ನಾವು ಏನಾದರೊಂದು ಕೆಲಸ ಮಾಡುವಾಗ ವಸ್ತುಗಳು ನಮ್ಮ ಕೈಯಿಂದ ತಪ್ಪಿ ಕೆಳಗೆ ಬಿದ್ದು ಹೋಗುವುದು ಸಾಮಾನ್ಯ. ಆದರೆ ಅದು ಪದೇ ಪದೇ ಆಗುತ್ತಿದ್ದರೆ ಮುಂದೆ ಏನೋ ದೊಡ್ಡ ಸಮಸ್ಯೆ ಆಗಲಿದೆ ಅನ್ನೋದನ್ನು ನೀವು ತಿಳಿಯಬೇಕು.
ಜ್ಯೋತಿಷ್ಯ ಶಾಸ್ತ್ರ ಅಥವಾ ವಾಸ್ತು ಶಾಸ್ತ್ರದ (Vastu Tips) ಅನುಸಾರ ಕೈಯಿಂದ ಕೆಲವು ವಸ್ತುಗಳು ಪದೇ ಪದೇ ನೆಲಕ್ಕೆ ಬೀಳುವುದು ಅಶುಭ ಎನ್ನಲಾಗುತ್ತದೆ. ಅದರಲ್ಲೂ ಬಿಳಿ ವಸ್ತುಗಳು ಕೈಯಿಂದ ಬೀಳುವುದನ್ನು ಯಾವತ್ತೂ ಇಗ್ನೋರ್ ಮಾಡಲೇಬೇಡಿ.
ಉಪ್ಪು
ನಿಮ್ಮ ಕೈಯಿಂದ ಉಪ್ಪು (salt) ಪದೇ ಪದೇ ಕೆಳಗೆ ಬೀಳುತ್ತಿದ್ದರೆ, ಅದು ಸಾಮಾನ್ಯ ವಿಷ್ಯ ಅಲ್ಲವೇ ಅಲ್ಲ. ಇದು ಅಪಶಕುನದ ಸಂಕೇತವಾಗಿದೆ (Sign of Bad Luck). ಕೈಯಿಂದ ಉಪ್ಪು (Salt) ನೆಲಕ್ಕೆ ಬೀಳುವುದು ಮುಂದೆ ಆರ್ಥಿಕ ಸಮಸ್ಯೆ (Econoic Crisis) ಉಂಟಾಗಲಿದೆ ಅನ್ನೋದರ ಸೂಚಕವಾಗಿದೆ.
ಹಾಲು
ಒಂದು ವೇಳೆ ಗ್ಯಾಸ್ ನಲ್ಲಿ ಹಾಲು (milk) ಇಟ್ಟಾಗ ಅದು ಕುದಿಬಂದು ಉಕ್ಕಿ ಚೆಲ್ಲುತ್ತಿದ್ದರೆ, ಈ ಘಟನೆ ಪದೇ ಪದೇ ನಿಮ್ಮ ಮನೆಯಲ್ಲಿ ನಡೆಯುತ್ತಿದ್ದರೆ ನಿಮಗೆ ಅದೊಂದು ಎಚ್ಚರಿಕೆ ಅನ್ನೋದು ತಿಳಿದಿರಲಿ. ಇದು ಜೀವನದಲ್ಲಿ ಏನೋ ದೊಡ್ಡ ಸಮಸ್ಯೆಯಾಗಲಿದೆ ಅನ್ನೋದರ ಸಂಕೇತ.
ಮೊಸರು (Curd)
ಪರೀಕ್ಷೆ ಇರಲಿ, ಹೊಸ ನೌಕರಿಗೆ ಸೇರ್ಪಡೆ ಅಥವಾ ಇಂಟರ್ವ್ಯೂ (Interview) ಇರಲಿ ಶುಭ ಕೆಲಸಕ್ಕೆ ತೆರಳುವಾಗ ಮೊಸರು (curd) ಸಕ್ಕರೆ ತಿನ್ನೋ ಸಂಪ್ರದಾಯವಿದೆ. ಒಂದು ವೇಳೆ ಮೊಸರು ಕೈತಪ್ಪಿ ನೆಲದ ಮೇಲೆ ಬಿದ್ದರೆ, ಏನೋ ಕೆಟ್ಟದಾಗುತ್ತದೆ ಎನ್ನುವುದರ ಸಂಕೇತವಾಗಿದೆ. ನಿರ್ಮಲಾ ಸೀತರಾಮನ್ ಕಳೆದ ಬಜೆಟ್ ಮಂಡಿಸೋ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊಸರು ಸಕ್ಕರೆ ತಿನ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಕ್ಕಿ
ಕೈಯಿಂದ ಅಕ್ಕಿ (rice) ನೆಲಕ್ಕೆ ಬಿದ್ದರೆ ಅದು ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಂದಿದ್ದಾಳೆ ಎನ್ನುವ ಸಂಕೇತವನ್ನು ನಿಡುತ್ತದೆ. ಇಂತಹ ಜನರಿಗೆ ಉನ್ನತಿ, ಸಂಪತ್ತು (Prosperity) ಪಡೆಯೋದು ಕಷ್ಟ.
ಶಂಖ
ಶಾಸ್ತ್ರದಲ್ಲಿ ಶಂಖವನ್ನು (conch)ಲಕ್ಷ್ಮೀ ದೇವಿಯ ಸಹೋದರ ಎಂದು ಕರೆಯಲಾಗುತ್ತದೆ. ಪೂಜೆಗಳಲ್ಲಿ ಶಂಖಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಪೂಜೆಯ ಸಮಯದಲ್ಲಿ ಕೈಯಿಂದ ಶಂಖ ಬಿದ್ದರೆ, ಅದನ್ನು ಅಪಶಕುನ ಎನ್ನಲಾಗುವುದು.
ಒಂದು ವೇಳೆ ನಿಮ್ಮ ಕೈಯಿಂದಲೂ ಪದೇ ಪದೇ ಈ ಮೇಲೆ ತಿಳಿಸಿದ ಯಾವುದೇ ವಸ್ತು ಬೀಳುತ್ತಿದ್ದರೆ, ನೀವು ಹೆಚ್ಚು ಜಾಗರೂಕರಾಗಿ ಇರೋದು ಮುಖ್ಯ. ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.