ಮನೆಯ ಮುಖ್ಯ ದ್ವಾರದಲ್ಲಿ ನಿಮ್ಮ ಹೆಸರನ್ನು ಬರೆಸೋದ್ರಿಂದ ಕೆಟ್ಟದಾಗುತ್ತಂತೆ !

First Published | Feb 24, 2024, 3:14 PM IST

ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ಮನೆಯ ಸುತ್ತಲೂ ಹರಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗಿರೋವಾಗ ನಾವು ನಮ್ಮ ನೇಮ್ ಪ್ಲೇಟ್ ಬರೆದು, ಮನೆಯ ಹೊರಗೆ ಇಟ್ಟರೆ ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿ ಖಂಡಿತವಾಗಿಯೂ ಕಾಡುತ್ತದೆ.

ಮನೆಯ ಮುಖ್ಯ ಬಾಗಿಲಿಗೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ (Vastu Shashtra) ವಿವರಿಸಲಾಗಿದೆ. ಇವುಗಳಲ್ಲಿ ಒಂದು ಮನೆಯ ಮುಖ್ಯ ದ್ವಾರದ ಮೇಲೆ ಹೆಸರನ್ನು ಬರೆಯುವುದು ಅಥವಾ ನಿಮ್ಮ ಹೆಸರಿನ ನಾಮಫಲಕವನ್ನು ಹಾಕುವುದು. ಹಾಗೇ ನೋಡಿದ್ರೆ, ನಿಮ್ಮಲ್ಲಿ ಅನೇಕರು ಮನೆಯ ಮುಖ್ಯ ಬಾಗಿಲಿನ ಮೇಲೆ ನಿಮ್ಮ ಹೆಸರನ್ನು ಬರೆಯುತ್ತೀರಿ ಅಥವಾ ನಿಮ್ಮ ಹೆಸರಿನ ನಾಮಫಲಕವನ್ನು ಹಾಕುತ್ತೀರಿ. ಆದರೆ ಹಾಗೆ ಮಾಡುವುದು ವಾಸ್ತುವಿನಲ್ಲಿ ತಪ್ಪು ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದಲ್ಲಿ, ಮನೆಯ ಮುಖ್ಯ ಬಾಗಿಲಿನ ಮೇಲೆ ಹೆಸರನ್ನು ಬರೆಯುವುದು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಮನೆಯ ಮುಂಬಾಗಿಲಿನ ಬಳಿ ನೇಮ್ ಪ್ಲೇಟ್ ಬರೆದು ಹಾಕುವುದರಿಂದ ಮನೆಗೆ ನೆಗೆಟೀವ್ ಎನರ್ಜಿ (negative energy) ಪ್ರವೇಶಿಸುತ್ತದೆ ಎಂದು ವಾಸ್ತುವಿನಲ್ಲಿ ನಂಬಲಾಗಿದೆ. 

Tap to resize

ಮನೆಯ ಮುಖ್ಯ ದ್ವಾರದಲ್ಲಿ ನಿಮ್ಮ ಹೆಸರನ್ನು ಏಕೆ ಬರೆಯಬಾರದು?: ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ಮನೆಯ ಸುತ್ತಲೂ ಹರಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗಿರೋವಾಗ ನಾವು ನಮ್ಮ ಹೆಸರನ್ನು ಮುಖ್ಯ ದ್ವಾರದ ಮೇಲೆ ಬರೆದರೆ, ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯು ಖಂಡಿತವಾಗಿಯೂ ನಮ್ಮನ್ನು ಕಾಡುತ್ತದೆ. ಸಕಾರಾತ್ಮಕ ಶಕ್ತಿಯು (positive energy) ಮನೆಯನ್ನು ಪ್ರವೇಶಿಸಿ ಮನೆಯ ಪೂರ್ವ ದಿಕ್ಕಿನಲ್ಲಿ ಚಲಿಸುತ್ತದೆ. ಆದರೆ ನೆಗೆಟಿವ್ ಎನರ್ಜಿ ಮನೆಯ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಇದಲ್ಲದೆ, ಹೆಸರನ್ನು ಬರೆಯುವುದು ಅಥವಾ ಮನೆಯ ಹೊರಗೆ ನಾಮಫಲಕವನ್ನು (Nameplate) ನೇತುಹಾಕುವುದು ಮನೆಯಲ್ಲಿ ವಾಸ್ತು ದೋಷವನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಯಾಕೆ ಆಗುತ್ತೆ ಅಂದ್ರೆ ಮನೆಯ ಪ್ರತಿಯೊಂದು ಸ್ಥಳದಲ್ಲಿ ಒಂದಲ್ಲ ಒಂದು ಗ್ರಹ ವಾಸಿಸುತ್ತದೆ.  ಮನೆಯ ಹೊರಗಿನ ಸ್ಥಳವು ರಾಹು ಗ್ರಹಕ್ಕೆ ಸೇರಿದೆ, ಇದನ್ನು ಪಾಪದ ಗ್ರಹವೆಂದು ಪರಿಗಣಿಸಲಾಗಿದೆ.

ಮುಖ್ಯದ್ವಾರದ ಮೇಲೆ ಹೆಸರನ್ನು ಬರೆಯುವ ಮೂಲಕ ಅಥವಾ ಮನೆಯ ಹೊರಗೆ ನಾಮಫಲಕವನ್ನು ನೇತುಹಾಕುವುದರಿಂದ, ರಾಹು ಖಂಡಿತವಾಗಿಯೂ ಆ ಹೆಸರಿನ ವ್ಯಕ್ತಿಯ ಮೇಲೆ ಅದರ ಅಡ್ಡಪರಿಣಾಮಗಳನ್ನು ಬೀರುತ್ತದೆ. 

ಈ ಕಾರಣಕ್ಕಾಗಿ, ಮನೆಯ ಹೊರಗೆ ಹೆಸರು ಬರೆದು ಹಾಕಬೇಡಿ. ನೀವು ಮನೆಯ ಹೊರಗೆ ನಾಮಫಲಕವನ್ನು ನೇತುಹಾಕಲು ಬಯಸಿದರೆ, ನಿಮ್ಮ ಸ್ವಂತ ಹೆಸರನ್ನು ನೇತುಹಾಕಬೇಡಿ, ಬದಲಾಗಿ ಮನೆಗೆ ಒಂದು ಹೆಸರನ್ನು ಇಡಿ ಮತ್ತು ಅದನ್ನು ಮನೆಯ ಹೊರಗೆ ಬರೆಯಿರಿ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. 

Latest Videos

click me!