ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಕಾಪಾಡಿಕೊಳ್ಳಲು ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲದಕ್ಕೂ ಸೂಕ್ತ ಸ್ಥಳವನ್ನು ಮೊದಲೇ ನಿರ್ಧರಿಸಲಾಗುತ್ತೆ. ಮನೆ ನಿರ್ಮಿಸುವಾಗ ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ವಾಸ್ತು ಪ್ರಕಾರ, ಮನೆಯ ತಪ್ಪು ದಿಕ್ಕಿನಲ್ಲಿ ನಿರ್ಮಿಸಲಾದ ಸ್ನಾನಗೃಹವು(Bathroom) ಹಣದ ನಷ್ಟ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ನಾನಗೃಹಕ್ಕೆ ಸಂಬಂಧಿಸಿದ ಅನೇಕ ವಾಸ್ತು ನಿಯಮಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ. ಅದರ ಸಹಾಯದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತೆ.
ಮನೆಯೊಳಗಿನ ಬಾತ್ ರೂಮ್ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಸ್ನಾನಗೃಹವನ್ನು ದಕ್ಷಿಣ, ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬಾರದು.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆ(Kitchen) ಮತ್ತು ಸ್ನಾನಗೃಹ ಎಂದಿಗೂ ಮುಖಾಮುಖಿ ಅಥವಾ ಪಕ್ಕದಲ್ಲಿರಬಾರದು. ಟಾಯ್ಲೆಟ್ ಸೀಟ್ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು
ಸ್ನಾನಗೃಹದಲ್ಲಿ ಇರಿಸಲಾದ ಬಕೆಟ್(Bucket) ಅಥವಾ ಟಬ್ ಯಾವಾಗಲೂ ತುಂಬಿರಬೇಕು. ಬಕೆಟ್ ಖಾಲಿಯಾಗಿದ್ದರೆ, ಅದನ್ನು ತಲೆಕೆಳಗಾಗಿ ತಿರುಗಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡೋದರಿಂದ, ಮನೆಯಲ್ಲಿ ಸಮೃದ್ಧಿ ಉಳಿಯುತ್ತೆ. ಯಾವುದೇ ಕೆಟ್ಟ ಪರಿಣಾಮ ಉಂಟಾಗೋದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ನೀಲಿ ಬಣ್ಣವು ಸಂತೋಷವನ್ನು ಸೂಚಿಸುತ್ತೆ, ಆದ್ದರಿಂದ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಗಳನ್ನು ಸ್ನಾನಗೃಹದಲ್ಲಿ ಇಡಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ಬಾತ್ ರೂಮ್ ಬಾಗಿಲಿನ ಮುಂದೆ ಕನ್ನಡಿಗಳನ್ನು(Mirror) ಸ್ಥಾಪಿಸಬಾರದು. ಹೀಗೆ ಮಾಡೋದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತೆ.
ಸ್ನಾನಗೃಹದ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಗಳನ್ನು ಇರಿಸಿ ಮತ್ತು ಕನ್ನಡಿ ಚೌಕಾಕಾರ ಅಥವಾ ಆಯತಾಕಾರವಾಗಿರಬೇಕು. ವಾಸ್ತು ಪ್ರಕಾರ, ರೌಂಡ್(Round) ಅಥವಾ ಓವಲ್ ಆಕಾರದ ಕನ್ನಡಿಗಳನ್ನು ಉತ್ತಮವೆಂದು ಪರಿಗಣಿಸಲಾಗೋದಿಲ್ಲ.
ಯಾವಾಗಲೂ ಬಾತ್ ರೂಮ್ ಬಾಗಿಲುಗಳನ್ನು ಮುಚ್ಚಿಡಿ. ಸ್ನಾನಗೃಹದ ತೆರೆದ ಬಾಗಿಲು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತೆ . ಇದು ನಿಮ್ಮ ವೃತ್ತಿಜೀವನದಲ್ಲಿ ವಿವಿಧ ರೀತಿಯ ಅಡೆತಡೆಗಳನ್ನು ಸೃಷ್ಟಿಸಬಹುದು. ಆದುದರಿಂದ ಯಾವಾಗಲೂ ಬಾತ್ ರೂಮ್ ಬಾಗಿಲು ಮುಚ್ಚಿರುವಂತೆ ನೋಡಿಕೊಳ್ಳೋದು ಮುಖ್ಯ.
ಬಾತ್ ರೂಂ ನಲ್ಲಿಯನ್ನು(Tap) ಒಡೆಯಬಾರದು. ನಿಮ್ಮ ಮನೆಯ ನಲ್ಲಿ ಪೈಪ್ ಸೋರುತ್ತಿದ್ದರೆ ಅದು ಹಣದ ನಷ್ಟಕ್ಕೆ ಕಾರಣವಾಗಬಹುದು.
ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತೆ ಮತ್ತು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತೆ. ಕೆಲಸ ಮುಗಿದ ನಂತರ ಬಾತ್ ರೂಮ್ ಒಣಗಿಸಬೇಕು.
ಸ್ವಿಚ್ ಬೋರ್ಡ್, ಗೀಸರ್, ಫ್ಯಾನ್ ಮುಂತಾದ ವಿದ್ಯುತ್ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಸ್ಥಾಪಿಸಬೇಕು.
ಸ್ನಾನಗೃಹಕ್ಕೆ ಯಾವಾಗಲೂ ತಿಳಿ ಬಣ್ಣದ ಟೈಲ್ಸ್ ಮತ್ತು ತಿಳಿ ಬಣ್ಣ ಬಳಸಿ.
ಸ್ನಾನಗೃಹದಲ್ಲಿ ಕಿಟಕಿ((Window) ಇರುವುದು ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತೆ. ಅಲ್ಲದೆ, ಕಿಟಕಿಯನ್ನು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ತೆರೆಯಬೇಕು.