ಫ್ರಿಜ್ ಒಳಗೆ ಆಹಾರ ಇಟ್ರೆ ಫ್ರಿಜ್ ಬಾಗಿಲಿಗೆ ಸುಂದರ ಮ್ಯಾಗ್ನೆಟ್ ಗಳು ಗಮನ ಸೆಳೆಯುತ್ವೆ. ಫ್ರೀಜ್ ಬಾಗಿಲ ಮೇಲಿರುವ ಮ್ಯಾಗ್ನೆಟ್, ಫೋಟೋ, ಮಕ್ಕಳ ಚಿತ್ರ, ಕಾರ್ಟೂನ್ ಸ್ಟಿಕ್ಕರ್ ಕೂಲ್ ಅನುಭವ ನೀಡಿದ್ರೂ ನೆಮ್ಮದಿ ಹಾಳು ಮಾಡುತ್ತದೆ. ಈ ವಸ್ತುಗಳು ನಿಮ್ಮ ಬಾಳಿಗೆ ದೌರ್ಭಾಗ್ಯ ತರುತ್ತವೆ.
ವಾಸ್ತು ಶಾಸ್ತ್ರ ಸಂಪೂರ್ಣವಾಗಿ ಕಾಂತೀಯ ಅಲೆಗಳು ಮತ್ತು ದಿಕ್ಕುಗಳ ಸಮತೋಲನದ ಮೇಲೆ ಕಾರ್ಯನಿರ್ವಹಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಕಬ್ಬಿಣ ಅಥವಾ ಉಕ್ಕಿನಂತಹ ಲೋಹಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು ರಾಹು ಮತ್ತು ಶನಿಯ ಪ್ರಭಾವದಲ್ಲಿರುತ್ತವೆ. ನೀವು ರೆಫ್ರಿಜರೇಟರ್ ಮೇಲೆ ಮ್ಯಾಗ್ನೆಟ್ ಇಟ್ಟಾಗ ಅದು ಇಡೀ ಪ್ರದೇಶದ ಕಾಸ್ಮಿಕ್ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ತಪ್ಪು ಚಿತ್ರ ಅಥವಾ ಬಣ್ಣ ಹೊಂದಿರುವ ಮ್ಯಾಗ್ನೆಟ್ ಅನ್ನು ಅಲ್ಲಿ ಇರಿಸಿದರೆ, ರಾಹುವಿನ ನಕಾರಾತ್ಮಕ ಪ್ರಭಾವ ಸಕ್ರಿಯಗೊಳ್ಳುತ್ತದೆ. ಇದು ಮನೆಯ ಸಮೃದ್ಧಿಗೆ ಅಡ್ಡಿಯಾಗುತ್ತದೆ.
27
ಫ್ರಿಜ್ ಕಸದ ಬುಟ್ಟಿ ಮಾಡ್ಬೇಡಿ
ಹಿಂದೂ ಧರ್ಮದಲ್ಲಿ, ಅಡುಗೆಮನೆಯನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಅಡುಗೆ ಮನೆಯಲ್ಲಿ ಹೆಚ್ಚು ತಾಮಸಿಕ, ಕೃತಕ ಅಥವಾ ಜಂಕ್ ವಸ್ತುಗಳನ್ನು ಸಂಗ್ರಹಿಸುವುದು ಅನ್ನಪೂರ್ಣೆಗೆ ಕೋಪ ತರಿಸುತ್ತದೆ. ಫ್ರಿಜ್ ಬಾಗಿಲನ್ನು ಸಂಪೂರ್ಣವಾಗಿ ಮ್ಯಾಗ್ನೆಟ್ ನಿಂದ ತುಂಬಿದ್ರೆ ಅದನ್ನು ನಿರ್ಬಂಧಿಸಲಾದ ಶಕ್ತಿ ಎಂದು ವಾಸ್ತುಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಇದು ಅಡುಗೆಮನೆಯಿಂದ ಬರುವ ಸಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಮನೆ ಆರೋಗ್ಯ ಹಾಳಾಗುತ್ತದೆ.
37
ಈ ಚಿತ್ರ ಬೇಡ
ನೀವು ಹಿಂಸಾತ್ಮಕ ಜೀವಿಗಳು ಅಥವಾ ಯುದ್ಧದ ಫೋಟೋಗಳನ್ನು ಫ್ರಿಜ್ ಮೇಲೆ ಹಾಕಬೇಡಿ. ಸಿಂಹ, ಚಿರತೆ, ಹದ್ದುವಿನಂತಹ ಜೀವಿಗಳ ಫೋಟೋವನ್ನು ಅಪ್ಪಿತಪ್ಪಿಯೂ ಹಾಕಬೇಡಿ. ಯಾವುದೇ ಯುದ್ಧ ಆಯುಧವನ್ನು ಸೂಚಿಸುವ ಮ್ಯಾಗ್ನೆಟ್ ಗಳು ಮನೆಯಲ್ಲಿ ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತವೆ. ಇದು ಕುಟುಂಬ ಸದಸ್ಯರಲ್ಲಿ ಅನಗತ್ಯ ಕೋಪ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ.
