ಹಿಡಿ- ಮನೆಯಲ್ಲಿ ಇಲ್ಲಿಡಿ, 10 ನಿಯಮಗಳಿವೆ, ಮರೀಬೇಡಿ..

First Published | Aug 24, 2022, 4:04 PM IST

ಪೊರಕೆ ಅಂದ್ರೆ ಕೆಲವರಿಗೆ ತಾತ್ಸಾರ. ಕಸ ಗುಡಿಸುವುದಾದ್ದರಿಂದ ಅದು ಗಲೀಜು ಎಂದು ಭಾವಿಸುತ್ತಾರೆ. ಆದರೆ, ಅದೇ ಪೊರಕೆ ಕಸ ಗುಡಿಸದಿದ್ದರೆ ಮನೆಯೇ ಗಲೀಜು. ಪೊರಕೆಗೆ ಲಕ್ಷ್ಮಿಯ ಸ್ಥಾನವಿದೆ ಜ್ಯೋತಿಷ್ಯದಲ್ಲಿ. ವಾಸ್ತುವಿನಲ್ಲಿ ಕೂಡಾ ಇದಕ್ಕೆ ಮಹತ್ವವಿದೆ. ಪೊರಕೆಗೆ ಸಂಬಂಧಿಸಿದಂತೆ ಈ ನಿಯಮಗಳನ್ನು ಪಾಲಿಸೋದು ಮರೀಬೇಡಿ. 

ಪೊರಕೆಗೆ ಜ್ಯೋತಿಷ್ಯದಲ್ಲಿ ಲಕ್ಷ್ಮೀಯ ಸ್ಥಾನಮಾನವಿದೆ. ಏಕೆಂದರೆ ಪೊರಕೆ ಮನೆಯನ್ನು ಶುಚಿ ಮಾಡುತ್ತದೆ. ಶುಚಿಯಾಗಿರುವ ಮನೆಯಲ್ಲಿ ದರಿದ್ರ ಲಕ್ಷ್ಮಿಗೆ ಸ್ಥಳವಿರುವುದಿಲ್ಲ. ದರಿದ್ರ ಲಕ್ಷ್ಮಿ ಲಕ್ಷ್ಮೀ ಇರುವಲ್ಲಿ ಇರುವುದೂ ಇಲ್ಲ. ಇನ್ನು ಜಗತ್ತನ್ನು ಸ್ವಚ್ಛವಾಗಿರಿಸುವ ಪೊರಕೆಗೆ  ವಾಸ್ತುಶಾಸ್ತ್ರದಲ್ಲೂ ಸ್ಥಾನಮಾನವಿದೆ. ವಾಸ್ತುವು ಪೊರಕೆಯನ್ನಿಡುವ ದಿಕ್ಕು, ಕೋಣೆ ಎಲ್ಲದರ ಬಗ್ಗೆ ನಿಯಮ ಹೇಳುತ್ತದೆ. ಮತ್ತೆ ಕೆಲವು ನಂಬಿಕೆಗಳು ಪೊರಕೆಯ ಬಗ್ಗೆ ತಲೆತಲಾಂತರದಿಂದ ಬೆಳೆದು ಬಂದಿವೆ. 

ಪೊರಕೆಯ ಬಗ್ಗೆ ಹಲವಾರು ನಿಯಮಗಳಿವೆ..

ಎಲ್ಲಿಡಬೇಕು?
ಪೊರಕೆಯನ್ನು ಯಾರಿಗೂ ಕಾಣದ ಸ್ಥಳದಲ್ಲಿಡಬೇಕು. ಅಂದರೆ ಯಾವುದೋ ಮೂಲೆಯಲ್ಲಿ ಇಲ್ಲವೇ ಯಾವುದೋ ಬಾಗಿಲಿನ ಸಂಧಿಯಂಥ ಸ್ಥಳದಲ್ಲಿ ಪೊರಕೆ ಇಡಬೇಕು. 

