ಹಲ್ಲಿ ಶಕುನ: ಬೆಳ್‌ಬೆಳ್ಗೆ ಹಲ್ಲಿ ಹೀಗೆ ಚಲಿಸೋದು ನೋಡಿದ್ರೆ, ಅದು ಹಣ ಬರೋದ್ರ ಸೂಚನೆ!

Published : Sep 06, 2022, 12:10 PM IST

ಗೌಳಿ ಶಾಸ್ತ್ರದಲ್ಲಿ ಮತ್ತು ವಾಸ್ತುವಿನಲ್ಲಿ ಹಲ್ಲಿಯ ಚಲನೆಗಳು ನೀಡುವ ಸೂಚನೆಯ ಬಗ್ಗೆ ಹೇಳಲಾಗಿದೆ. ನೀವು ಹಲ್ಲಿಯ ಯಾವ ಚಲನೆ ಕಂಡರೆ ಏನದರ ಸಂಕೇತ ತಿಳಿಯಿರಿ..

PREV
19
ಹಲ್ಲಿ ಶಕುನ: ಬೆಳ್‌ಬೆಳ್ಗೆ ಹಲ್ಲಿ ಹೀಗೆ ಚಲಿಸೋದು ನೋಡಿದ್ರೆ, ಅದು ಹಣ ಬರೋದ್ರ ಸೂಚನೆ!

ಹಲ್ಲಿಗಳು ಸಾಮಾನ್ಯವಾಗಿ ಪ್ರತಿ ಮನೆಯಲ್ಲಿರುತ್ತವೆ. ಹಲ್ಲಿಗಳು ನಮ್ಮ ದೈನಂದಿನ ಬದುಕಿನಲ್ಲಿ ಮೂಗು ತೂರಿಸದಿದ್ದರೂ, ಅವುಗಳ ಚಲನೆಯನ್ನು ಭವಿಷ್ಯದ ಸೂಚನೆಯಾಗಿ ನೋಡುತ್ತದೆ ಗೌಳಿ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರ. ಹಲ್ಲಿಗಳ ಬಗ್ಗೆ ಸಾಕಷ್ಟು ನಂಬಿಕೆಗಳು ತಲೆತಲಾಂತರದಿಂದ ಬೆಳೆದು ಬಂದಿದೆ. ಬಹುತೇಕರಿಗೆ ಅವೆಂದರೆ ಅಸಹ್ಯ. ಆದರೆ, ಹಲ್ಲಿಗಳು ಸಾಕಷ್ಟು ಬಾರಿ ಶುಭ ಸೂಚನೆ ನೀಡುತ್ತವೆ. ಹಲ್ಲಿಗಳ ಚಲನವಲನವು ಮನೆಯಲ್ಲಿ ಏನಾಗಲಿದೆ ಎಂಬುದನ್ನು ಹೇಳುತ್ತದೆ. ಹಲ್ಲಿಗಳು ಮೈ ಮೇಲೆ ಬಿದ್ದರೆ ಯಾವ ಅಂಗದ ಮೇಲೆ ಬಿತ್ತೆಂಬ ಆಧಾರದ ಮೇಲೆ ಅದು ಶುಭವೋ ಅಶುಭವೋ ಎಂದು ಹೇಳಲಾಗುತ್ತದೆ. 
 

29

ಹಲ್ಲಿಗಳು ಮತ್ತು ಹಾವುಗಳನ್ನು ಕೊಲ್ಲುವುದು ಅಶುಭವೆಂದು ಪುರಾಣಗಳು ಹೇಳುತ್ತವೆ. ಹಲ್ಲಿಗಳನ್ನು ಅಥವಾ ಅವುಗಳ ಮೊಟ್ಟೆಗಳನ್ನು ಕೊಲ್ಲುವುದರ ಕೆಟ್ಟ ಪರಿಣಾಮ ತಲೆತಲಾಂತರಕ್ಕೂ ದಾಟುತ್ತದೆ ಎನ್ನಲಾಗುತ್ತದೆ.
ಹಲ್ಲಿಗಳನ್ನು ಯಾವ ರೂಪದಲ್ಲಿ ಕಂಡರೆ, ಅದರ ಯಾವ ಚಲನೆಯನ್ನು ಕಂಡರೆ ಶುಭ, ಯಾವುದು ಅಶುಭ ಎಂದು ತಿಳಿಯೋಣ.. 

39

ಬೆಳಗ್ಗೆ ಎದ್ದು ಹಲ್ಲಿಯನ್ನು ಕಂಡರೆ ಏನಾಗುತ್ತದೆ?
ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಎದ್ದಾಗ ಹಲ್ಲಿಯನ್ನು ನೋಡುವುದು ತುಂಬಾ ಶ್ರೇಯಸ್ಕರ. ಬೆಳಗ್ಗೆ ಹಲ್ಲಿಯ ಚಲನವಲನವನ್ನು ಮೊದಲು ನೋಡಿದರೆ ಆ ದಿನ ಕೈಗೆ ಹಣ ಬರುತ್ತದೆ ಎಂದು ಅರ್ಥ. ಮುಂಜಾನೆ ಹಲ್ಲಿಯು ಗೋಡೆಯ ಮೇಲೆ ಹತ್ತುವುದು ಕಂಡುಬಂದರೆ, ಅದು ತುಂಬಾ ಶುಭಕರವಾಗಿದೆ, ಇದು ಸುಧಾರಣೆಯ ಸಂಕೇತವಾಗಿದೆ.

