ಪೊರಕೆಗೆ(Broom) ಸಂಬಂಧಿಸಿದ ನಂಬಿಕೆ ಮತ್ತು ಸಂಪ್ರದಾಯಗಳು ಇವು...
ಪೊರಕೆಯನ್ನು ಮನೆ ಸ್ವಚ್ಛಗೊಳಿಸಲು ಬಳಸಲಾಗುತ್ತೆ. ಪೊರಕೆ ಸರಳ ವಸ್ತುವಿನಂತೆ ಕಾಣಿಸಬಹುದು, ಆದರೆ ಹಿಂದೂ ಧರ್ಮದಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ನಂಬಿಕೆ ಮತ್ತು ಸಂಪ್ರದಾಯಗಳು ಇದನ್ನು ವಿಶೇಷಗೊಳಿಸುತ್ತವೆ.
ವಿಶೇಷ ಸಂದರ್ಭಗಳಲ್ಲಿ ಪೊರಕೆಗಳನ್ನು ಸಹ ಪೂಜಿಸಲಾಗುತ್ತೆ. ಪೊರಕೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ವಾಸ್ತುವಿನಲ್ಲಿ(Vaastu) ಹೇಳಲಾಗಿದೆ. ಪೊರಕೆಯನ್ನು ತಪ್ಪು ದಿಕ್ಕಿನಲ್ಲಿ ಅಥವಾ ತಪ್ಪು ರೀತಿಯಲ್ಲಿ ಇರಿಸಿದರೆ, ನಾವು ಅದರ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಸಹ ಹೇಳಲಾಗುತ್ತೆ. ಪೊರಕೆಗೆ ಸಂಬಂಧಿಸಿದ ನಂಬಿಕೆ ಮತ್ತು ಸಂಪ್ರದಾಯಗಳ ಬಗ್ಗೆ ಇನ್ನಷ್ಟು ತಿಳಿಯಿರಿ...
ಯಾವಾಗ ಮತ್ತು ಏಕೆ ಪೊರಕೆ ಪೂಜಿಸುತ್ತಾರೆ?
ಕೆಲವು ಕಡೆ ದೀಪಾವಳಿಯಂದು(Deepawali) ಪೊರಕೆಯನ್ನು ಪೂಜಿಸಲಾಗುತ್ತೆ. ಹಿರಿಯರು ಇದರ ಹಿಂದಿನ ಸತ್ಯವನ್ನು ಮರೆಮಾಚಲಾಗಿದೆ ಎನ್ನುತ್ತಾರೆ, ಅವರ ಪ್ರಕಾರ, ಪೊರಕೆ ನಮ್ಮ ಮನೆಯನ್ನು ಸ್ವಚ್ಚಗೊಳಿಸುತ್ತೆ ಅಂದರೆ ಮನೆಯಿಂದ ನಕಾರಾತ್ಮಕ ವಸ್ತುಗಳನ್ನು ತೆಗೆದುಹಾಕುತ್ತೆ.
ನಕಾರಾತ್ಮಕ ವಸ್ತುಗಳು ನಮ್ಮ ಮನೆಯಿಂದ ಹೊರಬಂದಾಗ ಮಾತ್ರ ಸಕಾರಾತ್ಮಕ ಶಕ್ತಿ(Positive energy) ಮನೆಯನ್ನು ಪ್ರವೇಶಿಸುತ್ತೆ. ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವ ಮೂಲಕ, ಸಂತೋಷ ಮತ್ತು ಸಮೃದ್ಧಿ (Prosperity) ಉಳಿಯುತ್ತೆ . ಈ ಆಲೋಚನೆಯನ್ನು ಗಮನದಲ್ಲಿಟ್ಟುಕೊಂಡು, ದೀಪಾವಳಿಯಂದು ಪೊರಕೆ ಪೂಜಿಸುವ ಸಂಪ್ರದಾಯವಿದೆ.
ರಾತ್ರಿಯಲ್ಲಿ ಕಸ ಗುಡಿಸಬಾರದೇಕೆ?
