ತುಳಸಿ ಸಸ್ಯವನ್ನು(Tulsi plant) ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತೆ ಮತ್ತು ಅದನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಡಲು ಸೂಚಿಸಲಾಗುತ್ತೆ. ತುಳಸಿ ಗಿಡವಿರುವ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತೆ ಎಂದು ಹೇಳಲಾಗುತ್ತೆ.
ಈಶಾನ್ಯವನ್ನು ತುಳಸಿಗೆ ಉತ್ತಮ ದಿಕ್ಕು ಎಂದು ಪರಿಗಣಿಸಲಾಗಿದೆ ಮತ್ತು ಅದರ ಪೂಜೆಗೆ(Worship) ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ, ಅದನ್ನು ಅನುಸರಿಸಬೇಕು. ಕೆಲವು ವಿಶೇಷ ದಿನಗಳಲ್ಲಿ ಈ ತುಳಸಿಯನ್ನು ಮನೆಗೆ ತರೋದು ಸೂಕ್ತ ಮತ್ತು ಕೆಲವು ದಿನಗಳಲ್ಲಿ ಅದನ್ನು ಮುಟ್ಟಬಾರದು ಎನ್ನಲಾಗುತ್ತೆ. .
ತುಳಸಿ ಸಸ್ಯವನ್ನು ಉಡುಗೊರೆ (Gift) ನೀಡೋದು ಸರಿಯೇ?
ವಾಸ್ತುವನ್ನು ನಂಬೋದಾದ್ರೆ, ತುಳಸಿ ಸಸ್ಯವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡೋದು ತುಂಬಾ ಶುಭ ಎಂದು ಪರಿಗಣಿಸಲಾಗುತ್ತೆ. ತುಳಸಿ ಹಿಂದೂ ಧರ್ಮದಲ್ಲಿ ಪವಿತ್ರ ಸಸ್ಯವಾಗಿದೆ ಮತ್ತು ಅದು ಮನೆಗೆ ಸಮೃದ್ಧಿಯನ್ನು ತರುತ್ತೆ. ಇದು ಸಕಾರಾತ್ಮಕತೆಯನ್ನು ಆಕರ್ಷಿಸುತ್ತೆ.
ತುಳಸಿ ಸಸ್ಯವನ್ನು(Basil plant) ಗೌರವಿಸುವ ಯಾರಿಗಾದರೂ ಉಡುಗೊರೆಯಾಗಿ ನೀಡಿದರೆ, ಅದು ನಿಮ್ಮ ಮನೆಗೆ ತುಂಬಾ ಶುಭವೆಂದು ಹೇಳಲಾಗುತ್ತೆ. ಇದು ಗಾಳಿಯನ್ನು ಶುದ್ಧೀಕರಿಸಲು ಮತ್ತು ನಕಾರಾತ್ಮಕ ಶಕ್ತಿಗಳಿಂದ ಮನೆಯನ್ನು ರಕ್ಷಿಸಲು ಸಹಾಯ ಮಾಡುತ್ತೆ.
ಯಾವ ದಿನ ನೀಡಬಹುದು?
ತುಳಸಿ ಸಸ್ಯದ ಸ್ಪರ್ಶವನ್ನು ನಿಷೇಧಿಸಿದ ದಿನದಂದು ಈ ಸಸ್ಯವನ್ನು ಯಾರಿಗೂ ದಾನ ಅಥವಾ ಉಡುಗೊರೆಯಾಗಿ ನೀಡಬಾರದು ಎಂಬುದನ್ನು ನೆನಪಿನಲ್ಲಿಡಿ. ಉದಾಹರಣೆಗೆ, ಭಾನುವಾರ(Sunday) ಅಥವಾ ಏಕಾದಶಿಯಂದು ಅದನ್ನು ಯಾರಿಗೂ ಉಡುಗೊರೆಯಾಗಿ ನೀಡಬೇಡಿ
ತುಳಸಿ ಸಸ್ಯ ಸ್ಪರ್ಶಿಸೋದನ್ನು ನಿಷೇಧಿಸಲಾದ ಕೆಲವು ದಿನಗಳು ಜ್ಯೋತಿಷ್ಯದಲ್ಲಿವೆ ಮತ್ತು ಆ ದಿನಗಳಂದು ತುಳಸಿಯನ್ನು ಅವಮಾನಿಸದಂತೆ ನೋಡಿಕೊಳ್ಳಿ. ಮನೆಯಲ್ಲಿನ ವಾಸ್ತು(Vaastu) ಪ್ರಕಾರ, ತುಳಸಿ ಸಸ್ಯವನ್ನು ಇಡಲು ಉತ್ತಮ ಸ್ಥಳ ಈಶಾನ್ಯ ದಿಕ್ಕು.
