ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಇಂದೇ ಈ ಕೆಲಸ ಮಾಡಿ

First Published Aug 23, 2022, 7:25 PM IST

ಪ್ರತಿಯೊಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರಬಾರದು ಮತ್ತು ಅದೃಷ್ಟ ತುಂಬಿರಬೇಕು ಎಂದು ಬಯಸ್ತಾರೆ. ಇದಕ್ಕಾಗಿ, ಕಷ್ಟಪಟ್ಟು ದುಡಿಯೋದರ ಜೊತೆಗೆ, ಅನೇಕ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತೆ. ಆದರೆ ಇಷ್ಟೆಲ್ಲ ಮಾಡಿಯೂ ವ್ಯಕ್ತಿಯು ಅನೇಕ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡೋದು ಅನ್ನೋದು ಗೊತ್ತಾದಲ್ಲ. ಭಯ ಬಿಡಿ. ಬದಲಾಗಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ನೀವು ಏನು ಮಾಡಬಹುದು ಅನ್ನೋದನ್ನು ನಾವು ನೋಡೋಣ. 
 

ಕಠಿಣ ಪರಿಶ್ರಮದ ಹೊರತಾಗಿಯೂ ಒಬ್ಬ ವ್ಯಕ್ತಿ ಯಶಸ್ಸನ್ನು ಸಾಧಿಸದಿದ್ದರೆ, ತಾಯಿ ಲಕ್ಷ್ಮಿ(Goddess Lakshmi) ಅಥವಾ ಗ್ರಹಗಳ ಅನುಗ್ರಹದ ಕೊರತೆಯಿಂದಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಈ ಸಮಸ್ಯೆಗಳಿಂದಾಗಿ, ವ್ಯಕ್ತಿಯು ನಿರಂತರ ಆರ್ಥಿಕ ಸಂಕಷ್ಟ, ಮನೆಯಲ್ಲಿ ಕಲಹ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಂತಹ ಅನೇಕ ಸಮಸ್ಯೆ ಎದುರಿಸಬೇಕಾಗುತ್ತೆ. 
 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಆರ್ಥಿಕ ಬಿಕ್ಕಟ್ಟುನ್ನು ತೊಡೆದುಹಾಕಲು ಬಯಸಿದರೆ, ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಕೆಲವು ವಸ್ತುಗಳನ್ನು ಸುರಕ್ಷಿತವಾಗಿಡೋದು ಶುಭಕರವಾಗಿರುತ್ತೆ. ಹೀಗೆ ಮಾಡೋದ್ರಿಂದ, ನಿಮ್ಮ ಮನೆಯಲ್ಲಿ ಎಂದಿಗೂ ಹಣದ(Money) ಕೊರತೆ ಇರೋದಿಲ್ಲ ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ, ಸಂತೋಷ ಮತ್ತು ಸಮೃದ್ಧಿ ನಿಮ್ಮದಾಗುತ್ತೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಸುರಕ್ಷಿತವಾಗಿಡೋದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವಸ್ತುಗಳನ್ನು (Things) ಸುರಕ್ಷಿತವಾಗಿಡುವ ಮೂಲಕ, ತಾಯಿ ಲಕ್ಷ್ಮಿಯ ಅನುಗ್ರಹವು ಯಾವಾಗಲೂ ನಿಮ್ಮ  ಮೇಲೆ ಉಳಿಯುತ್ತೆ ಎಂದು ನಂಬಲಾಗಿದೆ. ಯಾವ ವಿಷಯಗಳನ್ನು ಸುರಕ್ಷಿತವಾಗಿಡೋದಾನ್ನು ಶುಭವೆಂದು ಪರಿಗಣಿಸಲಾಗುತ್ತೆ ಎಂದು ತಿಳಿಯೋಣ.

ಅರಿಶಿನ ಉಂಡೆ
ಅರಿಶಿನದ ಉಂಡೆಯನ್ನು ಸುರಕ್ಷಿತವಾಗಿ ಇಡೋದು ಶುಭವೆಂದು ಪರಿಗಣಿಸಲಾಗಿದೆ. ಅರಿಶಿನದ ಉಂಡೆಯನ್ನು ಸುರಕ್ಷಿತವಾಗಿ ಇಡೋದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತೆ  ಎಂದು ನಂಬಲಾಗಿದೆ. ಅರಿಶಿನವನ್ನು(Turmeric) ಹಿಂದೂ ಧರ್ಮದಲ್ಲಿ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಸಹ ಬಳಸಲಾಗುತ್ತೆ. ಹಣದ ಲಾಭಕ್ಕಾಗಿ, ಶುಕ್ರವಾರ ಕೆಂಪು ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಸುತ್ತಿಡಿ.

ಕೆಂಪು ಬಟ್ಟೆ(Red cloth)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಂಪು ಬಣ್ಣವು ಲಕ್ಷ್ಮಿ ದೇವಿಗೆ ಹೆಚ್ಚು ಪ್ರಿಯವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ ಶುಕ್ರವಾರ, 11 ಅಥವಾ 21 ರೂಪಾಯಿಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಡಿ. ಇದನ್ನು ಮಾಡೋದರಿಂದ, ಹಣವನ್ನು ಗಳಿಸಬಹುದಾಗಿದೆ .

ತಾವರೆ ಹೂವು(Lotus)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಮಲದ ಹೂವು ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾದದು. ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ಕಮಲದ ಹೂವುಗಳನ್ನು ಅರ್ಪಿಸಿ. ಇದರೊಂದಿಗೆ, ಕಮಲದ ಹೂವನ್ನು ಸುರಕ್ಷಿತವಾಗಿ ಇರಿಸಿ. ಹೂವುಗಳು ಒಣಗಿದ ತಕ್ಷಣ, ಅವುಗಳನ್ನು ತೆಗೆದುಹಾಕಿ ಮತ್ತು ತಾಜಾ ಹೂವುಗಳನ್ನು ಇರಿಸಿಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಕಮಲದ ಹೂವನ್ನು ಸುರಕ್ಷಿತವಾಗಿ ಇಡುವ ಮೂಲಕ, ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಬಹುದು.

ನಾಣ್ಯ(Coins)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಣ್ಯವನ್ನು ಸುರಕ್ಷಿತವಾಗಿ ಇಡೋದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಶುಕ್ರವಾರ, ಹುಣ್ಣಿಮೆ, ದೀಪಾವಳಿ ಅಥವಾ ಧನ್ ತೇರಸ್ ದಿನ ಪೂಜೆ ಮಾಡಿದ ನಂತರ, ನೀವು ಒಂದು ನಾಣ್ಯವನ್ನು ಖಜಾನೆಯಲ್ಲಿ ಇಡಬಹುದು. ಹೀಗೆ ಮಾಡೋದರಿಂದ, ನೀವು ಯಾವಾಗಲೂ ಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತೀರಿ.
 

click me!