ಹಳೆಯ ನಂಬಿಕೆಗಳ ಪ್ರಕಾರ, ಪೊರಕೆಯನ್ನು ರಾತ್ರಿಯಲ್ಲಿ ಉಪಯೋಗಿಸೋದಿಲ್ಲ ಮತ್ತು ಅದನ್ನು ಉಪಯೋಗಿಸಿದ್ರು, ಕಸ(Dirt) ಹೊರಗೆ ಎಸೆಯದೆ ಮನೆಯ ಮೂಲೆಯಲ್ಲಿ ಸಂಗ್ರಹಿಸಲಾಗುತ್ತೆ. ಇದರ ಹಿಂದಿನ ನಂಬಿಕೆಯೆಂದರೆ ರಾತ್ರಿಯಲ್ಲಿ ಕಸ ಗುಡಿಸುವ ಮೂಲಕ ಮತ್ತು ಕಸವನ್ನು ಎಸೆಯುವ ಮೂಲಕ, ಮನೆಯ ಸಂತೋಷ ಮತ್ತು ಸಮೃದ್ಧಿ ಸಹ ಹೋಗುತ್ತೆ. ಆದ್ದರಿಂದ, ಹಾಗೆ ಮಾಡುವುದನ್ನು ತಪ್ಪಿಸಬೇಕು.
ನಂಬಿಕೆಗಳ ಪ್ರಕಾರ, ಪೊರಕೆಯನ್ನು ಎಂದಿಗೂ ನಿಂತಿರುವ ಭಂಗಿಯಲ್ಲಿ ಅಥವಾ ಗೋಡೆಯ ಬೆಂಬಲದ ಮೇಲೆ ಇಡಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತೆ. ಇದರ ಹಿಂದಿನ ನಂಬಿಕೆಯೆಂದರೆ, ಪೊರಕೆಯನ್ನು ನಿಂತ ಸ್ಥಿತಿಯಲ್ಲಿ ಇಟ್ಟರೆ, ಅದು ಹಣದ ನಷ್ಟಕ್ಕೆ(Loss of money) ಕಾರಣವಾಗುತ್ತೆ ಮತ್ತು ಮನೆಯಲ್ಲಿ ನಕಾರಾತ್ಮಕತೆ ಹರಡಲು ಪ್ರಾರಂಭಿಸುತ್ತೆ. ಈ ಕಾರಣಕ್ಕಾಗಿ, ಪೊರಕೆಯನ್ನು ಎಂದಿಗೂ ನಿಂತಿರುವ ಭಂಗಿಯಲ್ಲಿ ಇಡಬಾರದು.
<
ಪೊರಕೆ ಮುರಿದರೆ ಏನು ಮಾಡಬೇಕು?
ದೀರ್ಘಕಾಲದ ಬಳಕೆಯಿಂದಾಗಿ ಪೊರಕೆ ಮುರಿಯುತ್ತೆ. ಹಾಗಾಗಿ, ಮುರಿದ ಪೊರಕೆಯನ್ನು ಅಶುಭವೆಂದು ಪರಿಗಣಿಸೋದರಿಂದ ಅದನ್ನು ತಕ್ಷಣ ಮನೆಯಿಂದ ತೆಗೆದುಹಾಕಬೇಕು. ಅಲ್ಲದೆ, ಸವೆತದ ಸಂದರ್ಭದಲ್ಲಿ, ಅದರಿಂದ ನಕಾರಾತ್ಮಕ ಶಕ್ತಿ(Negative energy) ಹೊರಬರಲು ಪ್ರಾರಂಭಿಸುತ್ತೆ, ಇದು ನಮ್ಮ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತೆ..
ಪೊರಕೆಯನ್ನು ಬಚ್ಚಿಡಬೇಕು ಎಂದು ಏಕೆ ಹೇಳುತ್ತಾರೆ?
ಪೊರಕೆಗೆ ಸಂಬಂಧಿಸಿದ ಈ ನಂಬಿಕೆಯೂ ಇದೆ, ಅದನ್ನು ಬೇರೆಯವರ ಕಣ್ಣು ಬೀಳದ ಸ್ಥಳದಲ್ಲಿ ಇಡಬೇಕು. ಇದರ ಹಿಂದೆ ಒಂದು ಕಾರಣವೂ ಇದೆ, ಅವರ ಪ್ರಕಾರ, ಇನ್ನೊಬ್ಬ ವ್ಯಕ್ತಿ ನಮ್ಮ ಮನೆಯ ಪೊರಕೆ ನೋಡಿದಾಗ, ಅದರಿಂದ ಬರುವ ಶುಭ ಫಲಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ, ಪೊರಕೆಯನ್ನು ಮರೆಮಾಡಬೇಕು. ಪೊರಕೆಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ(South direction) ಅಥವಾ ಪಶ್ಚಿಮ-ದಕ್ಷಿಣ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.