Vastu tips : ಈ ದಿನದಂದು ಪಾದರಕ್ಷೆ ಖರೀದಿಸಿದರೆ ಭಾರೀ ನಷ್ಟ ಸಂಭವಿಸಬಹುದು ಎಚ್ಚರ!

Suvarna News   | Asianet News
Published : Jan 13, 2022, 09:18 AM IST

ಪಾದರಕ್ಷೆಗಳು ವ್ಯಕ್ತಿತ್ವದ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಇದು ಬಹುತೇಕ ವ್ಯಕ್ತಿತ್ವ ವಿಕಸನ ಕೋರ್ಸ್ ನಲ್ಲಿ ವರದಿಯಾಗಿದೆ. ಆದರೆ ಜ್ಯೋತಿಷ್ಯದಲ್ಲಿಯೂ ಶೂ-ಚಪ್ಪಲಿಗಳ ಬಗ್ಗೆ ಹೇಳಲಾಗಿರುವುದು ಗೊತ್ತೇ? ಪಾದರಕ್ಷೆಗಳು ನಮ್ಮ ನಿರ್ಧಾರಗಳು, ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. 

PREV
16
Vastu tips : ಈ ದಿನದಂದು ಪಾದರಕ್ಷೆ ಖರೀದಿಸಿದರೆ ಭಾರೀ ನಷ್ಟ ಸಂಭವಿಸಬಹುದು ಎಚ್ಚರ!

ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ ನಿಯಮಗಳನ್ನು ಅನುಸರಿಸುವುದರಿಂದ ನೀವು ಹಣಕಾಸಿನ ತೊಂದರೆಗಳಿಂದ ದೂರವಿರಲು ಸಾಧ್ಯವಿದೆ. ಪಾದರಕ್ಷೆಗಳಿಗೆ ಸಂಬಂಧಿಸಿದ  ಈ ನಿಯಮಗಳನ್ನು ನಾವು ಯಾವಾಗಲೂ ಅನುಸರಿಸಬೇಕು.

26

ಈ ನಿಯಮಗಳನ್ನು ನೆನಪಿನಲ್ಲಿಡಿ
ಮಂಗಳವಾರ, ಶನಿವಾರ ಮತ್ತು ಗ್ರಹಣದ ದಿನಗಳಲ್ಲಿ ಎಂದಿಗೂ ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬೇಡಿ. ಅಮಾವಾಸ್ಯೆಯ ದಿನ ಪಾದರಕ್ಷೆಗಳನ್ನು ಖರೀದಿಸುವ ತಪ್ಪನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ದೊಡ್ಡ ಹಾನಿ ಉಂಟಾಗುತ್ತದೆ. 

36

ಪಾದರಕ್ಷೆಗಳು ಹೊಸದಾಗಿರಲಿ ಅಥವಾ ಒಳಾಂಗಣದಲ್ಲಿ ಮಾತ್ರ ಬಳಸಲಿ, ಯಾವುದೇ ಸಂದರ್ಭದಲ್ಲಿ ಅವುಗಳನ್ನು ಅಡುಗೆಮನೆಯಲ್ಲಿ (kitchen) ಧರಿಸಬೇಡಿ. ಹೀಗೆ ಮಾಡುವುದರಿಂದ ತಾಯಿ ಅನ್ನಪೂರ್ಣೆ ಕೋಪಗೊಳ್ಳುತ್ತಾರೆ. ಇದರಿಂದ ಆಹಾರದ ಕೊರತೆ ಉಂಟಾಗಬಹುದು.

46

ಅದೇ ರೀತಿ ಶೂ, ಚಪ್ಪಲಿ ಧರಿಸಿ ಸ್ಟೋರ್ ರೂಮಿಗೆ (store room)ಹೋಗಬೇಡಿ. ಈ ಸ್ಥಳವು ಅನ್ನಪೂರ್ಣ ದೇವಿಯೊಂದಿಗೂ ಸಂಬಂಧವನ್ನು ಹೊಂದಿದ್ದು. ಮನೆಯಲ್ಲಿ ತಯಾರಿಸಿದ ಧಾನ್ಯವನ್ನು ಇಲ್ಲಿ ಇಡಲಾಗಿರುತ್ದೆತ. ಇಲ್ಲಿ ಪಾದರಕ್ಷೆಗಳನ್ನು ಧರಿಸುವುದರಿಂದ ಮನೆಯ ಸುಖ ಸಮೃದ್ಧಿ ನಾಶವಾಗುತ್ತದೆ. 

56

ಎಂದಿಗೂ ಬೇರೆಯವರ ಬೂಟುಗಳು (others footwear)ಮತ್ತು ಚಪ್ಪಲಿಗಳನ್ನು ಧರಿಸಬೇಡಿ. ಮನೆಯ ಸದಸ್ಯರು  ಸಹ ಪರಸ್ಪರರ ಪಾದರಕ್ಷೆಗಳನ್ನು ಧರಿಸಬಾರದು. ಶೂ ಮತ್ತು ಚಪ್ಪಲಿಗಳು ಶನಿಗೆ ಸಂಬಂಧಿಸಿವೆ ಮತ್ತು ಪರಸ್ಪರ ಪಾದರಕ್ಷೆಗಳನ್ನು ಧರಿಸುವುದರಿಂದ ಶನಿ ಅಶುಭ ಫಲಗಳನ್ನು ನೀಡುತ್ತಾನೆ.  

66

ಶನಿವಾರದಂದು ಅಗತ್ಯ ಇರುವವರಿಗೆ ಶೂ ಮತ್ತು ಚಪ್ಪಲಿಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತದೆ. ಇದರಿಂದ ಶನಿ ಸಂತುಷ್ಟನಾಗುತ್ತಾನೆ. 

Read more Photos on
click me!

Recommended Stories