ವಿವಾಹಿತೆಯರು ಸೋಮವಾರ ತಲೆಸ್ನಾನವನ್ನೇಕೆ ಮಾಡಬಾರದು?

First Published | Feb 26, 2024, 5:14 PM IST

ಹಿಂದು ಧರ್ಮದಲ್ಲಿ ಅನೇಕ ಧಾರ್ಮಿಕ ನಂಬಿಕೆಗಳಿವೆ, ಅವುಗಳಲ್ಲಿ ತಲೆ ಸ್ನಾನ ಮಾಡುವ ನಂಬಿಕೆ ಬಗ್ಗೆಯೂ ಇದೆ. ವಿವಾಹಿತ ಮಹಿಳೆಯರು ಯಾಕೆ ಸೋಮವಾರ ತಲೆಸ್ನಾನ ಮಾಡಬಾರದು ತಿಳಿಯಿರಿ.
 

ಹಿಂದೂ ಧರ್ಮದಲ್ಲಿ (Hindu Dharma) ಉಗುರು ಕತ್ತರಿಸೋದರಿಂದ ಹಿಡಿದು, ಕೂದಲು ಕತ್ತರಿಸುವವರೆಗೆ ಹಲವಾರು ಪದ್ಧತಿಗಳನ್ನು ಆಚರಿಸಿಕೊಂಡು ಬರಲಾಗಿದೆ. ಕನ್ಯೆಯರಿಗೆ ಮತ್ತು ವಿವಾಹಿತ ಮಹಿಳೆಯರಿಗೂ ಸಹ ಪದ್ಧತಿಗಳು ವಿಭಿನ್ನವಾಗಿದೆ. ಇದರಲ್ಲಿ ಸೋಮವಾರ ತಲೆಸ್ನಾನ ಮಾಡಬಾರದು ಅನ್ನೋ ಪದ್ಧತಿ ಕೂಡ ಇದೆ. ಈ ಪದ್ಧತಿ ಬಗ್ಗೆ ತಿಳಿಯೋಣ‌ .
 

ಆರ್ಥಿಕ ಸಮಸ್ಯೆ
ಮಹಿಳೆಯರು ಸೋಮವಾರ ಆದಷ್ಟು ತಲೆಸ್ನಾನ ಮಾಡೋದನ್ನು ತಪ್ಪುಸಬೇಕು ಎಂದು ತಜ್ಞರು ಹೇಳುತ್ತಾರೆ. ಸೋಮವಾರ ಕೂದಲು ತೊಳೆಯುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆಗಳು (financial problem) ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತೆ. 

Latest Videos


ಉನ್ನತಿ ಆಗೋದಿಲ್ಲ
ಶಾಸ್ತ್ರಗಳಲ್ಲಿ ತಿಳಿಸಿದಂತೆ ಸುಮಂಗಲಿ ಮಹಿಳೆಯರು ಸೋಮವಾರ ದಿನ ತಲೆ ಸ್ನಾನ ಮಾಡಬಾರದು. ಹೀಗೆ ಮಾಡೋದರಿಂದ ಕುಟುಂಬದ ಉನ್ನತಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತೆ
ಜೋತಿಷ್ಯದ ಅನುಸಾರ ಸೋಮವಾರ ತಪ್ಪಿಯೂ ಹೇರ್ ವಾಶ್ ಮಾಡಬಾರದು. ಹೀಗೆ ಮಾಡೋದರಿಂದ ವೈವಾಹಿಕ ಜೀವನದಲ್ಲಿ (problem in married life) ಸಮಸ್ಯೆಗಳು ಹೆಚ್ಚಾಗುತ್ತವೆ ಎನ್ನಲಾಗಿದೆ.

ಸಾಲ ಹೆಚ್ಚುತ್ತೆ
ಸೋಮವಾರ ದಿನ ಯಾರ ಮನೆಯಲ್ಲಿ ಮಹಿಳೆಯರು ತಲೆ ಸ್ನಾನ ಮಾಡುತ್ತಾರೋ ಆ ಮನೆಯಲ್ಲಿನ ಜನರು ಸಾಲದ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಲಕ್ಷ್ಮೀ ಮಾತೆಗೆ ಕೋಪ
ಅಷ್ಟೇ ಅಲ್ಲ ಸೋಮವಾರ ದಿನ ಕೂದಲು ತೊಳೆಯೋದರಿಂದ ಲಕ್ಷ್ಮೀ ದೇವಿ (Goddess Lakshmi) ಕೋಪಗೊಳ್ಳುವ ಸಾಧ್ಯತೆ ಹೆಚ್ಚಿದೆ‌. ಅಲ್ಲದೇ ಮನೆಯಲ್ಲಿ ಅಶಾಂತಿ, ಬೇಸರ ಹೆಚ್ಚಲಿದೆ. 

ಪತಿಯ ಆಯಸ್ಸಿನ ಮೇಲೆ ಪರಿಣಾಮ
ಸೋಮವಾರ ದಿನ (Monday Hair wash) ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡಿದ್ರೆ ಪತಿಯ ಆಯಸ್ಸಿನ ಮೇಲೆ ನೇರ ಪರಿಣಾಮ ಉಂಟಾಗುತ್ತದೆ ಎಂದು ಸಹ ನಂಬಲಾಗಿದೆ. 

ಇನ್ನು ನೀವು ತಿಳಿದುಕೊಳ್ಳಲೇ ಬೇಕಾದ ವಿಷಯ ಏನಂದ್ರೆ, ಈ ಎಲ್ಲಾ ಮಾಹಿತಿಗಳು ಕೇವಲ ವಿವಾಹಿತ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಅವಿವಾಹಿತ ಮಹಿಳೆಯರು ಸೋಮವಾರ ದಿನ ತಲೆಸ್ನಾನ ಮಾಡಬಹುದು. 
 

click me!