ಕತ್ತರಿಯಲ್ಲಿ ಸುಮ್ ಸುಮ್ಮನೆ ಆಡಿದ್ರೆ ಮನೆಯಲ್ಲಿ ಜಗಳ ಹೆಚ್ಚುತ್ತಾ?

First Published | Feb 28, 2023, 1:25 PM IST

ಯಾವುದೇ ವಸ್ತು ಇಲ್ಲದೇ ಕೇವಲ ಖಾಲಿ ಕತ್ತರಿಯನ್ನು ಯಾರಾದ್ರೂ ಚಲಾಯಿಸಿದ್ರೆ, ಮನೆಯ ಹಿರಿಯರು ಹಾಗೇ ಮಾಡಬೇಡಿ, ಇದರಿಂದ ಜಗಳವಾಗುತ್ತದೆ ಎಂದು ಹೇಳುತ್ತಾರೆ. ಇದು ನಿಜವೋ ಸುಳ್ಳೋ ಅನ್ನೋದು ನಮಗೆ ಗೊತ್ತಿಲ್ಲ. ಆದರೆ ಇದರ ಬಗ್ಗೆ ವೈಜ್ಞಾನಿಕ ತರ್ಕ ಏನು ಹೇಳುತ್ತೆ ತಿಳಿಯೋಣ. 
 

ಹಿಂದೂ ಧರ್ಮದಲ್ಲಿ (Hindu Dharma) ಅನೇಕ ಸಣ್ಣ ವಿಷಯಗಳ ಬಗ್ಗೆ ದೊಡ್ಡ ನಂಬಿಕೆಗಳಿವೆ. ಕೆಲವೊಮ್ಮೆ ನಾವು ಅದನ್ನು ನಂಬದೇ ಇದ್ದರೂ, ಆ ನಂಬಿಕೆಯನ್ನು ಅನುಸರಿಸದಿದ್ದರೆ, ಅಶುಭ ಸಂಗತಿ ಸಂಭವಿಸಬಹುದು ಎಂಬ ಭಯ ಅಂತೂ ಇದ್ದೆ ಇರುತ್ತೆ. ಅಂತಹ ಒಂದು ನಂಬಿಕೆ ಕತ್ತರಿಯ ಬಗ್ಗೆಯೂ ಇದೆ. ಕತ್ತರಿಯನ್ನು ಸುಮ್ಮನೆ ಚಲಾಯಿಸಿದರೆ ಕೆಟ್ಟದಾಗುತ್ತೆ ಎನ್ನಲಾಗುತ್ತೆ.

ಮಕ್ಕಳು ಅಥವಾ ವಯಸ್ಕರು ಸಹ ಖಾಲಿ ಕತ್ತರಿಯನ್ನು ಸುಮ್ಮನೆ ಚಲಾಯಿಸಿದಾಗೆಲ್ಲ, ಮನೆಯ ಹಿರಿಯರು ಖಾಲಿ ಕತ್ತರಿಯನ್ನು ಹಾಗೇ ಮಾಡಬೇಡಿ, ಇದರಿಂದ ಮನೆಯಲ್ಲಿ ಜಗಳವಾಗುತ್ತದೆ ಎಂದು ಹೇಳುವುದನ್ನು ನೀವು ಆಗಾಗ್ಗೆ ನೋಡಿರಬಹುದು. ಖಾಲಿ ಕತ್ತರಿಯನ್ನು (empty scissors) ಚಲಾಯಿಸಿದಾಗ ನಿಜವಾಗಿಯೂ ಮನೆಯಲ್ಲಿ ವಿವಾದಕ್ಕೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆ ನಿಮಗೂ ಕಾಡಿರಬಹುದು.

Latest Videos


scissor

ಜ್ಯೋತಿಷ್ಯ ತಜ್ಞರು ಹೇಳುವಂತೆ ಖಾಲಿ ಕತ್ತರಿಯನ್ನು ಚಲಾಯಿಸುವುದರ ಹಿಂದೆ ಧರ್ಮಗ್ರಂಥಗಳಲ್ಲಿ ಒಂದು ತಾರ್ಕಿಕ ವಿಷಯವಿದೆಯಂತೆ. ಖಾಲಿ ಕತ್ತರಿಯನ್ನು ಚಲಾಯಿಸುವುದು ಜಗಳದ (quarrel) ಸಂಕೇತವೆಂದು ಏಕೆ ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯ ಹಿಂದಿನ ಕಾರಣವೇನು ಎಂದು ತಿಳಿದುಕೊಳ್ಳೋಣ. 