Tap to resize

ಹೇಗಿಡಬೇಕು?
ಪೊರಕೆಯನ್ನು ಯಾವತ್ತೂ ತಲೆ ಕೆಳಗಾಗಿ ಇರಿಸಬಾರದು. ಪೊರಕೆಯನ್ನು ಗುಡಿಯುವ ಭಾಗ ಕೆಳಗೆ, ಹಿಡಿ ಮೇಲಿರುವಂತೆ ಇಡಬೇಕು. 
 

ರಾತ್ರಿ ಮನೆ ಹೊರಗಿಡಿ
ರಾತ್ರಿ ವೇಳೆ ಪೊರಕೆಯನ್ನು ಮನೆಯ ಹೊರಗೆ ಅಥವಾ ಮುಖ್ಯದ್ವಾರದ ಬಳಿಯಿಡಿ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸದಂತೆ ಪೊರಕೆ ನೋಡಿಕೊಳ್ಳುತ್ತದೆ. ಬೆಳಗ್ಗೆ ಮಾತ್ರ ಪೊರಕೆಯನ್ನು ಮನೆಯೊಳಗೇ ಇರಿಸಬೇಕು. 

ಛಾವಣಿ ಮೇಲಿಡಬೇಡಿ
ಪೊರಕೆಯನ್ನು ಮನೆಯ ನೈರುತ್ಯ ದಿಕ್ಕಿನಲ್ಲಿಡುವುದು ಉತ್ತಮ. ಯಾವುದೇ ಕಾರಣಕ್ಕೂ ಪೊರಕೆಯನ್ನು ಮನೆಯ ಛಾವಣಿಯ ಮೇಲೆ ಇಡಬೇಡಿ. ಹೀಗೆ ಮಾಡಿದರೆ ಮನೆಯಲ್ಲಿನ ಸಂಪತ್ತು ಕರಗುತ್ತದೆ. ಮನೆಯಲ್ಲಿನ ವಸ್ತುಗಳು ಕಳ್ಳತನವಾಗುತ್ತವೆ. 

ಹೊಸ ಮನೆಗೆ ಹಳೆಯ ಪೊರಕೆ ಬೇಡ
ಹೊಸ ಮನೆಗೆ ಶಿಫ್ಟ್ ಆಗುವಾಗ ಹಳೆಯ ಪೊರಕೆಯನ್ನು ಹಳೆ ಮನೆಯಲ್ಲೇ ಬಿಟ್ಟು ಹೋಗಬೇಕು. ಹೊಸ ಮನೆಗೆ ಹೊಸ ಪೊರಕೆಯನ್ನೇ ಕೊಂಡೊಯ್ಯಬೇಕು. 
 

ರಾತ್ರಿ ಗುಡಿಸಬೇಡಿ
ರಾತ್ರಿ ವೇಳೆ ಮನೆ ಗುಡಿಸಬಾರದು. ಸೂರ್ಯ ಮುಳುಗಿದ ಬಳಿಕ ಒಂದು ವೇಳೆ ಮನೆ ಗುಡಿಸಿದರೂ ಕಸವನ್ನು ಹೊರಗೆ ಎಸೆಯಬಾರದು. ಸಂಜೆ 5 ಗಂಟೆಯ ಬಳಿಕ ಪೊರಕೆ ಬಳಸುವುದು ಅಪಶಕುನ ಎಂಬ ನಂಬಿಕೆ ಇದೆ. ಇದಕ್ಕೆ ಕಾರಣ ಗೋಧೂಳಿ ಸಮಯದಲ್ಲಿ ಲಕ್ಷ್ಮೀ ಮನೆಯನ್ನು ಪ್ರವೇಶಿಸುತ್ತಾಳೆ ಎಂಬ ನಂಬಿಕೆ. ಅದಲ್ಲದೆ, ಹಿಂದೆಲ್ಲ ಕರೆಂಟ್ ಇಲ್ಲದ ಕಾಲದಲ್ಲಿ ಗುಡಿಸುವಾಗ ಮನೆಯ ಅಮೂಲ್ಯ ವಸ್ತುಗಳೂ ಜೊತೆಯಾಗಿ ಕಸದೊಂದಿಗೆ ತೊಟ್ಟಿ ಸೇರುತ್ತಿದ್ದವು. ಹಾಗಾಗಿ, ಸಂಜೆಯ ಮೇಲೆ ಗುಡಿಸಬಾರದು ಎಂಬ ನಂಬಿಕೆ ಬೆಳೆಯಿತು. 

