ಮನೆ ಬಾಡಿಗೆಗೆ ಪಡೆಯಲು ಯೋಚಿಸುತ್ತಿದ್ರೆ, ವಾಸ್ತು ಬಗ್ಗೆ ತಿಳಿಯಿರಿ

First Published | Apr 25, 2023, 5:02 PM IST

ಮನೆಯನ್ನು ಬಾಡಿಗೆಗೆ ತೆಗೆದುಕೊಂಡಾಗಲೆಲ್ಲಾ, ಕಚೇರಿಯಿಂದ ದೂರ, ಸ್ಥಳ, ಸೌಲಭ್ಯಗಳು ಮುಂತಾದ ವಿಷಯಗಳ ಬಗ್ಗೆ ನಾವು ಸಂಪೂರ್ಣ ಕಾಳಜಿ ವಹಿಸುತ್ತೇವೆ. ಆದರೆ ವಾಸ್ತು ದೋಷದ ಬಗ್ಗೆ ಕಾಳಜಿ ವಹಿಸಲು ಮರೆಯುತ್ತಾರೆ. ಸರಳವಾಗಿ ಹೇಳೋದಾದ್ರೆ,  ಅದನ್ನು ನಿರ್ಲಕ್ಷಿಸುತ್ತಾರೆ. ಈ ನಿರ್ಲಕ್ಷ್ಯವು ಕೆಲವೊಮ್ಮೆ ತುಂಬಾ ದುಬಾರಿಯಾಗುತ್ತೆ.

ವಾಸ್ತು ದೋಷಗಳಿಂದಾಗಿ(Vastu dosha), ವೃತ್ತಿ ಮತ್ತು ವ್ಯವಹಾರದಲ್ಲಿ ಅಸ್ಥಿರತೆ ಇದ್ಯಾ, ಕುಟುಂಬದ ಒಬ್ಬ ಸದಸ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನಾ, ಸಮಸ್ಯೆ ಹೆಚ್ಚಾಗುತ್ತಾ ಮತ್ತು ಆದಾಯ ಕಡಿಮೆಯಾಗುತ್ತಿದ್ಯಾ. ಇದಕ್ಕಾಗಿ, ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವಾಗ ವಾಸ್ತು ನಿಯಮಗಳನ್ನು ಅನುಸರಿಸಬೇಕು. ನೀವು ಸಹ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೋಗುತ್ತಿದ್ದರೆ, ಈ ನಿಯಮಗಳನ್ನು ಅನುಸರಿಸಿ.

ಮನೆಯನ್ನು ಬಾಡಿಗೆಗೆ(Rent) ಪಡೆದಾಗಲೆಲ್ಲಾ, ಈಶಾನ್ಯ ದಿಕ್ಕಿನಲ್ಲಿ ಯಾವುದೇ ಶೌಚಾಲಯಗಳು ಇರಬಾರದು ಎಂಬುದು ನೆನಪಿನಲ್ಲಿಡಿ. ಶೌಚಾಲಯಗಳು ಪಶ್ಚಿಮ ದಿಕ್ಕಿನಲ್ಲಿರಬೇಕು. ಇಲ್ಲವಾದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಲು ಆರಂಭವಾಗುತ್ತೆ. ಹಾಗಾಗಿ ಈ ಬಗ್ಗೆ ಗಮನ ಹರಿಸೋದು ಮುಖ್ಯ. 

Latest Videos


ಹಾಗೆಯೇ, ಅಡುಗೆಮನೆ (Kitchen) ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿರಬಾರದು. ಬಾಡಿಗೆ ಮನೆಯಲ್ಲಿ ಮಲಗುವ ಕೋಣೆ ನೈಋತ್ಯ ದಿಕ್ಕಿನಲ್ಲಿರಬೇಕು. ಅದೇ ಸಮಯದಲ್ಲಿ, ಮುಖ್ಯ ಬಾಗಿಲು ಉತ್ತರ ದಿಕ್ಕಿನಲ್ಲಿರಬೇಕು.

ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಮೊದಲು ಮನೆಯಲ್ಲಿ ಸಕಾರಾತ್ಮಕ ಚಿತ್ರವನ್ನು ಇರಿಸಿ. ಇದಕ್ಕಾಗಿ, ಮನೆಯಲ್ಲಿ ಪರ್ವತ, ಸೂರ್ಯ ಮತ್ತು ಜಲಪಾತಗಳು ಇತ್ಯಾದಿಗಳ ಚಿತ್ರಗಳನ್ನು ಇರಿಸಿ. ಇದಲ್ಲದೆ, ಮನೆಯಲ್ಲಿ ಧೂಪ(Dhoop), ದೀಪ, ಅಗರಬತ್ತಿ ಕಡ್ಡಿಗಳು ಮುಂತಾದ ಪರಿಮಳಯುಕ್ತ ವಸ್ತುಗಳನ್ನು ಬೆಳಗಿಸಿ. 

ಮುರಿದ ಪೀಠೋಪಕರಣಗಳು ಮತ್ತು ಅನಗತ್ಯ ವಸ್ತುಗಳನ್ನು ಹೊಸ ಮನೆಯಲ್ಲಿ ಇಡಬೇಡಿ. ಅಲ್ಲದೆ, ಮನೆಯಲ್ಲಿ ಮುರಿದ ಫೋಟೋ, ಫ್ರೇಮ್ ಮತ್ತು ಗಾಜನ್ನು ತೆಗೆದುಹಾಕಿ. ಮುರಿದ ಗಾಜು(Broken glass) ಇದ್ದರೆ, ಅದನ್ನು ತೆಗೆದುಹಾಕಿ. ಇಲ್ಲವಾದರೆ ಮನೆಯಲ್ಲಿ ನೆಗೆಟಿವಿಟಿ ಹೆಚ್ಚಾಗುತ್ತೆ. 

ವಾಸ್ತು ತಜ್ಞರ ಪ್ರಕಾರ, ಸ್ಮಶಾನ, ಆಸ್ಪತ್ರೆ, ಸಂಚಾರ ಪ್ರದೇಶ, ಜನದಟ್ಟಣೆಯ ಪ್ರದೇಶಗಳಲ್ಲಿ ಬಾಡಿಗೆ ಮನೆಯನ್ನು ತೆಗೆದುಕೊಳ್ಳಬೇಡಿ. ಹಾಗೆಯೇ, ಮನೆಯ ಸುತ್ತಲೂ ಮೊಬೈಲ್ ಟವರ್(Mobile tower) ಅಥವಾ ವಿದ್ಯುತ್ ಕಂಬ ಇರಬಾರದು. ಈ ಎಲ್ಲಾ ವಿಷಯಗಳು ಶಕ್ತಿಯ ಹರಿವನ್ನು ನಿಲ್ಲಿಸುತ್ತವೆ.

ಮನೆಯನ್ನು ಬಾಡಿಗೆಗೆ ಪಡೆದಾಗಲೆಲ್ಲಾ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬರಬೇಕು ಎಂಬ ಒಂದು ವಿಷಯವನ್ನು ನೆನಪಿನಲ್ಲಿಡಿ. ನಕಾರಾತ್ಮಕ ಶಕ್ತಿ(Negativity) ಬಂದರೆ, ಮನೆಯಲ್ಲಿ ಉದ್ವಿಗ್ನತೆ ಮತ್ತು ವಿವಾದ ಉಂಟಾಗುತ್ತೆ. ಮನೆ ಗಾಳಿ ಮತ್ತು ಬೆಳಕಿನಿಂದ ಕೂಡಿರಬೇಕು. ಹಾಗಾಗಿ ಇವೆಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಿ.  

click me!