ವಾಸ್ತು ಶಾಸ್ತ್ರದ ಪ್ರಕಾರ, ಉಗುರಿನ ಮೇಲೆ ಬಿಳಿ ಚುಕ್ಕೆ ಶುಭ ಸಂಕೇತ ನೀಡುತ್ತೆ!

First Published | Oct 20, 2022, 4:36 PM IST

ದೈನಂದಿನ ಜೀವನದಲ್ಲಿ ಕೆಲವು ಘಟನೆಗಳು ಮಾನವರ ಜೀವನದ ಮೇಲೆ ಬಹಳ ಗಾಢವಾದ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ದೇಹದ ಮೇಲಿನ ಯಾವುದೇ ಗುರುತು, ಮಚ್ಚೆ ಅಥವಾ ಉಗುರುಗಳಲ್ಲಿ ಕಂಡುಬರುವ ಬಿಳಿ ಗುರುತು ಬಹಳ ಮುಖ್ಯವೆಂದು ವಿವರಿಸಲಾಗಿದೆ. ಉಗುರಿನ ಆಕಾರದಿಂದ ಹಿಡಿದು ಅದರಲ್ಲಿ ರೂಪುಗೊಂಡ ಬಿಳಿ ಗುರುತುಗಳವರೆಗೆ, ಜೀವನದ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳೆರಡೂ ಉಂಟಾಗುತ್ತೆ. 

ಕೈಗಳ ಉಗುರುಗಳಲ್ಲಿ(Nails) ಕಂಡುಬರೋ ಈ ಬಿಳಿ ಗುರುತು ನಿಮ್ಮ ಭವಿಷ್ಯದ ಬಗ್ಗೆಯೂ ಸೂಚಿಸುತ್ತೆ. ಈ ಬಿಳಿ ಚುಕ್ಕೆಗಳು ನಮ್ಮ ಜೀವನ ಮತ್ತು ವೃತ್ತಿಜೀವನದ ಮೇಲೆ ಯಾವ ಶುಭ ಮತ್ತು ಅಶುಭ ಪರಿಣಾಮ ಬೀರುತ್ತವೆ ಎಂದು ತಿಳಿದುಕೊಳ್ಳೋಣ. ಇಲ್ಲಿದೆ ಆ ಕುರಿತಾದ ಸಂಪೂರ್ಣ ಮಾಹಿತಿ.

ಹಸ್ತ ಸಾಮುದ್ರಿಕಶಾಸ್ತ್ರದಲ್ಲಿ ಹೇಳಿರೋ ಪ್ರಕಾರ, ಯಾವ ಜನರ ಉಗುರುಗಳ ಆಕಾರವು ವಿಶಾಲವಾಗಿದೆಯೋ ಅವರು ತಮ್ಮ ಆರೋಗ್ಯಕ್ಕೆ(Health) ಸಂಬಂಧಿಸಿದ ವಿಷಯಗಳಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಈ ಜನರು ದೈಹಿಕವಾಗಿಯೂ ಶಕ್ತಿಶಾಲಿಗಳಾಗಿರುತ್ತಾರೆ.

Tap to resize

ಕಿರಿಯ ಬೆರಳಿನ ಉಗುರಿನಲ್ಲಿ ಉಂಟಾಗುವ ಬಿಳಿ ಕಲೆಗಳ ಗುರುತನ್ನು ಶುಭವೆಂದು ಪರಿಗಣಿಸಲಾಗುತ್ತೆ. ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ಯಾರ ಕಿರುಬೆರಳ ಉಗುರಿನಲ್ಲಿ ಬಿಳಿ ಚುಕ್ಕೆಗಳಿರುತ್ತದೆಯೋ, ಆ ವ್ಯಕ್ತಿಯು ಶೀಘ್ರದಲ್ಲೇ ತನ್ನ ಕಾರ್ಯಗಳಲ್ಲಿ ಯಶಸ್ಸನ್ನು(Success) ಸಾಧಿಸುತ್ತಾನೆ.
 

ಮಧ್ಯದ ಬೆರಳಿನ ಉಗುರುಗಳ ಮೇಲಿನ ಬಿಳಿ ಗುರುತುಗಳನ್ನು ಶುಭ ಮತ್ತು ಕಲ್ಯಾಣವೆಂದು ಪರಿಗಣಿಸಲಾಗುತ್ತೆ. ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ಅವು ವ್ಯಕ್ತಿಯ ಜೀವನದಲ್ಲಿ ಹಣದ(Money) ಆಗಮನವನ್ನು ಸೂಚಿಸುತ್ತವೆ. ಇದರಿಂದ ಅವರು ಆರ್ಥಿಕವಾಗಿ ಸಫಲರಾಗುತ್ತಾರೆ ಎಂದು ಹೇಳಲಾಗುತ್ತೆ.

ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ತಮ್ಮ ಹೆಬ್ಬೆರಳಿನ ಉಗುರುಗಳ ಮೇಲೆ ಬಿಳಿ ಚುಕ್ಕೆಗಳನ್ನು ಹೊಂದಿರುವ ಜನರು ವ್ಯವಹಾರದಲ್ಲಿ(Business) ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ಅವರು ವಹಿವಾಟು ವ್ಯವಹಾರದಲ್ಲಿ ಹೆಚ್ಚು ಯಶಸ್ಸು ಕಾಣುತ್ತಾರೆ. ನೀವು ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ ಎಂದು ಹೇಳಲಾಗಿದೆ.

ವೈದ್ಯಕೀಯ ವಿಜ್ಞಾನದ ಬಗ್ಗೆ ಹೇಳೋದಾದ್ರೆ, ಇದರ ಪ್ರಕಾರ, ಉಗುರುಗಳ ಮೇಲಿನ ಈ ಬಿಳಿ ಗುರುತುಗಳು ವ್ಯಕ್ತಿಯ ರಕ್ತ ಸಂಬಂಧಿತ ಸಮಸ್ಯೆಗಳ ಬಗ್ಗೆ ತಿಳಿಸುತ್ತವೆ. ಅಂತಹ ವ್ಯಕ್ತಿಗಳು ರಕ್ತದೊತ್ತಡಕ್ಕೆ(Blood pressure) ಸಂಬಂಧಿಸಿದ ಕಾಯಿಲೆಗಳ ಅಪಾಯದಲ್ಲಿದ್ದಾರೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಿರುವುದೆಲ್ಲವೂ ನಿಜ ಇರಬಹುದು, ಆದರೆ ನೀವು ಆರೋಗ್ಯದ ಕಡೆಗೂ ಗಮನ ಹರಿಸೋದು ಮುಖ್ಯ.

Latest Videos

click me!