Vastu Tips For Gold: ಮನೆಯಲ್ಲಿ ಚಿನ್ನ ಉಳಿಯದಿರಲು ಈ ದೋಷವೇ ಕಾರಣವಿರಬಹುದೇ?

Published : Nov 17, 2025, 01:27 PM IST

Kannada Vastu Tips News: ಸಂಪತ್ತಿನ ಸಂಕೇತವಾದ ಚಿನ್ನವು ಕೆಲವು ಮನೆಗಳಲ್ಲಿ ಉಳಿಯದಿರಲು ವಾಸ್ತು ದೋಷಗಳು ಮತ್ತು ಜ್ಯೋತಿಷ್ಯದ ಕಾರಣಗಳಿವೆ. ಚಿನ್ನವನ್ನು ತಪ್ಪು ದಿಕ್ಕಿನಲ್ಲಿ ಇಡುವುದು, ಸಾಲದ ಹಣದಿಂದ ಖರೀದಿಸುವುದು ಮತ್ತು ಜಾತಕದಲ್ಲಿ ಗ್ರಹಗಳ ದೌರ್ಬಲ್ಯವು ಇದಕ್ಕೆ ಪ್ರಮುಖ ಕಾರಣಗಳಾಗಿವೆ .

PREV
15
ಸಂಪತ್ತಿನ ದೇವತೆ ಲಕ್ಷ್ಮೀಯ ಸಂಕೇತ

ಹಿಂದೂ ಧರ್ಮದಲ್ಲಿ ಚಿನ್ನವನ್ನು ಸಂಪತ್ತಿನ ದೇವತೆ ಲಕ್ಷ್ಮೀಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಚಿನ್ನ ಖರೀದಿಸಬೇಕು ಅನ್ನೋದು ಬಹುತೇಕರ ಆಸೆಯಾಗಿರುತ್ತದೆ. ಆದ್ರೆ ಕೆಲವರಿಗೆ ಮಾತ್ರ ಚಿನ್ನ ಖರೀದಿಯ ಯೋಗವೇ ಬರಲ್ಲ. ಮತ್ತೊಂದಿಷ್ಟು ಮಂದಿ ಮನೆಯಲ್ಲಿರೋ ಚಿನ್ನವನ್ನು ಮಾರಾಟ ಮಾಡುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.

25
ಆಪತ್ಕಾಲದ ನೆಂಟ ಚಿನ್ನ

ಚಿನ್ನವನ್ನು ಆಪತ್ಕಾಲದ ನೆಂಟ ಮತ್ತು ದೀರ್ಘ ಸಮಯದವರೆಗೆ ಬಾಳಿಕೆ ಬರುವ ಸಂಪತ್ತು ಆಗಿದೆ. ಕೆಲವರು ಪದೇ ಪದೇ ಚಿನ್ನ ಕಳೆದುಕೊಳ್ಳುತ್ತಿರುತ್ತಾರೆ, ಆಭರಣಗಳು ಡ್ಯಾಮೇಜ್ ಆಗುತ್ತಿರುತ್ತವೆ, ಒಂದಲ್ಲ ಒಂದು ಕಾರಣಕ್ಕೆ ಮಾರಾಟ ಮಾಡುವ ಸಮಯ ಬರುತ್ತದೆ. ಇದಕ್ಕೆ ಕಾರಣ ಮನೆಯಲ್ಲಿ ಚಿನ್ನವನ್ನು ಸಂಗ್ರಹಿಸುವ ವಿಧಾನ ತಪ್ಪು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

35
ಚಿನ್ನ ಉಳಿಯದಿರಲು ಕಾರಣ ಏನು?

ಮನೆಯಲ್ಲಿ ಚಿನ್ನ ಉಳಿಯದಿರಲು ಕಾರಣ ಹಲವು ಧಾರ್ಮಿಕ ಮತ್ತು ಶಕ್ತಿಯುವ ಕಾರಣಗಳಿವೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ವಾಸ್ತು ಪ್ರಕಾರ ಚಿನ್ನವನ್ನು ಯಾವ ರೀತಿಯಲ್ಲಿ ಇರಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಈ ವಿಧಾನಗಳು ಚಿನ್ನ ಮನೆಯಲ್ಲಿ ಉಳಿಯಲು ಕಾರಣವಾಗುತ್ತದೆ.

