ಈ ಹೊಸ ವರ್ಷವನ್ನು ಹೊಸತನದಿಂದ ತುಂಬಿರುವಂತೆ ಮಾಡಲು ಚೀನಿ ವಾಸ್ತು ಶಾಸ್ತ್ರ ಫೆಂಗ್ ಶುಯಿ (feng shui) ಪ್ರಕಾರ ಮನೆಗೆ ಚೀನಿ ವಾಸ್ತು ನಾಣ್ಯಗಳನ್ನು ತರೋದು ಶುಭ.
ಫೆಂಗ್ ಶುಯಿ ಪ್ರಕಾರ ಈ ನಾಣ್ಯವನ್ನು ನೀವು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ (main entrance) ತೂಗು ಹಾಕಿದರೆ ಅದರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.
ಫೆಂಗ್ ಶುಯಿ ಪ್ರಕಾರ ಈ ಚೀನಿ ನಾಣ್ಯವನ್ನು (chinese coin) ಮನೆಗೆ ತರೋದರಿಂದ ಮನೆಯಲ್ಲಿ ಯಾವಾಗಲೂ ಸಂತೋಷ (Happiness), ಸಮೃದ್ಧಿ (Prosperity) ತುಂಬಿರುತ್ತದೆ ಎಂದು ಹೇಳಲಾಗುವುದು.
ಚೀನಿ ವಾಸ್ತು ಶಾಸ್ತ್ರದ (Chinees Vastu Tips) ಪ್ರಕಾರ ಮನೆಯ ಮುಂದೆ ಈ ನಾಣ್ಯವನ್ನು ನೇತು ಹಾಕುವುದು ಸಂಪತ್ತು ಸಮೃದ್ಧಿಯಾಗುವ ಪ್ರತೀಕ. ಹಣದ ಸಮಸ್ಯೆ ಹಾಧಿಸುತ್ತಿದ್ದರೆ, ಇದನ್ನು ಮನೆ ಎದುರು ಹಾಕೋದು ಉತ್ತಮ.
ಫೆಂಗ್ ಶುಯಿ ಹೇಳುವಂತೆ ನೀವು ಸಹ ಈ ಚೀನಿ ನಾಣ್ಯಗಳನ್ನು ಮನೆಯ ಎದುರು ನೇತು ಹಾಕಲು ಬಯಸಿದರೆ ಅದನ್ನು ಕೆಂಪು ದಾರ (Red Thread) ಅಥವಾ ರಿಬ್ಬನ್ ಮೂಲಕವೇ ಕಟ್ಟೋದು ನಿಯಮ. ನಂತರ ಮೂರು ನಾಣ್ಯಗಳ (3 coins) ಜೊತೆಗೆ ಇದನ್ನು ಮುಂಬಾಗಿಲಿಗೆ ನೇತು ಹಾಕಿ.
ಹೀಗೆ ಮಾಡೋದರಿಂದ ನಿಮ್ಮ ಜೀವನದಲ್ಲಿ ಸಂತೋಷ ತುಂಬಿರುತ್ತದೆ ಎನ್ನುವ ನಂಬಿಕೆ ಇದೆ. ಅಷ್ಟೇ ಅಲ್ಲ, ಹಣದ ಸಮಸ್ಯೆ (money problem) ಸಹ ಎಂದಿಗೂ ಕಾಡೋದಿಲ್ಲ ಎಂದು ಸಹ ನಂಬಲಾಗಿದೆ.
ನೀವು ಯಾವುದಾದರೂ ಬ್ಯುಸಿನೆಸ್ ಮಾಡುತ್ತಿದ್ದು, ನಿಮ್ಮ ಆರ್ಥಿಕತೆ ಏರಲು ಬಯಸುತ್ತಿದ್ದರೆ, ಕೂಡಲೇ ನಿಮ್ಮ ಅಂಗಡಿ, ಮಳಿಗೆ ಅಥವಾ ಕಚೇರಿ ಮುಂಬಾಗಿಲಿಗೆ ಈ ನಾಣ್ಯವನ್ನು ನೇತು ಹಾಕಿ.