ಕರಿಯರ್ ಯಶಸ್ಸಿಗಾಗಿ ಈ ಪ್ರಾಣಿಗಳ ಮೂರ್ತಿಗಳನ್ನು ಮನೆಯಲ್ಲಿರಿಸಿ

First Published | Apr 27, 2023, 4:18 PM IST

ಜ್ಯೋತಿಷ್ಯದಲ್ಲಿ ಪ್ರಾಣಿಗಳು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿವೆ. ಏಕೆಂದರೆ ಪ್ರತಿಯೊಂದು ಪ್ರಾಣಿಯು ಕೆಲವು ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ, ಗ್ರಹಕ್ಕೆ ಅನುಗುಣವಾಗಿ ಆ ಗ್ರಹಕ್ಕೆ ಸಂಬಂಧಿಸಿದ ಪ್ರಾಣಿಯ ವಿಗ್ರಹವನ್ನು ಮನೆಯಲ್ಲಿ ಇಡೋದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಜ್ಯೋತಿಷ್ಯ ತಜ್ಞರು ಯಾವ ಪ್ರಾಣಿ ವಿಗ್ರಹಗಳನ್ನು ಮನೆಯಲ್ಲಿ ಇಡಲು ಶುಭ ಮತ್ತು ಪ್ರಯೋಜನಕಾರಿ ಎಂದು ಹೇಳಿದ್ದಾರೆ ನೋಡೋಣ. 

ಒಂಟೆಯ(Camel) ಪ್ರತಿಮೆ
ಒಂಟೆಯನ್ನು ಹೋರಾಟ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಒಂಟೆ ವಿಗ್ರಹ ಇಡುವುದು ಯಶಸ್ಸಿಗೆ ಅಡ್ಡಿಯಾಗುವ ದೋಷಗಳನ್ನು ತೆಗೆದುಹಾಕುತ್ತೆ. ಕೈಹಾಕಿದ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುವಂತೆ ಮಾಡುತ್ತೆ.

ಹಸುವಿನ (Cow) ಪ್ರತಿಮೆ
ಹಸುವನ್ನು ಎಲ್ಲಾ ದೇವರು ಮತ್ತು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಆದ್ದರಿಂದ, ಹಸುವಿನ ವಿಗ್ರಹವನ್ನು ಮನೆಯಲ್ಲಿ ಇಡುವುದು ಸಂತೋಷ, ನೆಮ್ಮದಿ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತೆ. ಮಗುವಿನ ಹಣೆಬರಹ ಉತ್ತಮವಾಗುತ್ತೆ ಎಂದು ನಂಬಲಾಗಿದೆ. 

Tap to resize

ಜಿಂಕೆಗಳ(Deer) ಪ್ರತಿಮೆ
ಜಿಂಕೆ ಚಂಚಲವಾಗಿರುತ್ತೆ ಆದರೆ ಇದು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಿಪುಣವಾದ ಪ್ರಾಣಿ. ಮನೆಯಲ್ಲಿ ಜಿಂಕೆಗಳ ವಿಗ್ರಹವನ್ನು ಇಡೋದರಿಂದ, ನೌಕರಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ ಎಂದು ವಾಸ್ತುವಿನಲ್ಲಿ ತಿಳಿಸಲಾಗಿದೆ. 

ಆನೆಯ(Elephant) ಪ್ರತಿಮೆ
ಆನೆಯನ್ನು ಬುದ್ಧಿವಂತಿಕೆ, ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಮನೆಯಲ್ಲಿ ಆನೆ ಪ್ರತಿಮೆಯನ್ನು ಇಡುವುದು ಸಕಾರಾತ್ಮಕತೆಯನ್ನು ತರುತ್ತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತಿಯನ್ನು ನೀಡುತ್ತೆ. 

ಸಿಂಹದ(Lion) ಪ್ರತಿಮೆ
ಮನೆಯಲ್ಲಿ ಸಿಂಹದ ಪ್ರತಿಮೆಯನ್ನು ಇಡುವುದು ವ್ಯಕ್ತಿಯಲ್ಲಿ ಧೈರ್ಯವನ್ನು ತುಂಬುತ್ತೆ, ವ್ಯಕ್ತಿಯ ನಿರ್ಧಾರ ಶಕ್ತಿಯನ್ನು ಬಲಪಡಿಸುತ್ತೆ ಮತ್ತು ವ್ಯಕ್ತಿತ್ವದಲ್ಲಿ ತೀಕ್ಷ್ಣತೆಯನ್ನು ಉಂಟುಮಾಡುತ್ತೆ. 

ಕೋತಿಯ(Monkey) ಪ್ರತಿಮೆ
ಮನೆಯಲ್ಲಿ ಮಂಗನ ಪ್ರತಿಮೆಯನ್ನು ಇಡುವುದು ಬುದ್ಧಿವಂತಿಕೆಯನ್ನು ತರುತ್ತೆ, ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಆತ್ಮಸಾಕ್ಷಿ ಉಳಿಯುತ್ತೆ ಮತ್ತು ಯಾವುದೇ ಹೊಸ ಪ್ರಾರಂಭವು ಹಣ ಗಳಿಕೆಯ ಅವಕಾಶಗಳನ್ನು ಸೃಷ್ಟಿಸುತ್ತೆ.

ಹಾವಿನ(Snake) ಪ್ರತಿಮೆ
ಮನೆಯಲ್ಲಿ ಹಾವಿನ ಪ್ರತಿಮೆಯನ್ನು ಇಡುವುದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತೆ ಮತ್ತು ವ್ಯಕ್ತಿಯಲ್ಲಿ ದೃಢನಿಶ್ಚಯವನ್ನು ಹೆಚ್ಚಿಸುತ್ತೆ. ಹಾವಿನ ಪ್ರತಿಮೆಯ ಪರಿಣಾಮವು ಕೆಲಸದ ಸ್ಥಳದಲ್ಲಿ ಯಶಸ್ಸನ್ನು ನೀಡುತ್ತೆ.

ಪಕ್ಷಿಯ ಪ್ರತಿಮೆ(Birds idol)
ಜೋಡಿ ಹಕ್ಕಿಗಳ ವಿಗ್ರಹವನ್ನು ಮನೆಯಲ್ಲಿ ಇಡುವುದು ವೈವಾಹಿಕ ಜೀವನದ ತೊಂದರೆಗಳನ್ನು ತೆಗೆದುಹಾಕುತ್ತೆ, ಕುಟುಂಬದಲ್ಲಿ ಪರಸ್ಪರ ಸಾಮರಸ್ಯವನ್ನು ಹೆಚ್ಚಿಸುತ್ತೆ ಮತ್ತು ವಿವಾದಮತ್ತು ಘರ್ಷಣೆಗಳನ್ನು ತೆಗೆದುಹಾಕುತ್ತೆ ಎಂದು ಹೇಳಲಾಗುತ್ತೆ. 

ಆದ್ದರಿಂದ ಈ ಪ್ರಾಣಿಗಳ ವಿಗ್ರಹಗಳು(Idols) ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಯಶಸ್ಸು ಮತ್ತು ವೃತ್ತಿಜೀವನದ ಪ್ರಯೋಜನಗಳನ್ನು ಪಡೆಯಬಹುದು.

Latest Videos

click me!