ವಾಸ್ತು ಶಾಸ್ತ್ರದ ಪ್ರಕಾರ, ಆರ್ಥಿಕ ಪ್ರಗತಿ ಮನೆಯ ಪೂರ್ವ ದಿಕ್ಕು ಮತ್ತು ಈಶಾನ್ಯ ಕೋನಕ್ಕೆ ನೇರವಾಗಿ ಸಂಬಂಧಿಸಿದೆ. ವಾಸ್ತು (Vaastu) ತಜ್ಞರ ಪ್ರಕಾರ, ಈ ದಿಕ್ಕುಗಳಲ್ಲಿ ವಾಸ್ತು ದೋಷವಿದ್ದರೆ, ವ್ಯಕ್ತಿಯ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಹಾಗೆಯೇ ಈ ದಿಕ್ಕುಗಳನ್ನು ತಪ್ಪಾಗಿ ಬಳಸೋದರಿಂದ ವ್ಯಕ್ತಿ ಆರ್ಥಿಕ ಬಿಕ್ಕಟ್ಟಿನಲ್ಲಿಯೂ ಸಿಲುಕಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಯಶಸ್ವಿ ವೃತ್ತಿಜೀವನ ಮತ್ತು ಆರ್ಥಿಕ ಸಮೃದ್ಧಿಗಾಗಿ ಈ ದಿಕ್ಕುಗಳನ್ನು ಹೇಗೆ ಬಳಸಬೇಕು?
ನೀಲಿ ಪಿರಮಿಡ್ (Blue pyramid)
ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಪಿರಮಿಡ್ ಹೊಂದಿರುವುದು ತುಂಬಾ ಮಂಗಳವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಮಾಡೋದರಿಂದ, ಮನೆಯಲ್ಲಿ ಹಣದ ಕೊರತೆಯಿರೋಲ್ಲ. ನೀವು ಒಮ್ಮೆ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಪಿರಮಿಡ್ ಇಟ್ಟು ನೋಡಿ.
ಗಾಜಿನ(Glass) ಬಟ್ಟಲು
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕಿನಲ್ಲಿ ಗಾಜಿನ ಬಟ್ಟಲನ್ನು ಇಡಬೇಕು ಮತ್ತು ಇದರೊಂದಿಗೆ ಬೆಳ್ಳಿಯ ನಾಣ್ಯವನ್ನುೂ ಸಹ ಬಟ್ಟಲಿನಲ್ಲಿ ಇಡಬೇಕು. ಹೀಗೆ ಮಾಡೋದರಿಂದ, ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಮನೆಯಲ್ಲಿ ಉಳಿಯುತ್ತೆ.
ತುಳಸಿ (Tulasi) ಮತ್ತು ನೆಲ್ಲಿಕಾಯಿ
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡಬೇಕು. ಇದರೊಂದಿಗೆ ನೆಲ್ಲಿ ಮರವನ್ನು ನೆಡುವುದು ಸಹ ಒಳ್ಳೆಯದು. ಇದು ಕುಟುಂಬವು ಆರ್ಥಿಕವಾಗಿ ಪ್ರಗತಿ (Progress) ಹೊಂದಲು ಸಹಾಯ ಮಾಡುತ್ತೆ.
ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹ
ವಾಸ್ತು ಪ್ರಕಾರ, ಗಣೇಶ (Lord Ganesh) ಮತ್ತು ತಾಯಿ ಲಕ್ಷ್ಮಿ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರೊಂದಿಗೆ, ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳ ಮುಂದೆ ಪ್ರತಿದಿನ ದೀಪಗಳನ್ನು ಬೆಳಗಿಸಬೇಕು. ಇದನ್ನು ಮಾಡೋದರಿಂದ, ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ.
ಉತ್ತರ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿನ ಅಧಿಪತಿ ಕುಬೇರ. ಅವನನ್ನು ಸಂಪತ್ತಿನ ದೇವರು ಎಂದು ಕರೆಯಲಾಗುತ್ತೆ. ಮನೆಯ ಈ ದಿಕ್ಕಿನಲ್ಲಿ ಒಂದು ತಿಜೋರಿಯನ್ನು (Locker) ಇರಿಸಬೇಕು. ಹೀಗೆ ಮಾಡೋದರಿಂದ, ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಇರೋದಿಲ್ಲ.