ದುಃಖ ಅಥವಾ ವಿಚಿತ್ರ ಮುಖದ ಎಮೋಜಿಗಳನ್ನು ಹೊಂದಿರುವ ಮ್ಯಾಗ್ನೆಟ್ ಗಳನ್ನು ಫ್ರಿಜ್ ಬಾಗಿಲಿಗೆ ಹಾಕಬೇಡಿ. ಧಾರ್ಮಿಕ ಗ್ರಂಥಗಳ ಪ್ರಕಾರ, ಅಡುಗೆಮನೆ ಅಥವಾ ಆಹಾರ ಪ್ರದೇಶದ ಬಳಿ ಅಂತಹ ನಕಾರಾತ್ಮಕ ಚಿತ್ರಗಳನ್ನುಇಡುವುದು ಮಾನಸಿಕ ಖಿನ್ನತೆ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ.
57
ಮುಳ್ಳಿನ ಸಸ್ಯ
ಪಾಪಾಸುಕಳ್ಳಿ ಅಥವಾ ಸತ್ತ ಮರಗಳ ಸ್ಟಿಕ್ಕರ್ಗಳು ಮತ್ತು ಮ್ಯಾಗ್ನೆಟ್ ಗಳು ಫ್ರಿಜ್ ಬಾಗಿಲಿಗಿದ್ದರೆ ಅದನ್ನು ಈಗ್ಲೇ ತೆಗೆದುಹಾಕಿ. ಇದು ನಿಮ್ಮ ಜೀವನಕ್ಕೆ ಸಾಕಷ್ಟು ಅಡೆತಡೆ ಸೃಷ್ಟಿಸುತ್ತವೆ. ಇದು ಮಕ್ಕಳ ಶಿಕ್ಷಣ ಮತ್ತು ವಯಸ್ಕರ ಪ್ರಗತಿಗೆ ಅಡ್ಡಿಯಾಗುತ್ತದೆ.
67
ಹಾಳಾದ ಮ್ಯಾಗ್ನೆಟ್
ಫ್ರಿಜ್ ಗೆ ಈಗಾಗಲೇ ಆಯಸ್ಕಾಂತ ಹಾಕಿದ್ದು, ಅದು ಹಾಳಾಗಿದ್ದರೆ ಅದನ್ನು ತಕ್ಷಣ ಕಸಕ್ಕೆ ಎಸೆಯಬೇಕು. ಹಾಳಾದ, ಮುರಿದ ಮ್ಯಾಗ್ನೆಟ್ ರಾಹು ದೋಷ ಮತ್ತು ಹಠಾತ್ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
77
ಫ್ರಿಜ್ ಬಾಗಿಲಿಗೆ ಈ ವಸ್ತು ಇಡಿ
ಫ್ರಿಜ್ ಮ್ಯಾಗ್ನೆಟ್ಗಳು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆ ಆಕರ್ಷಿಸಬೇಕು ಎಂದಾದ್ರೆ ನೀವು ಶುಭ ಲಾಭ, ಸ್ವಸ್ತಿಕ, ರಿದ್ಧಿ-ಸಿದ್ಧಿ ಅಥವಾ ಹ್ಯಾಪಿ ಹೋಮ್ನಂತಹ ಸಕಾರಾತ್ಮಕ ಸಂದೇಶಗಳನ್ನು ಹೊಂದಿರುವ ಆಯಸ್ಕಾಂತಗಳನ್ನು ಫ್ರಿಜ್ ಮೇಲೆ ಇರಿಸಿ. ಹಣ್ಣು, ಹೂವು ಮತ್ತು ಹಸಿರು ಬಣ್ಣದ ಅಲಂಕಾರದ ಆಯಸ್ಕಾಂತಗಳನ್ನು ವಾಸ್ತುದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ನಗುತ್ತಿರುವ ಮುಖಗಳು, ಚಿಟ್ಟೆಗಳು ಅಥವಾ ಪ್ರಶಾಂತ ಪ್ರಕೃತಿಯ ಸುಂದರವಾದ ಚಿತ್ರಗಳನ್ನು ಹೊಂದಿರುವ ಆಯಸ್ಕಾಂತಗಳು ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತವೆ.