ಮನೆಯಲ್ಲಿ ನೆಲಮಾಳಿಗೆ ನಿರ್ಮಿಸಲು ಈ ವಾಸ್ತು ನಿಯಮ ಪಾಲಿಸಿ

First Published Jun 21, 2023, 5:41 PM IST

ನೆಲಮಾಳಿಗೆಗಳನ್ನು ನಿರ್ಮಿಸುವಾಗ ಜನರು ವಾಸ್ತು ನಿಯಮಗಳನ್ನು ನಿರ್ಲಕ್ಷಿಸುತ್ತಾರೆ, ಇದರಿಂದ ಅವರು ಭವಿಷ್ಯದಲ್ಲಿ ದೈಹಿಕ, ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಈ ಸ್ಟೋರಿಯನ್ನು ಒಮ್ಮೆ ಓದಿ ನೋಡಿ.   

ಇತ್ತೀಚೆಗೆ, ಮನೆ ಅಥವಾ ಅಂಗಡಿಯಲ್ಲಿ ನೆಲಮಾಳಿಗೆಗಳನ್ನು(Basement) ಮಾಡುವ ಟ್ರೆಂಡ್ ಇದೆ. ಜನರು ತಮ್ಮ ಜಾಗವನ್ನು ಗರಿಷ್ಠವಾಗಿ ಬಳಸಲು ನೆಲಮಾಳಿಗೆಗಳನ್ನು ನಿರ್ಮಿಸುತ್ತಾರೆ. ಆದರೆ ನೆಲಮಾಳಿಗೆಯನ್ನು ಮಾಡುವಾಗ ಕೆಲವು ವಾಸ್ತು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ ಎಂದು ನಿಮಗೆ ತಿಳಿದಿದ್ಯಾ? 

ವಾಸ್ತು(Vaastu) ಶಾಸ್ತ್ರದ ಪ್ರಕಾರ, ನೆಲಮಾಳಿಗೆಯಲ್ಲಿ ವಾಸ್ತು ನಿಯಮಗಳನ್ನು ನಿರ್ಲಕ್ಷಿಸಿದ್ರೆ, ಅದು ದುರಾದೃಷ್ಟಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ, ಮನೆಯಲ್ಲಿ ನೆಲಮಾಳಿಗೆಯನ್ನು ಮಾಡುವುದು ತುಂಬಾ ಒಳ್ಳೆಯದೇನಲ್ಲ. ಆದರೆ, ನೆಲಮಾಳಿಗೆ ಅಗತ್ಯವಿದ್ದರೆ, ಅದನ್ನು ನಿರ್ಮಿಸುವಾಗ ವಾಸ್ತು ನಿಯಮಗಳನ್ನು ನೆನಪಿನಲ್ಲಿಡಿ.

ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಲಮಾಳಿಗೆ ನಿರ್ಮಿಸುವುದು ಮಂಗಳಕರ.
ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಲಾದ ನೆಲಮಾಳಿಗೆ ಆರ್ಥಿಕ ನಷ್ಟ, ಸಾಲ ಮತ್ತು ಹಣದ(Money) ನಿರ್ಬಂಧಗಳನ್ನು ಸೃಷ್ಟಿಸುತ್ತೆ. ನೆಲಮಾಳಿಗೆಯಲ್ಲಿ ಗಾಳಿ ಮತ್ತು ಬೆಳಕಿನ ಸಾಕಷ್ಟು ವ್ಯವಸ್ಥೆ ಇರಬೇಕು.

ನೆಲಮಾಳಿಗೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು(Steps) ಹೊಂದಿರುವುದು ಮಂಗಳಕರ. ನೆಲಮಾಳಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಸಾಧ್ಯವಾದಷ್ಟು ನೆಲಮಾಳಿಗೆಯ ಮಧ್ಯದಲ್ಲಿ ಯಾವುದೇ ಕಂಬಗಳು ಇರದಂತೆ ನೋಡಿಕೊಳ್ಳಿ.

ನೆಲಮಾಳಿಗೆಯ ಪೂರ್ವ ಗೋಡೆಯ ಮೇಲೆ ಪೆಂಡುಲಿಮ್ ಗಡಿಯಾರವನ್ನು (Pendulum clock) ಇರಿಸಿ.
ವಾಸ್ತು ಪ್ರಕಾರ, ನೆಲಮಾಳಿಗೆಯ ಮುಖ್ಯ ದ್ವಾರದ ಮೇಲೆ ವಿಂಡ್ ಚೈಮ್ ಹಾಕುವುದು ಒಳ್ಳೇದು. ಇದನ್ನು ಮಾಡೋದರಿಂದ, ನೆಲಮಾಳಿಗೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಇರುತ್ತೆ ಎಂದು ಹೇಳಲಾಗುತ್ತೆ.

ನೆಲಮಾಳಿಗೆಯಲ್ಲಿ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಕಿಟಕಿಗಳನ್ನು ಹೊಂದಿರುವುದು ಅವಶ್ಯಕ, ಇದರಿಂದ ನೈಸರ್ಗಿಕ ಗಾಳಿ ಮತ್ತು ಬೆಳಕು ಪ್ರವೇಶಿಸಬಹುದು. ಗಾಳಿ ಮತ್ತು ಬೆಳಕು ಇದ್ದ ಕಡೆ ನಕಾರಾತ್ಮಕ ಶಕ್ತಿ(Negative energy) ಸಂಗ್ರಹವಾಗೋದಿಲ್ಲ. ಹಾಗಾಗಿ ಬೆಳಕಿನ ವ್ಯವಸ್ಥೆಯ ಕಡೆಗೆ ಗಮನ ಹರಿಸಿ. 
 

click me!