ಮನೆಯಲ್ಲಿ ಇರಿಸಲಾದ ಪ್ರತಿಯೊಂದು ವಸ್ತುವು ವಾಸ್ತುವಿಗೆ (Vastu) ಸಂಬಂಧಿಸಿರುವಂತೆ, ಮನೆಯಲ್ಲಿರುವ ಪ್ರತಿಯೊಂದು ಸಣ್ಣ ವಸ್ತುವು ಗ್ರಹಗಳಿಗೆ ಸಂಬಂಧಿಸಿದೆ. ಆ ವಸ್ತುವಿನ ಬಳಕೆ ಅಥವಾ ನಿರ್ವಹಣೆಯ ಮೇಲೆ ಗ್ರಹಗಳ ಪ್ರಭಾವವು ಅವಲಂಬಿತವಾಗಿರುತ್ತದೆ ಎಂಬ ನಂಬಿಕೆ ಇದೆ. 
 

ಮನೆಯಲ್ಲಿರುವ ಎಲ್ಲಾ ಚೂಪಾದ ವಸ್ತುಗಳು ರಾಹು ಗ್ರಹಕ್ಕೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಹಾಗೆಯೇ ಕತ್ತರಿ ಕೂಡ ರಾಹು ಗ್ರಹಕ್ಕೆ ಸಂಬಂಧಿಸಿದೆ. ರಾಹುವನ್ನು ಪಾಪದ ಗ್ರಹವೆಂದು ಪರಿಗಣಿಸಲಾಗಿದೆ, ಇದರಿಂದಾಗಿ ಹೆಚ್ಚಿನ ಅಡ್ಡಪರಿಣಾಮಗಳು ಕಂಡುಬರುತ್ತವೆ. 
 

ಖಾಲಿ ಕತ್ತರಿಯನ್ನು ಚಲಾಯಿಸಿದ್ರೆ ರಾಹುವಿನ ಅಶುಭ ಪರಿಣಾಮದಿಂದಾಗಿ, ಮನೆಯ ಶಾಂತಿ ಭಂಗಗೊಳ್ಳುತ್ತದೆ ಮತ್ತು ಮನೆಯಲ್ಲಿ ಘರ್ಷಣೆ ಉಂಟಾಗುತ್ತದೆ. ಜೊತೆಗೆ ಮನೆಯಲ್ಲಿ ಜಗಳಕ್ಕೆ ಕಾರಣವಾಗುತ್ತದೆ (no peace at home) ಎಂದು ನಂಬಲಾಗಿದೆ, ಇದರ ಆಧಾರವೂ ರಾಹು. ಖಾಲಿ ಕತ್ತರಿ ರಾಹುವಿನ ಕೆಟ್ಟ ಪರಿಣಾಮಗಳನ್ನು ಉತ್ತೇಜಿಸುತ್ತವೆ.

ಈ ಕಾರಣಕ್ಕಾಗಿ, ಮನೆಯ ಹಿರಿಯರು ಖಾಲಿ ಕತ್ತರಿ ಚಲಾಯಿಸೋದನ್ನು ನಿರಾಕರಿಸುತ್ತಾರೆ. ಕತ್ತರಿಯನ್ನು ಸುಮ್ಮನೆ ಬಳಸದೇ ಇದ್ದರೆ ಇದರಿಂದ ರಾಹುವಿನ ಕೆಟ್ಟ ಪರಿಣಾಮಗಳನ್ನು (effect of Rahu) ತಪ್ಪಿಸಬಹುದು ಮತ್ತು ಮನೆಯಲ್ಲಿ ಯಾವುದೇ ಸಂಘರ್ಷವಿರೋದಿಲ್ಲ. ಇದು ಮಾತ್ರವಲ್ಲ, ಕತ್ತರಿಯನ್ನು ಯಾವಾಗಲೂ ಯಾರಿಗೂ ಗೋಚರಿಸದ ಸ್ಥಳದಲ್ಲಿ ಇಡಬೇಕು.

ಮನೆಯಲ್ಲಿ, ಕತ್ತರಿಯನ್ನು (scissors) ಯಾವಾಗಲೂ ಕೆಂಪು ಬಟ್ಟೆಯಲ್ಲಿ ಸುತ್ತಿ ಮರೆಮಾಡಬೇಕು. ಕೆಂಪು ಬಟ್ಟೆಯು ಕೆಂಪು ಬಣ್ಣವು ರಾಹುವಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಯಾರಿಗೂ ಕತ್ತರಿಯನ್ನು ನೀಡುವುದು, ಉಡುಗೊರೆ ನೀಡೋದು ಸಹ ತಪ್ಪು ಎನ್ನಲಾಗಿದೆ.

click me!