ಇದು ಮಹಾ ಲಕ್ಷ್ಮೀ ದೇವಿಯ ಆಗಮನದ ಸೂಚನೆ ಕೂಡ ಆಗಿದೆ. 
 

36

ವಾಸ್ತುವಿನ ಅನುಸಾರ ನಿಮ್ಮ ಮನೆಯಲ್ಲಿ ಅಚಾನಕ್ ಆಗಿ ಕಪ್ಪು ಇರುವೆಗಳ (black ants) ಗುಂಪು ಕಾಣಿಸಿಕೊಂಡರೆ, ಅದನ್ನ ಹೊರಹಾಕಲು ಅಥವಾ ದೂರ ಮಾಡಲು ಟ್ರೈ ಮಾಡಬೇಡಿ. ಯಾಕಂದ್ರೆ ಅದು ಶುಭ ಸೂಚನೆಯಾಗಿದೆ. ಅದರಲ್ಲೂ ಈ ಕಪ್ಪು ಇರುವೆಗಳು ಯಾವುದೇ ತಿಂಡಿಯ ಮೇಲೆ ಕಾಣಿಸಿಕೊಂಡರೆ ಅದು ಶುಭ ಸಂಕೇತ. 

46

ವಾಸ್ತುವಿನಲ್ಲಿ ತಿಳಿಸಿದಂತೆ ಅಚಾನಕ್ ಆಗಿ ಮನೆಯಲ್ಲಿ ಕಪ್ಪು ಇರುವೆಗಳ ಗುಂಪು ಕಾಣಿಸಿಕೊಳ್ಳೋದು ಲಕ್ಷ್ಮೀ ದೇವಿ (Goddess Lakshmi) ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಅನ್ನುವುದರ ಸೂಚನೆ ನೀಡುತ್ತದೆ. ಅಂದ್ರೆ ನಿವು ಶೀಘ್ರದಲ್ಲಿ ಶ್ರೀಮಂತರಾಗ್ತಿರಿ. ಹಾಗಾಗಿ ಇರುವೆಗಳನ್ನ ಓಡಿಸೋ ಪ್ರಯತ್ನ ಮಾಡಬೇಡಿ. 
 

56

ಇದಲ್ಲದೇ ಮನೆಯ ಮೇಲೆ, ಹಂಚಿನ ಬಳಿ ಎಲ್ಲಾದರೂ ಹಕ್ಕಿ ಗೂಡು ಕಟ್ಟಿದ್ರೆ ಅದನ್ನು ಸಹ ವಾಸ್ತು ಪ್ರಕಾರ ಶುಭ ಎನ್ನಲಾಗುವುದು. ಯಾವುದೇ ಸಣ್ಣ ಹಕ್ಕಿ, ಗುಬ್ಬಚ್ಚಿ, ಪಾರಿವಾಳ ಮನೆಯಲ್ಲಿ ಗೂಡು ಮಾಡಿದ್ರೆ ಶೀಘ್ರದಲ್ಲಿ ಹಣ ಬರುತ್ತೆ ಅನ್ನೋದನ್ನ ಸೂಚಿಸುತ್ತೆ. 
 

66

ಇಷ್ಟೇ ಅಲ್ಲ ಪ್ರತಿದಿನ ನೀವು ಬೆಳಗ್ಗೆ ಎದ್ದಾಗ ನಿಮ್ಮ ಕಿವಿಯಲ್ಲಿ ಶಂಖ ಊದುವಂತೆ ಶಬ್ಧ ಬರ್ತಿದೆ ಅಂದ್ರೆ ಅದು ಸಹ ಶುಭ ಸೂಚನೆಯಾಗಿದೆ. ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದು ಅರ್ಥ. ಅಂದ್ರೆ ನೀವು ಶೀಘ್ರದಲ್ಲಿ ಧನಿಕರಾಗ್ತೀರಿ ಅನ್ನೋದು ನೆನಪಿರಲಿ. 
 

Read more Photos on
click me!

Recommended Stories