ಹೊಸ ಮನೆಯಲ್ಲಿ ಹ್ಯಾಪಿಯಾಗಿರಲು ಖರೀದಿಗೂ ಮುನ್ನ ಈ ವಿಷ್ಯ ನೆನಪಿಡಿ

First Published Aug 21, 2022, 6:35 PM IST

ಮನೆಯನ್ನು ಖರೀದಿಸುವ ಯೋಜನೆ ನಡೆಯುತ್ತಿದೆ ಮತ್ತು ಮನೆ, ಫ್ಲ್ಯಾಟ್ ಗಾಗಿ ಹುಡುಕಾಟದಲ್ಲಿದ್ದರೆ, ಕೇವಲ ಕೊಠಡಿಗಳ ವಿನ್ಯಾಸ ಮತ್ತು ಗಾತ್ರವನ್ನು ನೋಡಿ ಬುಕ್ ಮಾಡಬೇಡಿ. ಮನೆಯನ್ನು ಖರೀದಿಸುವಾಗ, ನೀವು ವಾಸ್ತುವಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಪರಿಗಣಿಸಬೇಕು. ಇದು ನಿಮ್ಮ ಮನೆಯನ್ನು ನಿಮಗೆ ಅದೃಷ್ಟ ಮತ್ತು ಸಮೃದ್ಧಿ ಹೆಚ್ಚಿಸುವ ತಾಣವಾಗಿ ಬದಲಾಯಿಸುತ್ತೆ. ಇನ್ನು ಮುಂದೆ ಮನೆ ಖರೀದಿಸುವ ಯೋಚನೆ ಇದ್ದರೆ, ಮನೆಯೊಳಗಿನ ಮತ್ತು ಮನೆಯ ಹೊರಗಿನ ವಾಸ್ತು ಬಗ್ಗೆ ಗಮನ ಹರಿಸೋದು ತುಂಬಾನೆ ಮುಖ್ಯ.

ಮನೆಯನ್ನು ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ವಾಸ್ತು ದೋಷದ ಬಗ್ಗೆ ತಿಳಿದಿದೆ. ಆದರೆ, ವಾಸ್ತು ದೋಷವು ಮನೆಯ ಒಳಗೆ ಮಾತ್ರ ಕಂಡುಬರುತ್ತೆ ಎಂದು ಹೆಚ್ಚಿನ ಜನ ಅಂದ್ಕೊಡಿದ್ದಾರೆ. ಹಾಗೂ ವಾಸ್ತುವಿನ ಸಹಾಯದಿಂದ, ನಾವು ಅದನ್ನು ಸರಿಪಡಿಸುತ್ತೇವೆ, ಆದರೂ ಕೆಲವೊಮ್ಮೆ ಸಮಸ್ಯೆಗಳಿಂದ ಪರಿಹಾರ ಸಿಗೋದಿಲ್ಲ. ಇದಕ್ಕೆ ಮನೆಯ ಹೊರಗಿನ ವಾಸ್ತು ದೋಷವೂ ಕಾರಣವಾಗಿರಬಹುದು. 

ಮನೆಯ ಹೊರಗಿನ ವಾಸ್ತು ದೋಷವು ಮನೆಯಲ್ಲಿ ವಾಸಿಸುವ ಸದಸ್ಯರ ಜೀವನದಲ್ಲಿ ಸಮಸ್ಯೆಯನ್ನುಂಟು ಮಾಡುತ್ತೆ ಮತ್ತು ಜನರ ಪ್ರಗತಿಗೆ ಅಡ್ಡಿಪಡಿಸುತ್ತದೆ. ಆದ್ದರಿಂದ, ನೀವು ಮನೆ ಖರೀದಿಸುವಾಗ ಅಥವಾ ನಿರ್ಮಿಸುವಾಗ, ಅದರ ಸುತ್ತಲಿನ ವಾಸ್ತುವಿನ ಬಗ್ಗೆಯೂ ಗಮನ ಹರಿಸಬೇಕು. ಮನೆಯನ್ನು ತೆಗೆದುಕೊಳ್ಳುವಾಗ ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಮನೆಯ ಹತ್ತಿರ ಧಾರ್ಮಿಕ ಸ್ಥಳ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಸಮೀಪದಲ್ಲಿ ಧಾರ್ಮಿಕ ಸ್ಥಳವಿದ್ದರೆ, ಅದರ ಶಕ್ತಿಯು ತುಂಬಾ ಧನಾತ್ಮಕ ಮತ್ತು ಅತ್ಯುನ್ನತ ಮಟ್ಟದಲ್ಲಿರುತ್ತದೆ. ಈ ಸ್ಥಳಗಳ ಶಕ್ತಿಯು ಎಷ್ಟು ಧನಾತ್ಮಕವಾಗಿದೆಯೆಂದರೆ (positive energy), ಅದರ ಸಂಪರ್ಕವು ಮಾನವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಧಾರ್ಮಿಕ ಸ್ಥಳದ ಸುತ್ತಲೂ ವಾಸಿಸುವಾಗ ವ್ಯಕ್ತಿಯ ಜೀವನವು ಒತ್ತಡದಿಂದ ಕೂಡಿರುತ್ತದೆ.