49

ಕನಸಿನಲ್ಲಿ ಹಲ್ಲಿ(Lizard in a dream)
ನೀವು ಕನಸಿನಲ್ಲಿ ಹಲ್ಲಿಗೆ ಹೆದರುತ್ತಿರುವಂತೆ ಕಂಡರೆ, ಅದು ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ. ಇದು ಯಾವುದೇ ಪ್ರಯೋಜನಕಾರಿಯಲ್ಲ. ಅಲ್ಲದೆ, ಕನಸಿನಲ್ಲಿ ಹಲ್ಲಿ ಜೇಡವನ್ನು ತಿನ್ನುವುದನ್ನು ನೀವು ನೋಡಿದರೆ, ಅದು ಸಹ ಒಳ್ಳೆಯದಲ್ಲ. ಇದು ಭವಿಷ್ಯದ ಅಹಿತಕರ ಘಟನೆಯನ್ನು ಸೂಚಿಸುತ್ತದೆ.

59

ಹೊಸ ಮನೆಯಲ್ಲಿ ಸತ್ತ ಹಲ್ಲಿ(Dead Lizard in New House)
ಹೊಸ ಮನೆಯಲ್ಲಿ ಸತ್ತ ಹಲ್ಲಿ ಕಂಡುಬಂದರೆ, ಮನೆಯ ಮಾಲೀಕರು ಜಾಗರೂಕರಾಗಿರಬೇಕು. ಅದು ನಷ್ಟದ ಸೂಚನೆ. ಅಲ್ಲದೆ ಹಲ್ಲಿಗಳು ನೆಲದ ಮೇಲೆ ಹುಳಹುಪ್ಪಟೆ ತಿನ್ನುವ ದೃಶ್ಯವನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ.

69

ಹಲ್ಲಿ ಬಿದ್ದರೆ
ನೀವು ಹೊರಗೆ ಪ್ರಯಾಣಿಸಲು ಸಜ್ಜಾಗಿದ್ದಾಗ ಹಲ್ಲಿಯು ಕೆಳಗೆ ಬೀಳುವುದನ್ನು ನೋಡಿದರೆ ಅದು ಮುಂದೆ ಘಟಿಸುವ ಅಶುಭದ ಸೂಚನೆಯಾಗಿದೆ. ಅಂಥ ಸಂದರ್ಭದಲ್ಲಿ ಪ್ರಯಾಣ ರದ್ದುಪಡಿಸಬೇಕು ಇಲ್ಲವೇ, ಮನೆದೇವರಿಗೆ ನಮಿಸಿ, ಸ್ಮರಿಸಿ ಕೊಂಚ ಹೊತ್ತು ಬಿಟ್ಟು ಪ್ರಯಾಣ ಆರಂಭಿಸಬೇಕು. 
 

79

ಹಲ್ಲಿಯು ಬಾಗಿಲ ಸಂಧಿಯಲ್ಲಿ ಸಿಕ್ಕಿಕೊಂಡರೆ
ಹಲ್ಲಿಯು ಬಾಗಿಲ ಸಂಧಿಯಲ್ಲಿ ಸಿಕ್ಕಿ ಸತ್ತು ಹೋದರೆ, ಅದು ದುರದೃಷ್ಟದ ಸಮಯ ಎದುರಾಗುತ್ತಿರುವುದರ ಸೂಚನೆಯಾಗಿದೆ. 

89

ಹಲ್ಲಿ ಕಾದಾಟ(Lizard fight)
ಎರಡು ಹಲ್ಲಿಗಳು ಕಾದಾಡುವುದನ್ನು ನೋಡಿದರೆ ಅದು ಅಶುಭ ಎಂದು ಹೇಳಲಾಗುತ್ತದೆ. ಯಾರೊಂದಿಗಾದರೂ ನೀವು ಜಗಳವಾಡುವ ಸಮಯ ಸನ್ನಿಹಿತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಹಲ್ಲಿ ಕಾದಾಡುವುದು ಒಳ್ಳೆಯದಲ್ಲ. ಫಲಿತಾಂಶವು ಉತ್ತಮವಾಗಿರುವುದಿಲ್ಲ.

99

ಎರಡು ಹಲ್ಲಿಗಳು ಕೆಳಗೆ ಬಿದ್ದರೆ
ಎರಡು ಹಲ್ಲಿಗಳು ಒಟ್ಟಿಗೇ ಕೆಳಗೆ ಬೀಳುವುದನ್ನು ನೋಡಿದರೆ, ಕುಟುಂಬ ಸದಸ್ಯರ ನಡುವೆ ಸಧ್ಯದಲ್ಲೇ ದೊಡ್ಡ ಗಲಾಟೆಯಾಗಲಿರುವುದರ ಸೂಚನೆಯಾಗಿ ಪರಿಗಣಿಸಲಾಗುತ್ತದೆ. 

click me!

Recommended Stories