ಅಡುಗೆಮನೆಯಲ್ಲಿ ಬೇಡ
ಅಡುಗೆ ಸಿದ್ಧಪಡಿಸುವ ಹಾಗೂ ಸೇವಿಸುವ ಸ್ಥಳದಲ್ಲಿ ಅಂದರೆ ಅಡುಗೆ ಕೋಣೆ ಹಾಗೂ ಡೈನಿಂಗ್ ಹಾಲ್‌ನಲ್ಲಿ ಪೊರಕೆಯನ್ನಿಡಬಾರದು. ಅಡುಗೆಮನೆಯಲ್ಲಿ ಪೊರಕೆಯಿಡುವುದರಿಂದ ಆಹಾರಧ್ಯಾನಗಳ ಕೊರತೆ ಕಾಡುತ್ತದೆ. ಇನ್ನು ಊಟ ಮಾಡುವ ಸ್ಥಳದಲ್ಲಿಟ್ಟರೆ ಮನೆಯ ಸದಸ್ಯರ ಆರೋಗ್ಯ ಹಾಳಾಗುತ್ತದೆ ಎನ್ನಲಾಗುತ್ತದೆ. 

ಅತಿಥಿಗಳು ಹಿಂತಿರುಗಿದ ತಕ್ಷಣ ಗುಡಿಸಬೇಡಿ
ಮನೆಗೆ ಬಂದಿರುವ ಅತಿಥಿಗಳು ಹೊರಟ ತಕ್ಷಣ ಗುಡಿಸುವುದು ಸಭ್ಯತೆಯಲ್ಲ. ಅಲ್ಲದೆ, ಹೀಗೆ ಮಾಡುವುದರಿಂದ ಆ ವ್ಯಕ್ತಿಗೆ ಅಪಘಾತ ಅಥವಾ ಇನ್ಯಾವುದಾದರೂ ಅವಘಢ ಎದುರಾಗುತ್ತದೆ ಎಂಬ ನಂಬಿಕೆಯೂ ಇದೆ. ಅದೇ ರೀತಿ ಮನೆಯ ಸದಸ್ಯ ಹೊರ ಹೋಗುವುದಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚೆಯೇ ಗುಡಿಸಿರಬೇಕು. ಅವರು ಹೊರಡುವ ಸಮಯದಲ್ಲಿ ಪೊರಕೆ ಹೊರ ತೆಗೆದಿರಬಾರದು. 

ಪೊರಕೆ ಈ ದಿನ ಕೊಳ್ಳಬೇಕು
ಕೃಷ್ಣಪಕ್ಷವು ಪೊರಕೆ ಕೊಳ್ಳಲು ಅತ್ಯಂತ ಶುಭವಾದ ದಿನ. ಈ ಪಕ್ಷದಲ್ಲಿ ಪೊರಕೆ ಕೊಳ್ಳುವುದರಿಂದ ಲಕ್ಷ್ಮೀ ದೇವತೆ ನಿಮ್ಮ ಮನೆಗೆ ಆಗಮಿಸುತ್ತಾಳೆ. ಸಕಾರಾತ್ಮಕ ಶಕ್ತಿಗಳು ಮನೆಯನ್ನು ಬೆಳಗುತ್ತವೆ. ದೀಪಾವಳಿ ಕೂಡ ಪೊರಕೆ ಕೊಳ್ಳಲು ಶುಭ ಸಮಯ. ಶುಕ್ಲಪಕ್ಷದಲ್ಲಿ ಪೊರಕೆ ಕೊಂಡರೆ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶಿಸುತ್ತವೆ.

Latest Videos

click me!