45
ಎಲ್ಲಿ ಲಕ್ಷ್ಮೀ ದೇವಿ ನೆಲೆಸಲ್ಲ?

ಅಸ್ತವ್ಯಸ್ಥೆ, ಮುರಿದ ಪಾತ್ರೆ, ಕಸ/ಕೊಳಕು ಮತ್ತು ನಕಾರಾತ್ಮಕ ಶಕ್ತಿ ತುಂಬಿರುವ ಸ್ಥಳದಲ್ಲಿ ಲಕ್ಷ್ಮೀ ದೇವಿ ನೆಲೆಸಲ್ಲ. ಹಾಗಾಗಿ ಈ ಎಲ್ಲಾ ಲಕ್ಷಣಗಳಿರೋ ಮನೆಯಲ್ಲಿ ಚಿನ್ನ ತುಂಬಾ ದಿನ ಉಳಿಯಲ್ಲ. ವಾಸ್ತು ಶಾಸ್ತ್ರದಲ್ಲಿ ದಿಕ್ಕಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಚಿನ್ನ ಮತ್ತು ಬೆಳ್ಳಿಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಎಂದಿಗೂ ಇಡಬಾರದು. ಸಂಪತ್ತು ಮತ್ತು ಆಸ್ತಿ ಈ ದಿಕ್ಕುಗಳಲ್ಲಿ ಎಂದಿಗೂ ಸ್ಥಿರವಾಗಿರುವುದಿಲ್ಲ. ಈ ದಿಕ್ಕು ಹೊರತುಪಡಿಸಿ ಇನ್ನುಳಿದ ದಿಕ್ಕಿನಲ್ಲಿ ಚಿನ್ನವನ್ನು ಸ್ಟೋರ್ ಮಾಡಬೇಕಾಗುತ್ತದೆ.

ಇದನ್ನೂ ಓದಿ: Vastu Tips: ಕಾರಿನ ವಾಸ್ತು ರಹಸ್ಯ: ಹೀಗಿದ್ದರೆ ನಿಮ್ಮ ಪ್ರಯಾಣ ಸುರಕ್ಷಿತ!

55
ಯಾವ ಹಣದಿಂದ ಚಿನ್ನ ಖರೀದಿ ಮಾಡಬಾರದು?

ಎರವಲು ಪಡೆದ ಹಣ, ಸಾಲ ಅಥವಾ ಬಡ್ಡಿಯಿಂದ ಖರೀದಿಸಿದ ಚಿನ್ನವನ್ನು ಬಳಸುವುದು ಸಹ ಅಶುಭ ಅಂತ ಹೇಳಲಾಗುತ್ತದೆ. ಇಂತಹ ಹಣದಿಂದ ಬಂದ ಚಿನ್ನ ಮನೆಯಲ್ಲಿ ಎಂದಿಗೂ ಉಳಿಯುವುದಿಲ್ಲ ಮತ್ತು ಬದಲಾಗಿ ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ. ಜಾತಕದಲ್ಲಿ ಶುಕ್ರ ಮತ್ತು ಗುರು ದುರ್ಬಲರಾಗಿದ್ದರೆ ಚಿನ್ನ ಬಾಳಿಕೆ ಬರುವುದಿಲ್ಲ. ಒಂದು ವೇಳೆ ಖರೀದಿಸಿದ್ರೂ ಬಾಳಿಕೆ ಅಥವಾ ಹೆಚ್ಚು ದಿನ ಉಳಿಯಲ್ಲ ಎಂದು ಜ್ಯೋತಿಷಿ ಅನೀಶ್ ವ್ಯಾಸ್ ಹೇಳುತ್ತಾರೆ.

ಇದನ್ನೂ ಓದಿ: Traditional Beliefs: ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನ ತರಬಾರದಂತೆ

Read more Photos on
click me!

Recommended Stories