ಯಾವ ರೀತಿಯ ತುಳಸಿ ಸಸ್ಯ ಓಕೆ?
ನೀವು ಯಾರಿಗಾದರೂ ತುಳಸಿ ಸಸ್ಯವನ್ನು ಉಡುಗೊರೆಯಾಗಿ ನೀಡುತ್ತಿದ್ದರೆ, ಈ ಸಸ್ಯ ಆರೋಗ್ಯಕರವಾಗಿ(Healthy) ಮತ್ತು ಚೆನ್ನಾಗಿ ನೋಡಿಕೊಳ್ಳೋದು ನಿಮ್ಮ ಕರ್ತವ್ಯ. ಇದಕ್ಕಾಗಿ, ಸಸ್ಯದ ಗಾತ್ರಕ್ಕೆ ಸೂಕ್ತವಾದ ಮಡಕೆಯನ್ನು ಸಹ ಆಯ್ಕೆ ಮಾಡಬೇಕು. ಒಣಗಿದ ಸಸ್ಯವನ್ನು ಎಂದಿಗೂ ಉಡುಗೊರೆಯಾಗಿ ನೀಡಬಾರದು ಎಂಬುದನ್ನು ನೆನಪಿನಲ್ಲಿಡಿ.
ಪ್ರಯೋಜನಗಳು
ಜ್ಯೋತಿಷ್ಯವನ್ನು ನಂಬೋದಾದ್ರೆ, ತುಳಸಿ ಸಸ್ಯವನ್ನು ಉಡುಗೊರೆಯಾಗಿ ನೀಡೋದರಿಂದ, ನಿಮ್ಮ ಮನೆಯಲ್ಲಿ ಸಮೃದ್ಧಿ ನೆಲೆಸುತ್ತೆ, ಯಾಕಂದ್ರೆ ನೀವು ಇನ್ನೊಬ್ಬ ವ್ಯಕ್ತಿಯ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು(Positive energy) ರವಾನಿಸುತ್ತೀರಿ.
ತುಳಸಿ ಶಾಂತಿಯ ಸಂಕೇತ ಮತ್ತು ಮನೆಯಲ್ಲಿ ಸಾಮರಸ್ಯದ ವಾತಾವರಣ ಒದಗಿಸುತ್ತೆ. ನೀವು ತುಳಸಿಯನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದಾಗ, ಅದು ನಿಮ್ಮ ಮನೆಯ ವಾತಾವರಣವನ್ನು ಶಾಂತಿಯುತವಾಗಿರಿಸುತ್ತೆ(Peace).
ನಿಯಮಗಳು
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಸಸ್ಯ ತುಂಬಾ ಮಂಗಳಕರವೆಂದು ಹೇಳಲಾಗುತ್ತೆ, ಆದ್ದರಿಂದ ಇದನ್ನು ಧಾರ್ಮಿಕ ಹಬ್ಬ, ಜನ್ಮದಿನ(Birthday), ಮದುವೆ, ಗೃಹ ಪ್ರವೇಶ ಅಥವಾ ಇತರ ಯಾವುದೇ ಸಾಮಾಜಿಕ ಸಮಾರಂಭಗಳಲ್ಲಿ ನೀಡೋದು ಸೂಕ್ತವಾಗಿದೆ.
ತುಳಸಿ ಸಸ್ಯವನ್ನು ಉಡುಗೊರೆಯಾಗಿ ನೀಡಿದಾಗ, ಅದನ್ನು ಮನೆಯಲ್ಲಿ ಸರಿಯಾಗಿ ಸ್ಥಾಪಿಸಬೇಕು ಮತ್ತು ಸರಿಯಾಗಿ ನೋಡಿಕೊಳ್ಳಬೇಕು.
ತುಳಸಿ ಸಸ್ಯವನ್ನು ಉಡುಗೊರೆಯಾಗಿ ನೀಡುವ ಮೊದಲು, ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಸುಂದರವಾದ ಮಡಕೆಯಲ್ಲಿಟ್ಟು(Pot) ಉಡುಗೊರೆಯಾಗಿ ನೀಡಿ.
ನೀವು ಯಾರಿಗಾದರೂ ತುಳಸಿ ಸಸ್ಯವನ್ನು ಉಡುಗೊರೆಯಾಗಿ ನೀಡುತ್ತಿದ್ದರೆ, ಅದರ ನಿಯಮಗಳನ್ನು ಅನುಸರಿಸಿ ಇದರಿಂದ ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ ನೆಲೆಸುತ್ತೆ.