ಒಬ್ಬ ವ್ಯಕ್ತಿ ಯಶಸ್ವಿಯಾಗೋದರ (Successful) ಜೊತೆಗೆ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿರಬೇಕಾದ್ರೆ, ಅವನು ಬಲಶಾಲಿಯಾಗಿರೋದು ಬಹಳ ಮುಖ್ಯ . ಅನೇಕ ಬಾರಿ ಸಾಕಷ್ಟು ಕಠಿಣ ಪರಿಶ್ರಮದ ನಂತರವೂ ಯಶಸ್ಸನ್ನು ಪಡೆಯೋದಿಲ್ಲ. ಯಾಕೆ ಹೀಗಾಗುತ್ತೆ ಎಂದು ನೀವು ಯೋಚ್ನೆ ಮಾಡಿದ್ದೀರಾ? ಆತ್ಮವಿಶ್ವಾಸವು ನಿಮ್ಮ ವೈಫಲ್ಯಕ್ಕೆ ಕಾರಣವಾಗಿರಬಹುದು.
ಆತ್ಮವಿಶ್ವಾಸವಿದ್ದರೆ(Self confidence), ಒಬ್ಬ ವ್ಯಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಜಯಶಾಲಿಯಾಗಬಹುದು. ನೀವು ಸಹ ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದರೆ, ಈ ವಾಸ್ತು ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸಲು ಯಾವ ವಾಸ್ತು ಪರಿಹಾರಗಳು ಪ್ರಯೋಜನಕಾರಿ ಎಂದು ತಿಳಿಯಿರಿ.
ಹವಳ(Coral) ರತ್ನದ ಕಲ್ಲುಗಳನ್ನು ಧರಿಸಿ
ಒಬ್ಬ ವ್ಯಕ್ತಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಹವಳದ ರತ್ನಗಳನ್ನು ಧರಿಸಬಹುದು. ಹವಳ ರತ್ನದ ಕಲ್ಲಿನ ಅಧಿಪತಿ ಮಂಗಳ. ಆದ್ದರಿಂದ, ಈ ರತ್ನವನ್ನು ಧರಿಸೋದರಿಂದ ಮಂಗಳ ಗ್ರಹವನ್ನು ಬಲಪಡಿಸುತ್ತೆ. ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ.
ಲಿವಿಂಗ್ ರೂಮಿನಲ್ಲಿ ಈ ಚಿತ್ರಗಳನ್ನು ಇರಿಸಿ
ಲಿವಿಂಗ್ ರೂಮಿನಲ್ಲಿ ಉದಯಿಸುತ್ತಿರುವ ಸೂರ್ಯ ಅಥವಾ ಓಡುತ್ತಿರುವ ಕುದುರೆಯ(Running horse) ಚಿತ್ರವನ್ನು ನೀವು ಹಾಕಬಹುದು. ಹೀಗೆ ಮಾಡೋದರಿಂದ ಮನೆಯ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತೆ. ಇದರೊಂದಿಗೆ, ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.
ಹಸುವಿಗೆ(Cow) ಆಹಾರ ನೀಡಿ
ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸೋದು ಬುಧ ಗ್ರಹದ ಸ್ಥಾನವನ್ನು ಬಲಪಡಿಸುತ್ತೆ. ಇದರೊಂದಿಗೆ, ಮನಸ್ಸು ಶಾಂತವಾಗಿರುತ್ತೆ . ಇದು ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸಲು ಸಹಾಯ ಮಾಡುತ್ತೆ.
ಸೂರ್ಯನನ್ನು(Sun) ಪೂಜಿಸಿ
ಆತ್ಮವಿಶ್ವಾಸವನ್ನು ಹೆಚ್ಚಿಸಲು, ಬೆಳಿಗ್ಗೆ ಬೇಗನೆ ಎದ್ದು ಉದಯಿಸುವ ಸೂರ್ಯನನ್ನು ಪೂಜಿಸಿ. ಇದರೊಂದಿಗೆ, 'ಆದಿತ್ಯ ಹೃದಯ ಸೂತ್ರ'ವನ್ನು ನಿಯಮಿತವಾಗಿ ಪಠಿಸಿ. ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸೋದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೆ.
ಕಿಟಕಿಗಳನ್ನು(Windows) ತೆರೆದಿಡಿ.
ನಿಮ್ಮ ಮನೆಯ ಕಿಟಕಿಗಳನ್ನು ತೆರೆದಿಡಲು ಪ್ರಯತ್ನಿಸಿ. ಹಾಗೆ ಮಾಡೋದರಿಂದ ಸಕಾರಾತ್ಮಕ ಶಕ್ತಿ ಬರುತ್ತೆ. ಇದರೊಂದಿಗೆ, ಕಿಟಕಿಯ ಮುಂದೆ ನೇರವಾಗಿ ಕುಳಿತುಕೊಳ್ಳಬೇಡಿ ಎಂಬುದನ್ನು ನೆನಪಿನಲ್ಲಿಡಿ, ಏಕೆಂದರೆ ಇದು ಶಕ್ತಿಯನ್ನು ತೆಗೆದುಹಾಕುತ್ತೆ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತೆ.
ಗಾಯತ್ರಿ ಮಂತ್ರ(Gayatri Mantra) ಪಠಿಸಿ
ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಪಠಿಸಿ. ನಿಮ್ಮ ಆಸನದ ಹಿಂದೆ ಪರ್ವತದ ಚಿತ್ರವನ್ನು ಇರಿಸಿ. ಈ ಟಿಪ್ಸ್ ಫಾಲೋ ಮಾಡೋದ್ರಿಂದ ಹೇಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ ನೀವೇ ನೋಡಿ!