ಮನೆಯ ಬಳಿ ಮರ ಅಥವಾ ಕಂಬ
ವಾಸ್ತು ಪ್ರಕಾರ. ಮನೆಯ ಬಳಿ ಯಾವುದೇ ಮರ ಅಥವಾ ಸ್ತಂಭವನ್ನು ಹೊಂದಿರುವುದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಹೀಗಿದ್ದರೆ, ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿಯೂ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.  ಆದುದರಿಂದ ದೊಡ್ಡ ದೊಡ್ಡ ಮರಗಳು ಇರದಂತೆ ನೋಡಿ.

ಮನೆ ಸಮೀಪದ ಆಸ್ಪತ್ರೆ
ಆಸ್ಪತ್ರೆಯು ಮನೆಯ ಸುತ್ತಲೂ ಅಥವಾ ಮುಂದೆ ಇರಬಾರದು. ಏಕೆಂದರೆ, ಅನಾರೋಗ್ಯಕರ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.ಆದುದರಿಂದ ಆಸ್ಪತ್ರೆಯ ಸುತ್ತಲು ನೆಗೆಟಿವಿಟಿ (negativity) ಹೆಚ್ಚಾಗಿರುತ್ತೆ. ಈ ಅನಾರೋಗ್ಯಕರ ಜನರ ಕಾರಣದಿಂದಾಗಿ, ಅಲ್ಲಿ ನಕಾರಾತ್ಮಕ ಶಕ್ತಿಯ ಮಟ್ಟವು ತುಂಬಾ ಹೆಚ್ಚಾಗಿರುತ್ತೆ. ಈ ಕಾರಣದಿಂದಾಗಿ ಆಸ್ಪತ್ರೆ ಸುತ್ತಲೂ ವಾಸಿಸುವ ಜನರು ಜೀವನವನ್ನು ಶಾಂತಿಯುತವಾಗಿ ಕಳೆಯಲು ಎಂದಿಗೂ ಸಾಧ್ಯವಾಗೋದಿಲ್ಲ.

ಹಳೆಯ ಕಟ್ಟಡಗಳು ಮನೆಯ ಹತ್ತಿರ ಇರಬಾರದು.
ಮನೆಯ ಸುತ್ತಲೂ ಹಳೆಯ ಕಟ್ಟಡಗಳಿರೋದನ್ನು ನೀವು ಅನೇಕ ಬಾರಿ ನೋಡಿರಬಹುದು. ಇಂತಹ ಜಾಗದಲ್ಲಿ ಮನೆ ಇರೋದು ಒಳ್ಳೆಯದಲ್ಲ. ಕಟ್ಟಡಗಳು ರಾಜ ಮಹಾರಾಜರ ಕಾಲದ್ದಾಗಿದ್ದರೆ ಮತ್ತು ಅದು ಮುಚ್ಚಲ್ಪಟ್ಟಿದ್ದರೆ, ಅಂತಹ ಸ್ಥಳದಲ್ಲಿಯೂ ಸಹ ನಕಾರಾತ್ಮಕ ಶಕ್ತಿಯು ತುಂಬಾ ಹೆಚ್ಚಾಗಿರುತ್ತದೆ.

 ಟಿ-ಪಾಯಿಂಟ್ ನಲ್ಲಿ ಮನೆ ಇರಬಾರದು
ಮನೆ ಎಂದಿಗೂ ಟಿ-ಪಾಯಿಂಟ್ ನಲ್ಲಿ (T point) ಇರಬಾರದು. ಅಂದರೆ, ಮೂರು ಬೀದಿಗಳು ಅಥವಾ ಮೂರು ರಸ್ತೆಗಳು ಸಂಧಿಸುವ ಸ್ಥಳದಲ್ಲಿ, ಮನೆ ಇರೋದು ಶುಭವೆಂದು ಪರಿಗಣಿಸಲಾಗೋದಿಲ್ಲ. ಅಂತಹ ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಉತ್ತಮ ರಿಸಲ್ಟ್ ಪಡೆಯುವುದಿಲ್ಲ.

click me!